ಕರ್ನಾಟಕ ಚುನಾವಣೆ ಹಿನ್ನಲೆ, ಬಹು ನಿರೀಕ್ಷಿತ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಚಿರತೆ ಸಫಾರಿ ಮತ್ತಷ್ಟು ವಿಳಂಬ
ಬನ್ನೇರುಘಟ್ಟ ಜೈವಿಕ ಉದ್ಯಾನವನದ ಬಹು ನಿರೀಕ್ಷಿತ ಚಿರತೆ ಸಫಾರಿ ಮತ್ತಷ್ಟು ವಿಳಂಬವಾಗಲಿದ್ದು, ಕರ್ನಾಟಕ ವಿಧಾನಸಭೆ ಚುನಾವಣೆ ಇದಕ್ಕೆ ಕಾರಣ ಎನ್ನಲಾಗಿದೆ.
Published: 28th March 2023 10:46 AM | Last Updated: 28th March 2023 07:27 PM | A+A A-

ಬನ್ನೇರುಘಟ್ಟ ಜೈವಿಕ ಉದ್ಯಾನವನ
ಬೆಂಗಳೂರು: ಬನ್ನೇರುಘಟ್ಟ ಜೈವಿಕ ಉದ್ಯಾನವನದ ಬಹು ನಿರೀಕ್ಷಿತ ಚಿರತೆ ಸಫಾರಿ ಮತ್ತಷ್ಟು ವಿಳಂಬವಾಗಲಿದ್ದು, ಕರ್ನಾಟಕ ವಿಧಾನಸಭೆ ಚುನಾವಣೆ ಇದಕ್ಕೆ ಕಾರಣ ಎನ್ನಲಾಗಿದೆ.
ಹೌದು.. ಬಹು ನಿರೀಕ್ಷಿತ ಚಿರತೆ ಸಫಾರಿ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ (ಬಿಬಿಪಿ) ಆರಂಭವಾಗಲು ಇನ್ನೆರಡು ತಿಂಗಳು ಕಾಯಬೇಕು. ಕಳೆದ ಎರಡು-ಮೂರು ವರ್ಷಗಳಿಂದ ಬಾಕಿ ಉಳಿದಿದ್ದ ಈ ಯೋಜನೆ ಈಗ ಚುನಾವಣೆಯಿಂದಾಗಿ ವಿಳಂಬವಾಗುವ ಸಾಧ್ಯತೆ ಇದೆ ಎಂಬುದು ಮೃಗಾಲಯದ ಆಡಳಿತಾಧಿಕಾರಿಗಳ ಆತಂಕ.
ಈ ಬಗ್ಗೆ ಮಾತನಾಡಿರುವ ಜೈವಿಕ ಉದ್ಯಾನವನದ ಹಿರಿಯ ಅಧಿಕಾರಿಯೊಬ್ಬರು, “ಎಲ್ಲವೂ ಸಿದ್ಧವಾಗಿದೆ, ಚಿರತೆ ಸಫಾರಿ ಜಾಗವನ್ನು ಕೂಡ ಗುರುತಿಸಲಾಗಿದೆ ಮತ್ತು ಚಿರತೆಗಳನ್ನು ಸಹ ಒಗ್ಗಿಸಲಾಗಿದೆ. ಆದರೆ, ಸೋಲಾರ್ ಬೇಲಿ ಹಾಕುವ ಕಾಮಗಾರಿ ಇನ್ನೂ ಆಗಿಲ್ಲ. ಚುನಾವಣೆಯ ಕಾರಣದಿಂದ ಟೆಂಡರ್ ವಿಳಂಬವಾಗಬಹುದು. ಸರಿಯಾದ ಬೇಲಿ ಇಲ್ಲದೆ ನಾವು ಸಫಾರಿಗೆ ಅವಕಾಶ ನೀಡುವುದಿಲ್ಲ. ಒಂದು ವೇಳೆ ಅವಕಾಶ ನೀಡಿದರೆ ಚಿರತೆಗಳು ಜಿಗಿಯಬಹುದು.. ಇದರಿಂದ ಪ್ರವಾಸಿಗರಿಗೇ ಅಪಾಯ ಎಂದು ಹೇಳಿದರು.
ಇದನ್ನೂ ಓದಿ: ಕೊಡಗಿನಲ್ಲಿ ಕಾಡಾನೆ ದಾಳಿ; ಬೆಳೆ ಉಳಿಸಿಕೊಳ್ಳಲು ಹೋದ ರೈತನಿಗೆ ಗಂಭೀರ ಗಾಯ
ಮಾದರಿ ನೀತಿ ಸಂಹಿತೆ ಯಾವುದೇ ಸಮಯದಲ್ಲಿ ಜಾರಿಗೆ ಬರುವ ಸಾಧ್ಯತೆಯಿರುವುದರಿಂದ, ಕರ್ನಾಟಕ ಮೃಗಾಲಯ ಪ್ರಾಧಿಕಾರ (ZAK) ಯೋಜನೆಗಳನ್ನು ತೆರವುಗೊಳಿಸುವಲ್ಲಿ ಬಹಳ ಜಾಗರೂಕವಾಗಿದೆ. ನಾವು ಯಾವುದೇ ರಾಜಕೀಯ ವಿವಾದಕ್ಕೆ ಸಿಲುಕಲು ಬಯಸುವುದಿಲ್ಲ. ನಾವು ಪ್ರಾಜೆಕ್ಟ್ ಅನ್ನು ಆದಷ್ಟು ಬೇಗ ಪೂರ್ಣಗೊಳಿಸಲು ಬಯಸಿದ್ದೇವೆ, ಆದರೆ ಹಲವಾರು ಕಾರಣಗಳಿಂದ ಅದು ವಿಳಂಬವಾಗುತ್ತಿದೆ. ಈಗ ವಿಳಂಬವಾದರೆ, ಬೇಸಿಗೆ ರಜೆಗಳು ಕೊನೆಗೊಳ್ಳುತ್ತವೆ ಮತ್ತು ಮಕ್ಕಳನ್ನು ಗಮನದಲ್ಲಿಟ್ಟುಕೊಂಡು ಪ್ರಾರಂಭಿಸಿದ ಈ ಕಾರ್ಯಕ್ರಮವು ನಿಷ್ಪ್ರಯೋಜಕವಾಗುತ್ತದೆ'' ಎಂದು ZAK ಅಧಿಕಾರಿಯೊಬ್ಬರು ಹೇಳಿದರು.
ಇದನ್ನೂ ಓದಿ: ಬೆಳಗಾವಿ: 8 ಜನರ ಮೇಲೆ ಬೀದಿ ನಾಯಿ ದಾಳಿ
ಬಿಬಿಪಿ ಸಫಾರಿಗಾಗಿ 50 ಹೆಕ್ಟೇರ್ ಭೂಮಿಯನ್ನು ನಿಯೋಜಿಸಲಾಗಿದ್ದು, ಮೊದಲ ಹಂತದಲ್ಲಿ 10 ಹೆಕ್ಟೇರ್ ಅನ್ನು ಸಫಾರಿಗೆ ತೆರೆಯಲಾಗುವುದು. ಸಫಾರಿ ಮತ್ತು ಕ್ರಾಲ್ ಪ್ರದೇಶದಲ್ಲಿ ಆರು ಚಿರತೆಗಳನ್ನು ಇರಿಸಲಾಗಿದೆ ಮತ್ತು ಅವು ಈಗ ಒಗ್ಗಿಕೊಳ್ಳಲಾರಂಭಿಸಿವೆ. ಭಾರತೀಯ ಮೃಗಾಲಯ ಪ್ರಾಧಿಕಾರದ ಮಾರ್ಗಸೂಚಿಗಳ ಪ್ರಕಾರ, ಸಾಕಿದ ಮತ್ತು ಮೃಗಾಲಯದಲ್ಲಿ ಜನಿಸಿದ ಚಿರತೆಗಳನ್ನು ಮಾತ್ರ ಸಫಾರಿಯಲ್ಲಿ ಬಿಡಲಾಗುತ್ತದೆ. ಇಲ್ಲಿ ಕಾಡು ಅಥವಾ ರಕ್ಷಿಸಿದ ಚಿರತೆಗಳನ್ನು ಸಾಕಲಾಗುವುದಿಲ್ಲ. ಚಿರತೆಗಳು ಬಹಳ ಎತ್ತರದಿಂದ ಜಿಗಿಯುತ್ತವೆ ಮತ್ತು ವೇಗವಾಗಿ ಓಡುವುದರಿಂದ, ಸಂಪೂರ್ಣ ಬೇಲಿ ಅಗತ್ಯವಿದೆ. ಸೋಲಾರ್ ಫೆನ್ಸಿಂಗ್ ಸೂಕ್ತವಾಗಿರುತ್ತದೆ. ಸಿಂಹ ಮತ್ತು ಹುಲಿ ಸಫಾರಿಗಳಿಗಿಂತ ವಿಭಿನ್ನವಾಗಿರುವ ಚಿರತೆಗಳೊಂದಿಗೆ ಪ್ರವಾಸಿಗರು ಹತ್ತಿರವಾಗುವಂತೆ ಸಫಾರಿ ಮಾರ್ಗಗಳನ್ನು ರಚಿಸಲಾಗಿದೆ'' ಎಂದು ಬಿಬಿಪಿ ಅಧಿಕಾರಿ ಹೇಳಿದರು.
ಇದನ್ನೂ ಓದಿ: ಕಾಸರಕೋಡು ಕಡಲತೀರದಲ್ಲಿ ಅಪರೂಪದ 'ಗಿಟಾರ್ ಫಿಶ್' ಪತ್ತೆ
ಇದು ಮಹಾರಾಷ್ಟ್ರದ ನಂತರ ಭಾರತದ ಎರಡನೇ ಚಿರತೆ ಸಫಾರಿಯಾಗಿದ್ದು, ಮಹಾರಾಷ್ಟ್ರಕ್ಕಿಂತ ದೊಡ್ಡದಾಗಿರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದು ಅಸ್ತಿತ್ವದಲ್ಲಿರುವ ಸ್ಲಾತ್ ಬೇರ್ ಮತ್ತು ಮಾಂಸಾಹಾರಿ ಸಫಾರಿಗಳ ನಡುವೆ ಬರುತ್ತದೆ. ಸಿಬ್ಬಂದಿ ಪ್ರಾಣಿಗಳಿಗೆ ರೇಡಿಯೋ ಕಾಲರ್ ಹಾಕುವ ಕೆಲಸವನ್ನೂ ಮಾಡುತ್ತಿದ್ದು, ಪ್ರಾಣಿಗಳು ತಪ್ಪಿಸಿಕೊಂಡರೆ ಇದರ ಮೂಲಕ ತಿಳಿಯುತ್ತದೆ ಎಂದು ಮತ್ತೋರ್ವ ಅಧಿಕಾರಿ ಮಾಹಿತಿ ನೀಡಿದ್ದಾರೆ.