ಬೆಂಗಳೂರಿನ 50 ಕಡೆ ಆಯುಷ್ಮತಿ ಕ್ಲಿನಿಕ್‌ ಆರಂಭ; ಮಹಿಳೆಯರಿಗೆ ವೈದ್ಯಕೀಯ ನೆರವು ಎಂದ ಬಿಬಿಎಂಪಿ

ಮಹಿಳೆಯರಿಗೆ ವೈದ್ಯಕೀಯ ನೆರವು ನೀಡುವ ಸಲುವಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬೆಂಗಳೂರಿನ 50 ಕಡೆ ಆಯುಷ್ಮತಿ ಕ್ಲಿನಿಕ್‌ ಆರಂಭಿಸಿದೆ.
ಆಯುಷ್ಮತಿ ಕ್ಲಿನಿಕ್‌
ಆಯುಷ್ಮತಿ ಕ್ಲಿನಿಕ್‌

ಬೆಂಗಳೂರು: ಮಹಿಳೆಯರಿಗೆ ವೈದ್ಯಕೀಯ ನೆರವು ನೀಡುವ ಸಲುವಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬೆಂಗಳೂರಿನ 50 ಕಡೆ ಆಯುಷ್ಮತಿ ಕ್ಲಿನಿಕ್‌ ಆರಂಭಿಸಿದೆ.

ಬಿಬಿಎಂಪಿ 8 ವಲಯಗಳ ವ್ಯಾಪ್ತಿಯಲ್ಲಿ ಆಯ್ದ 50 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮಹಿಳೆಯರ ವಿಶೇಷ ಆರೋಗ್ಯ ತಪಾಸಣೆಗಾಗಿ ಆಯುಷ್ಮತಿ ಕ್ಲಿನಿಕ್ ಗಳನ್ನು ಆರಂಭಿಸಲಾಗಿದೆ. ಸ್ವಸ್ಥ ಮಹಿಳೆಯರು, ಸ್ವಸ್ಥ ಸಮಾಜ ನಿರ್ಮಾಣಕ್ಕಾಗಿ ಎಲ್ಲಾ ತಜ್ಞ ವೈದ್ಯರಿಂದ ಪ್ರತಿ ದಿನಾ ಮಹಿಳೆಯರ ಆರೋಗ್ಯ ತಪಾಸಣೆ ಮಾಡಲಾಗುತ್ತದೆ. ಪ್ರತಿ ಸೋಮವಾರ - ಫಿಜಿಷಿಯನ್, ಮಂಗಳವಾರ - ಮೂಳೆ ಮತ್ತು ಕೀಲು ತಜ್ಞರು, ಬುಧವಾರ - ಶಸ್ತçಚಿಕಿತ್ಸಾ ತಜ್ಞರು, ಗುರುವಾರ - ಮಕ್ಕಳ ತಜ್ಞರು, ಶುಕ್ರವಾರ - ಸ್ತ್ರೀರೋಗ ತಜ್ಞರು, ಶನಿವಾರ - ಇತರೆ(ಕಿವಿ, ಮೂಗು ಮತ್ತು ಗಂಟಲು, ನೇತ್ರ, ಚರ್ಮರೋಗ, ಮಾನಸಿಕ ರೋಗ ತಜ್ಞರು ಸೇವೆ ನೀಡಲಾಗುತ್ತದೆ. 

ಮಹಿಳೆಯರಿಗೋಸ್ಕರ ರೂಪಗೊಂಡ ಈ ಕ್ಲಿನಿಕ್ ನಲ್ಲಿ ಉಚಿತವಾಗಿ ಆಪ್ತಸಮಾಲೋಚನೆ, ಲ್ಯಾಬ್ ಪರೀಕ್ಷೆಗಳು, ಔಷಧಿ, ಕ್ಷೇಮ ಚಟುವಟಿಕೆಗಳಾದ ಯೋಗ ಮತ್ತು ಧ್ಯಾನ ಹಾಗೂ ರೆಫರಲ್ ಸೇವೆಗಳು ಲಭ್ಯವಿರುತ್ತದೆ. ಈ ಕ್ಲಿನಿಕ್‌ ಮೂಲಕ ಆಹಾರ ಪದ್ಧತಿ, ಚಿಕಿತ್ಸಾ ವಿಧಾನಗಳ ಬಗ್ಗೆ ತಿಳಿಸಲಾಗುತ್ತದೆ. ಸಿಕ್ಕ ಅವಕಾಶದಲ್ಲಿಉತ್ತಮ ಸೇವೆಯನ್ನು ಒದಗಿಸಲು ಪ್ರಯತ್ನಿಸಲಾಗುತ್ತದೆ. ಸರಕಾರಿ ವೈದ್ಯರ ಜತೆಗೆ ಖಾಸಗಿ ತಜ್ಞ ವೈದ್ಯರ ಸಹಭಾಗಿತ್ವದಲ್ಲಿಮಹಿಳೆಯರಿಗೆ ಅಗತ್ಯ ವೈದ್ಯಕೀಯ ಚಿಕಿತ್ಸೆ ನೀಡಲು ಆಯುಷ್ಮತಿ ಕ್ಲಿನಿಕ್‌ ನೆರವಾಗಲಿದೆ.

ಕ್ಲಿನಿಕ್ ಸಮಯ
ಆಯುಷ್ಮತಿ ಕ್ಲಿನಿಕ್‌ನಲ್ಲಿ ಪ್ರತಿದಿನ ಒಬ್ಬ ತಜ್ಞ ವೈದ್ಯರು ಚಿಕಿತ್ಸೆ ನೀಡಲಿದ್ದು, ಇದು ಮಹಿಳೆಯರಿಗೆ ಅನುಕೂಲವಾಗಲಿದೆ. ಮಹಿಳೆಯರಿಗೆ ವೈದ್ಯಕೀಯ ಸೇವೆಗಳನ್ನು ಸುಲಭವಾಗಿ ಪಡೆದುಕೊಳ್ಳಲು ಈ ಯೋಜನೆ ನೆರವಾಗಲಿದೆ. ಮಹಿಳೆಯರಿಗೆ ಚಿಕಿತ್ಸೆ ನೀಡುವ ಕ್ಲಿನಿಕ್‌ನಲ್ಲಿಮಕ್ಕಳಿಗೂ ಹಾಗೂ ಹಿರಿಯ ನಾಗರಿಕರಿಗೂ ಅಗತ್ಯ ಚಿಕಿತ್ಸೆ ನೀಡಲಾಗುತ್ತದೆ. ಈ ಕೇಂದ್ರ ಪ್ರತಿದಿನ ಬೆಳಗ್ಗೆ 9.30 ರಿಂದ 4.30 ಗಂಟೆಯವರೆಗೆ ಸೇವೆ ನೀಡಲಿದ್ದು, ಪ್ರತಿದಿನ ತಜ್ಞ ವೈದ್ಯರು 3 ಗಂಟೆಗಳ ಸೇವೆ ಒದಗಿಸಲಿದ್ದಾರೆ. ಅಗತ್ಯ ವೈದ್ಯರು, ಸಿಬ್ಬಂದಿ ವ್ಯವಸ್ಥೆ ಕೂಡ ಮಾಡಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದರು.

ಏನೇನು ಸೌಲಭ್ಯ?
ಕ್ಲಿನಿಕ್‌ನಲ್ಲಿಪ್ರತಿ ದಿನ ಒಬ್ಬ ತಜ್ಞ ವೈದ್ಯರ ಸೇವೆ ಲಭ್ಯವಿದೆ. ಸೋಮವಾರ ಫಿಸಿಶಿಯನ್‌, ಮಂಗಳವಾರ ಮೂಳೆ ಮತ್ತು ಕೀಲು ತಜ್ಞರು, ಬುಧವಾರ ಶಸ್ತ್ರಚಿಕಿತ್ಸಾ ತಜ್ಞರು, ಗುರುವಾರ ಮಕ್ಕಳ ತಜ್ಞರು, ಶುಕ್ರವಾರ ಸ್ತ್ರೀರೋಗ ತಜ್ಞರು, ಶನಿವಾರ ಇತರ ತಜ್ಞರು (ಕಿವಿ, ಮೂಗು, ಗಂಟಲು, ಚರ್ಮ, ನೇತ್ರ) ತಪಾಸಣೆ ನಡೆಸಲಿದ್ದಾರೆ. ಆಪ್ತ ಸಮಾಲೋಚನೆ ಕೂಡ ಲಭ್ಯವಿದ್ದು, ಋುತುಚಕ್ರ ಸಂಬಂಧಿ ಹಾಗೂ ಋುತುಚಕ್ರ ನೈರ್ಮಲ್ಯ, ಕುಟುಂಬ ಕಲ್ಯಾಣ ಯೋಜನೆಗಳು, ಅಸಾಂಕ್ರಾಮಿಕ ರೋಗಗಳು, ಸಂತಾನೋತ್ಪತ್ತಿ ಅಂಗಗಳ ಸೋಂಕು, ಲೈಂಗಿಕ ಸೋಂಕುಗಳು, ಮಾನಸಿಕ ಆರೋಗ್ಯ ಸಮಸ್ಯೆಗಳು, ಹದಿಹರೆಯದ ಸಮಸ್ಯೆಗಳು, ಮುಟ್ಟು ನಿಲ್ಲುವ ಸಮಯದ ಸಮಸ್ಯೆಗಳು, ಪೌಷ್ಟಿಕಾಂಶದ ಕೊರತೆಗಳ ಬಗ್ಗೆ ವೈದ್ಯರಿಂದ ಸೂಕ್ತ ಸಲಹೆ ಸೂಚನೆಗಳನ್ನು ಪಡೆಯಬಹುದಾಗಿದೆ. ಲ್ಯಾಬ್‌ ಪರೀಕ್ಷೆಗಳ ಸೇವೆ ಮತ್ತು ಉಚಿತ ಔಷಧಗಳು ದೊರೆಯುತ್ತವೆ.

ಲಭ್ಯವಿರುವ ಸೇವೆಗಳು, ತಜ್ಞರು, ಹೆಸರುಗಳು, ಸಂಪರ್ಕ ಸಂಖ್ಯೆಗಳು ಮತ್ತು ಕ್ಲಿನಿಕ್‌ಗಳ ಪಟ್ಟಿಯನ್ನು ಬಿಬಿಎಂಪಿ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com