ರ‍್ಯಾಪಿಡ್ ರಸ್ತೆ ಬಿರುಕುಗಳ ಕುರಿತು ವರದಿಗಾಗಿ ಕಾಯುತ್ತಿದ್ದೇವೆ: ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ರ‍್ಯಾಪಿಡ್ ರಸ್ತೆ ಯೋಜನೆ ಅನುಷ್ಠಾನದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಮೊದಲು ಐಐಎಸ್‌ಸಿಯ ತನಿಖಾ ವರದಿಗಾಗಿ ಕಾಯುತ್ತಿದ್ದೇವೆ ಎಂದು ಶುಕ್ರವಾರ ಹೇಳಿದ್ದಾರೆ.
ತುಷಾರ್ ಗಿರಿನಾಥ್
ತುಷಾರ್ ಗಿರಿನಾಥ್

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ರ‍್ಯಾಪಿಡ್ ರಸ್ತೆ ಯೋಜನೆ ಅನುಷ್ಠಾನದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಮೊದಲು ಐಐಎಸ್‌ಸಿಯ ತನಿಖಾ ವರದಿಗಾಗಿ ಕಾಯುತ್ತಿದ್ದೇವೆ ಎಂದು ಶುಕ್ರವಾರ ಹೇಳಿದ್ದಾರೆ.

ತಂತ್ರಜ್ಞಾನ ಪಾಲುದಾರರಾಗಿರುವ ಗುತ್ತಿಗೆದಾರ ಅಲ್ಟ್ರಾಟೆಕ್ ಸಹ ಬಿರುಕು ಕಾಣಿಸಿಕೊಂಡಿರುವ ಪ್ರದೇಶದಲ್ಲಿ ಸ್ವತಂತ್ರ ಅಧ್ಯಯನವನ್ನು ಕೈಗೊಂಡಿದೆ ಎಂದು ಅವರು ಹೇಳಿದರು. ಇದೇ ತಂತ್ರಜ್ಞಾನವನ್ನು ಮಾನ್ಯತಾ ಟೆಕ್ ಪಾರ್ಕ್‌ನಲ್ಲಿ ರಸ್ತೆ ಕಾಮಗಾರಿಗೆ ಬಳಸಲಾಗಿದೆ ಎಂಬ ವರದಿಗಳ ನಂತರ ಈ ಪ್ರಕಟಣೆ ಬಂದಿದ್ದು, ರ‍್ಯಾಪಿಡ್ ರಸ್ತೆ ಯೋಜನೆಗಳ ಬಗ್ಗೆ ಪ್ರಶ್ನೆಗಳನ್ನು ಎತ್ತಲಾಗಿದ್ದು, ಐಐಎಸ್‌ಸಿಯ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮೌಲ್ಯಮಾಪನ ವರದಿ ಬಂದ ನಂತರವಷ್ಟೇ ನಿರ್ಧಾರ ತೆಗೆದುಕೊಳ್ಳಬಹುದು ಎಂದು ಗಿರಿನಾಥ್ ಟಿಎನ್‌ಐಇಗೆ ತಿಳಿಸಿದರು.

ಬಿಬಿಎಂಪಿಯ ಇಂಜಿನಿಯರ್ ಇನ್ ಚೀಫ್ ಬಿಎಸ್ ಪ್ರಹ್ಲಾದ್ ಮಾತನಾಡಿ, ಇಂಜಿನಿಯರಿಂಗ್ ವಿಭಾಗವು ಮಾನ್ಯತಾ ಟೆಕ್ ಪಾರ್ಕ್‌ನ ರ‍್ಯಾಪಿಡ್ ರಸ್ತೆ ಯೋಜನೆಯಲ್ಲಿ ಕೆಲಸ ಮಾಡಿದ ಸಂಬಂಧಪಟ್ಟ ಎಂಜಿನಿಯರ್‌ಗಳಿಂದ ವಿವರಗಳನ್ನು ಕೇಳಿದೆ ಎಂದು ಹೇಳಿದರು.

ತಂತ್ರಜ್ಞಾನವನ್ನು ಸುಧಾರಿಸಿದ ನಂತರ, ಯೋಜನೆಯು ನಗರದಲ್ಲಿ ಇನ್ನೂ ಕೆಲವು ರ‍್ಯಾಪಿಡ್ ರಸ್ತೆಗಳಿಗೆ ಅನುಮೋದನೆಯನ್ನು ಪಡೆಯಬಹುದು ಎಂದು ಮೂಲಗಳು ತಿಳಿಸಿವೆ.

ಕೆಲವು ಸಮಸ್ಯೆಗಳಿವೆ, ಆದರೆ ನಾವು ಈ ಘಟನೆಗಳಿಂದ ಕಲಿಯುತ್ತಿದ್ದೇವೆ. ಪ್ರಾಯೋಗಿಕ ಯೋಜನೆಯು ಕೆಲವು ಸಮಸ್ಯೆಗಳನ್ನು ತೋರಿಸಿದೆ ಅದನ್ನು ಸರಿಪಡಿಸಲಾಗುವುದು. ಸದಾ ಸಂಚಾರ ದಟ್ಟಣೆ ಹೆಚ್ಚಿರುವ ನಗರಕ್ಕೆ ಇದು ಸೂಕ್ತವಾಗಿರುವುದರಿಂದ ಇನ್ನೂ ಕೆಲವು ರಸ್ತೆಗಳಲ್ಲಿ ಇದೇ ತಂತ್ರಜ್ಞಾನವನ್ನು ಬಳಸಲು ನಾವು ಪರಿಗಣಿಸುತ್ತಿದ್ದೇವೆ ಎಂದು ಪ್ರಹ್ಲಾದ್ ಹೇಳಿದರು.

ಹಳೇ ಮದ್ರಾಸ್ ರಸ್ತೆಯ ಬಿನ್ನಮಂಗಲ ಜಂಕ್ಷನ್‌ನಿಂದ ಆದರ್ಶ ಥಿಯೇಟರ್ ಬಳಿಯ ಪೆಟ್ರೋಲ್ ಬಂಕ್ ವೃತ್ತದ ನಡುವಿನ 500 ಮೀಟರ್ ಮಾರ್ಗದ ಪ್ರಾಯೋಗಿಕ ಯೋಜನೆ ಪೂರ್ಣಗೊಳ್ಳುವ ಮುನ್ನವೇ ಬಿರುಕು ಬಿಟ್ಟಿರುವುದು ಸೋಶಿಯಲ್ ಮೀಡಿಯಾಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com