ಕರ್ನಾಟಕ ವಿಧಾನಸಭೆ ಚುನಾವಣೆ: ದ್ವೇಷ ರಾಜಕಾರಣದ ವಿರುದ್ಧ ರಾಜ್ಯದಲ್ಲಿ 'ಎದ್ದೇಳು ಕರ್ನಾಟಕ' ಅಭಿಯಾನ ಆರಂಭ

ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಂತೆಯೇ, ಕೆಲವು ಸಾಮಾಜಿಕ ಚಳುವಳಿಗಳು, ಸಂಘಟನೆಗಳು, ನಾಗರಿಕ ಸಮಾಜದ ಗುಂಪುಗಳು ಮತ್ತು ವ್ಯಕ್ತಿಗಳು 'ಪ್ರಜಾಪ್ರಭುತ್ವವನ್ನು ರಕ್ಷಿಸಲು ಮತ್ತು ಕೋಮು ಮತ್ತು ದ್ವೇಷದ ರಾಜಕೀಯಕ್ಕೆ ಬಲಿಯಾಗದಂತೆ ರಾಜ್ಯವನ್ನು ಉಳಿಸಲು' 'ಎದ್ದೇಳು ಕರ್ನಾಟಕ' ಅಭಿಯಾನವನ್ನು ಪ್ರಾರಂಭಿಸಿದ್ದಾರೆ
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ಬೆಂಗಳೂರು: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಂತೆಯೇ, ಕೆಲವು ಸಾಮಾಜಿಕ ಚಳುವಳಿಗಳು, ಸಂಘಟನೆಗಳು, ನಾಗರಿಕ ಸಮಾಜದ ಗುಂಪುಗಳು ಮತ್ತು ವ್ಯಕ್ತಿಗಳು 'ಪ್ರಜಾಪ್ರಭುತ್ವವನ್ನು ರಕ್ಷಿಸಲು ಮತ್ತು ಕೋಮು ಮತ್ತು ದ್ವೇಷದ ರಾಜಕೀಯಕ್ಕೆ ಬಲಿಯಾಗದಂತೆ ರಾಜ್ಯವನ್ನು ಉಳಿಸಲು' 'ಎದ್ದೇಳು ಕರ್ನಾಟಕ' ಅಭಿಯಾನವನ್ನು ಪ್ರಾರಂಭಿಸಿದ್ದಾರೆ ಎಂದು 'ಎದ್ದೇಳು ಕರ್ನಾಟಕದ' ಲೇಖಕಿ, ಕಾರ್ಯಕರ್ತೆ ಮತ್ತು ಸ್ವಯಂಸೇವಕಿ ದು ಸರಸ್ವತಿ ಹೇಳಿದರು.

ಯಾವುದೇ ಪಕ್ಷದಿಂದ ಯಾವುದೇ ರೀತಿಯ ದ್ವೇಷವನ್ನು ನಾನು ವಿರೋಧಿಸುತ್ತೇನೆ. ಕರ್ನಾಟಕವು ತನ್ನ ಜಾತ್ಯತೀತ ರಚನೆಗೆ ಹೆಸರುವಾಸಿಯಾಗಿದೆ ಮತ್ತು ಅದನ್ನು ರಕ್ಷಿಸಬೇಕು ಎಂದು ಅವರು ಹೇಳಿದರು. 

‘ಎದ್ದೇಳು ಕರ್ನಾಟಕ’ದ ಮತ್ತೊಬ್ಬ ಸ್ವಯಂಸೇವಕಿ ಮಲ್ಲಿಗೆ ಮಾತನಾಡಿ, ‘ಎದ್ದೇಳು ಕರ್ನಾಟಕ’ ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದು, ಸಾಮರಸ್ಯ ಕರ್ನಾಟಕದ ಕಲ್ಪನೆಯೊಂದಿಗೆ ಸ್ವಯಂಸೇವಕರು ತಳಮಟ್ಟದ ಜನರನ್ನು ತಲುಪಲಿದ್ದಾರೆ. ಸಂವಿಧಾನದ ಆಶಯಗಳನ್ನು ಕಾಪಾಡುವುದು ಅಭಿಯಾನದ ಮುಖ್ಯ ಗುರಿಗಳಲ್ಲಿ ಒಂದಾಗಿದೆ ಎಂದು ಹೇಳಿದರು.

'ಪಕ್ಷ, ಸಂಘಟನೆ, ಜಾತಿ ಮತ್ತು ಧರ್ಮದ ಎಲ್ಲೆಗಳನ್ನು ಬಿಟ್ಟು, ರಾಜ್ಯವನ್ನು ಉಳಿಸುವ ಈ ಅಭಿಯಾನವು ಭರವಸೆಯ ಕಿರಣವಾಗಿದೆ' ಎಂದು ಮತ್ತೋರ್ವ ಸ್ವಯಂಸೇವಕ ಹೇಳಿದರು.

'ಎದ್ದೇಳು ಕರ್ನಾಟಕ'ವನ್ನು 'ಭಾರತ್ ಜೋಡೋ ಅಭಿಯಾನ' ಸದಸ್ಯರಾದ ವಿಜಯ್ ಮಹಾಜನ್, ಯೋಗೇಂದ್ರ ಯಾದವ್ ಮತ್ತು ಇತರರು ಬೆಂಬಲಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com