
ಸಾಂದರ್ಭಿಕ ಚಿತ್ರ
ಬೆಂಗಳೂರು: ಯಶವಂತಪುರದ ಮೋಹನ್ ಕುಮಾರ್ ನಗರದಲ್ಲಿ ಎರಡನೇ ಪತ್ನಿಯನ್ನು ಕೊಲೆ ಮಾಡಿ, ಅಸಹಜ ಸಾವು ಎಂದು ಬಿಂಬಿಸಿದ್ದ 29 ವರ್ಷದ ಯುವಕನನ್ನು ಬಂಧಿಸಲಾಗಿದೆ.
ಆರೋಪಿ ಗುರುವಾರ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಪತ್ನಿ ಮೇಲೆ ಮೇಲೆ ಹಲ್ಲೆ ನಡೆಸಿ ಕೊಂದಿದ್ದಾನೆ. ಬಳಿಕ ಆಕೆ ಪ್ರಜ್ಞಾಹೀನಳಾಗಿ ಬಿದ್ದಿದ್ದಾಳೆಂದು ಆಸ್ಪತ್ರೆಗೆ ಕರೆದೊಯ್ದು ಅಧಿಕಾರಿಗಳನ್ನು ದಾರಿತಪ್ಪಿಸಲು ಯತ್ನಿಸಿದ್ದಾನೆ.
ಸಂತ್ರಸ್ತೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ತಿಳಿಸಿದ್ದರಿಂದ ಪೊಲೀಸರು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಸಂತ್ರತ್ತೆಯನ್ನು ಕೊಲೆ ಮಾಡಲಾಗಿದೆ ಎಂದು ತಿಳಿದುಬಂದ ನಂತರ, ಪೊಲೀಸರು ಕುಮಾರ್‌ನನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಈವೇಳೆ ಆತ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಆರೋಪಿ ಶರತ್ ಕುಮಾರ್ (29) ಮತ್ತು ಸಂತ್ರಸ್ತೆ ಪ್ರಿಯಾ (19) ಬೆಂಗಳೂರು-ತುಮಕೂರು ರಸ್ತೆಯ ಮಾಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದಾಗ ಇಬ್ಬರು ಭೇಟಿಯಾಗಿದ್ದರು. ಬಳಿಕ ಮದುವೆಯಾಗಿ ಮೋಹನ್ ಕುಮಾರ್ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಆದರೆ, ತನ್ನ ಪತಿಗೆ ಈಗಾಗಲೇ ಮದುವೆಯಾಗಿದೆ ಮತ್ತು ಮೂವರು ಮಕ್ಕಳಿದ್ದಾರೆ ಎಂಬ ವಿಚಾರ ಪ್ರಿಯಾಗೆ ತಿಳಿಸಿದೆ. ಬಳಿಕ ಅಲ್ಲಿಗೆ ಭೇಟಿ ನೀಡದಂತೆ ಕುಮಾರ್‌ನನ್ನು ತಡೆದಿದ್ದಾರೆ. ಇದರಿಂದ ಕೆರಳಿದ ಕುಮಾರ್, ಆಕೆಯನ್ನು ಕೊಲೆ ಮಾಡಿದ್ದಾನೆ.
ಮನೆಯ ಮಾಲೀಕರು ಸಂಜಯ್ ಗಾಂಧಿ ನಗರದಲ್ಲಿ ವಾಸಿಸುವ ಪ್ರಿಯಾಳ ತಾಯಿ ಉಷಾ (38) ಅವರನ್ನು ಸಂಪರ್ಕಿಸಿ, ಪ್ರಿಯಾ ಪ್ರಜ್ಞಾಹೀನಳಾಗಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಕುಮಾರ್‌ನನ್ನು ಪ್ರಶ್ನಿಸಿದಾಗ, ರಾತ್ರಿ ಮನೆಗೆ ಬರುವಷ್ಟರಲ್ಲಾಗಲೇ ಪ್ರಿಯಾ ಮಲಗಿದ್ದಳು ಎಂದು ತಿಳಿಸಿದ್ದಾನೆ.