ನಾಸಾ-ಇಸ್ರೋ ಸಹಯೋಗದ ನಿಸಾರ್ ಉಪಗ್ರಹ ಬೆಂಗಳೂರಿಗೆ ರವಾನೆ: 2024 ಜನವರಿಯಲ್ಲಿ ಉಡಾವಣೆ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)- ನ್ಯಾಷನಲ್ ಏರೋನಾಟಿಕ್ಸ್ ಅಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್ (ನಾಸಾ) ಜಂಟಿಯಾಗಿ ಅಭಿವೃದ್ಧಿಪಡಿಸಿದ ನಿಸಾರ್ ಉಪಗ್ರಹ ಬೆಂಗಳೂರಿಗೆ ಬಂದಿಳಿದಿದೆ.
ನಿಸಾರ್ ಉಪಗ್ರಹದೊಂದಿಗೆ ಅಮೇರಿಕಾದ ಏರ್ ಫೋರ್ಸ್ ಸಿ-17 ಗ್ಲೋಬ್ ಮಾಸ್ಟರ್ ಕಾರ್ಗೋ ವಿಮಾನವು ಬುಧವಾರ ಬೆಂಗಳೂರಿಗೆ ಬಂದಿಳಿದಿರುವುದು.
ನಿಸಾರ್ ಉಪಗ್ರಹದೊಂದಿಗೆ ಅಮೇರಿಕಾದ ಏರ್ ಫೋರ್ಸ್ ಸಿ-17 ಗ್ಲೋಬ್ ಮಾಸ್ಟರ್ ಕಾರ್ಗೋ ವಿಮಾನವು ಬುಧವಾರ ಬೆಂಗಳೂರಿಗೆ ಬಂದಿಳಿದಿರುವುದು.

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)- ನ್ಯಾಷನಲ್ ಏರೋನಾಟಿಕ್ಸ್ ಅಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್ (ನಾಸಾ) ಜಂಟಿಯಾಗಿ ಅಭಿವೃದ್ಧಿಪಡಿಸಿದ ನಿಸಾರ್ ಉಪಗ್ರಹ ಬೆಂಗಳೂರಿಗೆ ಬಂದಿಳಿದಿದೆ.

ಸಿಂಥೆಟಿಕ್ ಅಪರ್ಚರ್ ರಾಡಾರ್ (ನಿಸಾರ್) ಉಪಗ್ರಹವನ್ನು ಹೊತ್ತ ಅಮೆರಿಕನ್‌ ವಾಯುಪಡೆಯ ಸಿ-17 ಸಾರಿಗೆ ವಿಮಾನವು, ಅಮೆರಿಕದ ಕ್ಯಾಲಿಫೋರ್ನಿಯಾದಿಂದ ಹೊರಟು ಬೆಂಗಳೂರಿಗೆ ಬಂದಿಳಿದಿದೆ.

ಜಾಗತಿಕವಾಗಿ ಭೂಮಿಯ ಹೊರಪದರ ಮತ್ತು ಭೂ ಹಿಮದ ಮೇಲ್ಮೈಗಳಲ್ಲಿನ ಬದಲಾವಣೆಗಳನ್ನು ಅಳೆಯಲು, ಈ ಉಪ್ರಗಹವನ್ನು ನಾಸಾ ಮತ್ತು ಇಸ್ರೋ ಜಂಟಿಯಾಗಿ ಅಭಿವೃದ್ಧಿಪಡಿಸಿದೆ.

ನಿಸಾರ್ ಉಪಗ್ರಹವು ಭೂಮಿಯ ಪರಿಸರ ವ್ಯವಸ್ಥೆಗಳಲ್ಲಿನ ಬದಲಾವಣೆಗಳನ್ನು ಅಳೆಯುತ್ತದೆ. ಭೂ-ಮೇಲ್ಮೈ ಬದಲಾವಣೆಗಳ ಪರಿಣಾಮಗಳನ್ನು ಅರ್ಥಮಾಡಿಕೊಳ್ಳಲು, ಈ ಉಪಗ್ರಹ ಸಂಶೋಧಕರಿಗೆ ಸಹಾಯ ಮಾಡುತ್ತದೆ. ಅಲ್ಲದೇ, ಭೂಕಂಪಗಳು ಮತ್ತು ಜ್ವಾಲಾಮುಖಿ ಸ್ಫೋಟಗಳು, ಸಮುದ್ರ ಮಟ್ಟ ಏರಿಕೆ ಮುಂತಾದ ನೈಸರ್ಗಿಕ ವಿಕೋಪಗಳ ಎಚ್ಚರಿಕೆ ಚಿಹ್ನೆಗಳನ್ನೂ ಕೂಡ ಇದು ಗುರುತಿಸುತ್ತದೆ.

ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೋ ಹಿಮಾಲಯ ಮತ್ತು ಭೂ ಕುಸಿತ ಪೀಡಿತ ಪ್ರದೇಶಗಳಲ್ಲಿನ ಹಿಮನದಿಗಳ ಮೇಲೆ ನಿಗಾ ಇಡಲು ಈ ಉಪಗ್ರಹದ ಸಹಾಯ ಪಡೆಯಲು ಬಳಸಲಾಗುತ್ತಿದೆ. ಎಸ್‌ಯುವಿ ಗಾತ್ರದ ಉಪಗ್ರಹವು ಸುಮಾರು 2 ಸಾವಿರದ 8 ನೂರು ಕೆ.ಜಿ ಭಾರವಿದೆ. L ಮತ್ತು S-ಬ್ಯಾಂಡ್ ಸಿಂಥೆಟಿಕ್ ಅಪರ್ಚರ್ ರೆಡಾರ್ ಉಪಕರಣಗಳನ್ನು ಕೂಡಾ ಒಳಗೊಂಡಿದೆ.

ನಿಸಾರ್ ಉಪಗ್ರಹ ಮೋಡಗಳನ್ನು ಭೇದಿಸುವ ಮತ್ತು ಹವಾಮಾನ ಪರಿಸ್ಥಿತಿಗಳನ್ನು ಲೆಕ್ಕಿಸದೆ, ಹೆಚ್ಚಿನ ರೆಸಲ್ಯೂಶನ್ ಚಿತ್ರಗಳನ್ನು ಸೆರೆ ಹಿಡಿಯುವ ಸಾಮರ್ಥ್ಯ ಹೊಂದಿದೆ ಎಂದು ನಾಸಾ ಮತ್ತು ಇಸ್ರೋ ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ.

ಈ ಲೋ ಅರ್ತ್ ಆರ್ಬಿಟ್ ಉಪಗ್ರಹ ಆಂಧ್ರಪ್ರದೇಶದ ಶ್ರೀ ಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಜನವರಿ 2024ರಲ್ಲಿ ಉಡಾವಣೆಗೊಳ್ಳಲಿದೆ. ಈ ಉಪಗ್ರಹ ಕನಿಷ್ಠ ಮೂರು ವರ್ಷಗಳ ಕಾರ್ಯಾಚರಣಾ ಅವಧಿಯನ್ನು ಹೊಂದಿರಲಿದೆ. ನಿಸಾರ್ ಸಂಪೂರ್ಣ ಭೂಮಿಯ ನಕಾಶೆಯನ್ನು 12 ದಿನಗಳ ಒಳಗೇ ಚಿತ್ರಿಸಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com