ಕರ್ನಾಟಕ ವಿಧಾನಸಭೆ ಚುನಾವಣೆ: ಮಧ್ಯಾಹ್ನ 3 ಗಂಟೆವರೆಗೆ ಶೇ 52.18 ರಷ್ಟು ಮತದಾನ, ರಾಮನಗರದಲ್ಲಿ ಅತಿಹೆಚ್ಚು!
224 ಸ್ಥಾನಗಳಿಗೆ ನಡೆಯುತ್ತಿರುವ ಕರ್ನಾಟಕ ವಿಧಾನಸಭೆ ಚುನಾವಣೆಗೆ ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದ್ದು, ಮಧ್ಯಾಹ್ನ 3 ಗಂಟೆಯವರೆಗೆ ಶೇ 52.18ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
Published: 10th May 2023 04:04 PM | Last Updated: 10th May 2023 05:14 PM | A+A A-

ಶಿವಮೊಗ್ಗ ಜಿಲ್ಲೆಯ ಮತಗಟ್ಟೆಯಲ್ಲಿ ಮತಚಲಾಯಿಸಲು ಬಂದಿದ್ದ ಮತದಾರರು
ಬೆಂಗಳೂರು: 224 ಸ್ಥಾನಗಳಿಗೆ ನಡೆಯುತ್ತಿರುವ ಕರ್ನಾಟಕ ವಿಧಾನಸಭೆ ಚುನಾವಣೆಗೆ ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದ್ದು, ಮಧ್ಯಾಹ್ನ 3 ಗಂಟೆಯವರೆಗೆ ಶೇ 52.18ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಈ ಪೈಕಿ, ರಾಮನಗರದಲ್ಲಿ ಅತಿ ಹೆಚ್ಚು ಅಂದರೆ ಶೇ 63.36 ರಷ್ಟು ಮತದಾನವಾಗಿದೆ. ಬೆಂಗಳೂರು ನಗರದಲ್ಲಿ ಮತದಾರ ಆಸಕ್ತಿ ತೋರಿಸದಿರುವಂತೆ ಕಾಣಿಸುತ್ತಿದ್ದು, ಅತಿ ಕಡಿಮೆ ಅಂದರೆ ಶೇ 41.82ರಷ್ಟು ಮತದಾನವಾಗಿದೆ.
52.03% voter turnout recorded till 3 pm, in #KarnatakaElections pic.twitter.com/NTUHWz03Sv
— ANI (@ANI) May 10, 2023
ಬೆಳಗ್ಗೆ 7 ಗಂಟೆಗೆ ಆರಂಭವಾದ ಮತದಾನದ ಮೊದಲ ಆರು ಗಂಟೆಗಳಲ್ಲಿ ಶೇ 37.25ರಷ್ಟು ಮತದಾನವಾಗಿತ್ತು. ಇದೀಗ ಅತಿಹೆಚ್ಚು ಮತದಾನ ಮಾಡಲು ಮತದಾರರು ಮತಗಟ್ಟೆಗಳತ್ತ ತೆರಳುತ್ತಿದ್ದಾರೆ. 1 ಗಂಟೆ ಸುಮಾರಿಗೆ ಕರಾವಳಿ ಜಿಲ್ಲೆ ಉಡುಪಿಯಲ್ಲಿ ಅತಿ ಹೆಚ್ಚು ಅಂದರೆ ಶೇ 47.79 ರಷ್ಟು ಮತದಾನವಾಗಿತ್ತು.
ಇದನ್ನೂ ಓದಿ: ರಾಜ್ಯ ವಿಧಾನಸಭೆ ಚುನಾವಣೆ 2023: ಈವರೆಗೆ ಶೇ.37.25ರಷ್ಟು ಮತದಾನ, ಉಡುಪಿಯಲ್ಲಿ ಅತಿಹೆಚ್ಚು!
ಇನ್ನುಳಿದಂತೆ ಮಧ್ಯಾಹ್ನ 3 ಗಂಟೆಯ ವೇಳೆಗೆ ಬೆಂಗಳೂರು ಗ್ರಾಮಾಂತರದಲ್ಲಿ ಶೇ 60.14ರಷ್ಟು, ಬೆಂಗಳೂರು ನಗರದಲ್ಲಿ ಶೇ 41.82, ಬಾಗಲಕೋಟೆ ಜಿಲ್ಲೆಯಲ್ಲಿ ಶೇ 56.42ರಷ್ಟು, ಬೆಳಗಾವಿಯಲ್ಲಿ ಶೇ 53.93, ಬಳ್ಳಾರಿಯಲ್ಲಿ ಶೇ 53.31, ಬೀದರ್‌ನಲ್ಲಿ ಶೇ 50.64, ವಿಜಯಪುರದಲ್ಲಿ ಶೇ 49, ಚಾಮರಾಜನಗರದಲ್ಲಿ ಶೇ 51.75, ಚಿಕ್ಕಬಳ್ಳಾಪುರ ಶೇ 58.74, ಚಿಕ್ಕಮಗಳೂರು ಶೇ 57.28, ಚಿತ್ರದುರ್ಗ ಶೇ 53.05, ದಕ್ಷಿಣ ಕನ್ನಡ ಶೇ 57.48, ದಾವಣಗೆರೆ ಶೇ 55.80, ಧಾರವಾಡ ಶೇ 50.25 ಮತ್ತು ಗದಗದಲ್ಲಿ ಶೇ 55.04 ರಷ್ಟು ಮತದಾನವಾಗಿದೆ.
#KarnatakaPollsWithTNIE
— Bosky Khanna (@BoskyKhanna) May 10, 2023
The polling percentage in #Bengaluu upto 3pm was 41.43%.
Come out & vote. Time till 6pm@NewIndianXpress @XpressBengaluru @KannadaPrabha @santwana99 @Cloudnirad @NammaBengaluroo @BellandurJothge @namma_BTM @BAFBLR @icindngr @BBMPCOMM @0RRCA pic.twitter.com/2Koy95Qxsu
ಇನ್ನುಳಿದಂತೆ, ಹಾಸನದಲ್ಲಿ ಶೇ 59.15ರಷ್ಟು, ಹಾವೇರಿಯಲ್ಲಿ ಶೇ 57.21ರಷ್ಟು, ಕೊಡಗಿನಲ್ಲಿ ಶೇ 58.24, ಕೋಲಾರದಲ್ಲಿ ಶೇ 54.81, ಕೊಪ್ಪಳದಲ್ಲಿ ಶೇ 56.45, ಮಂಡ್ಯದಲ್ಲಿ ಶೇ 58.39, ಮೈಸೂರಿನಲ್ಲಿ ಶೇ 52.45, ರಾಯಚೂರಿನಲ್ಲಿ ಶೇ 52.73, ಶಿವಮೊಗ್ಗದಲ್ಲಿ ಶೇ 56.10, ತುಮಕೂರಿನಲ್ಲಿ ಶೇ 58.45, ಉಡುಪಿಯಲ್ಲಿ ಶೇ 60.29, ಉತ್ತರ ಕನ್ನಡದಲ್ಲಿ ಶೇ 54.94, ವಿಜಯನಗರ ಜಿಲ್ಲೆಯಲ್ಲಿ ಶೇ 56.29 ಮತ್ತು ಯಾದಗಿರಿಯಲ್ಲಿ ಶೇ 46.61ರಷ್ಟು ಮತದಾನವಾಗಿದೆ.