ವೈನ್ ಖರೀದಿಸಿದಾತನಿಗೆ 90 ರೂ. ಹೆಚ್ಚುವರಿ ಬಿಲ್: 10 ಸಾವಿರ ರೂ. ಪರಿಹಾರ ನೀಡುವಂತೆ ರೆಸ್ಟೊರೆಂಟ್'ಗೆ ಗ್ರಾಹಕ ಆಯೋಗ ಸೂಚನೆ!

ವೈನ್ ಖರೀದಿಸಿದಾತನಿಂದ ರೂ.90 ಹೆಚ್ಚುವರಿಯಾಗಿ ಪಡೆದಿದ್ದ ನಗರದ ರೆಸ್ಟೋರೆಂಟ್ ವೊಂದಕ್ಕೆ ಗ್ರಾಹಕ ಆಯೋಗವು ರೂ.10,000 ಪರಿಹಾರ ನೀಡುವಂತೆ ಸೂಚನೆ ನೀಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ವೈನ್ ಖರೀದಿಸಿದಾತನಿಂದ ರೂ.90 ಹೆಚ್ಚುವರಿಯಾಗಿ ಪಡೆದಿದ್ದ ನಗರದ ರೆಸ್ಟೋರೆಂಟ್ ವೊಂದಕ್ಕೆ ಗ್ರಾಹಕ ಆಯೋಗವು ರೂ.10,000 ಪರಿಹಾರ ನೀಡುವಂತೆ ಸೂಚನೆ ನೀಡಿದೆ.

ದೂರುದಾರರಾಗಿವ ವಕೀಲ ಎಸ್'ಟಿ.ಕೃಷ್ಣಯ್ಯ ಎಂಬುವವರು ನಗರದ ಕಿಂಗ್ ಫಿಶ್ ಎಂಬ ರೆಸ್ಟೋರೆಂಟ್ ವೊಂದಕ್ಕೆ ಫೆಬ್ರವರಿ 13, 2022ಕ್ಕೆ ಭೇಟಿ ನೀಡಿದ್ದು, ಈ ವೇಳೆ 140 ರೂ ಬೆಲೆಯ ಸಿಡಸ್ ವೈನ್ ಬಾಟಲ್ ಅನ್ನು ಆರ್ಡರ್ ಮಾಡಿದ್ದಾರೆ. ಇದಕ್ಕೆ ರೆಸ್ಟೋರೆಂಟ್ ರೂ.230ರ ಬಿಲ್ ನ್ನು ನೀಡಿದೆ. ರೆಸ್ಟೋರೆಂಟ್ ಕೃಷ್ಣಯ್ಯ ಅವರ ಬಳಿ ರೂ.90ನ್ನು ಹೆಚ್ಚುವರಿಯಾಗಿ ಪಡೆದುಕೊಂಡಿದೆ.

ವೈನ್ ಬಾಟಲಿಗೆ ಹೆಚ್ಚುವರಿಯಾಗಿ ಹಣ ಪಡೆದ ಹಿನ್ನೆಲೆಯಲ್ಲಿ ರಶೀದಿ ಹಾಗೂ ವೈನ್ ಬಾಟಲಿ ಸಮೇತ ಕೃಷ್ಣಯ್ಯ ಅವರು ಗ್ರಾಹಕ ಆಯೋಗದ ಮೆಟ್ಟಿಲೇರಿದ್ದಾರೆ.

ಈ ದೂರನ್ನು ಭಾಗಶಃ ಅನುಮತಿಸಿದ ಬೆಂಗಳೂರು ನಗರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು, ಹೆಚ್ಚುವರಿಯಾಗಿ ಪಡೆದ 90 ರೂ.ಗಳನ್ನು ಮರುಪಾವತಿಸುವಂತೆ ಹಾಗೂ ದೂರುದಾರರಿಗೆ ಪರಿಹಾರ ಹಾಗೂ ದಾವೆ ವೆಚ್ಚಕ್ಕಾಗಿ ರೂ.10,000 ನೀಡುವಂತೆ ಸೂಚನೆ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com