ಬೆಂಗಳೂರು: ಒತ್ತುವರಿ ತೆರವು ಕಾರ್ಯಾಚರಣೆ, ಅವಲಹಳ್ಳಿ ಸ್ಟಡ್ ಫಾರ್ಮ್ ಬಿಡಿಎ ಸ್ವಾಧೀನ
ದಿಢೀರ್ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಅವಲಹಳ್ಳಿಯಲ್ಲಿರುವ ಸ್ಟಡ್ ಫಾರ್ಮ್ (ಕುದುರೆ ಫಾರ್ಮ್) ಭೂಮಿಯನ್ನು ಸ್ವಾಧೀನಕ್ಕೆ ಪಡೆದುಕೊಂಡಿದೆ.
Published: 19th May 2023 02:06 PM | Last Updated: 19th May 2023 08:03 PM | A+A A-

ಬಿಡಿಎ ಒತ್ತುವರಿ ತೆರವು ಕಾರ್ಯಾಚರಣೆ
ಬೆಂಗಳೂರು: ದಿಢೀರ್ ಅಕ್ರಮ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಅವಲಹಳ್ಳಿಯಲ್ಲಿರುವ ಸ್ಟಡ್ ಫಾರ್ಮ್ (ಕುದುರೆ ಫಾರ್ಮ್) ಭೂಮಿಯನ್ನು ಸ್ವಾಧೀನಕ್ಕೆ ಪಡೆದುಕೊಂಡಿದೆ.
ಬೆಂಗಳೂರಿನ ಯಲಹಂಕ ಸಮೀಪದ ಅವಲಹಳ್ಳಿ ಗ್ರಾಮದಲ್ಲಿ ನಡೆದ ದಿಢೀರ್ ಒತ್ತುವರಿ ತೆರವು ಕಾರ್ಯಾಚರಣೆಯಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಡಾ.ಶಿವರಾಮ ಕಾರಂತ್ ಲೇಔಟ್ ನಿರ್ಮಾಣಕ್ಕಾಗಿ 55 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದೆ. ಸ್ವಾಧೀನಪಡಿಸಿಕೊಂಡ ಭೂಮಿಯ ಒಂದು ಭಾಗವು ಗ್ರಾಮದಲ್ಲಿ ಸ್ಟಡ್ ಫಾರ್ಮ್ ಆಗಿತ್ತು ಎನ್ನಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ಬಿಡಿಎ ಅಧಿಕಾರಿಯೊಬ್ಬರು, '2008 ರಲ್ಲಿ ನೀಡಲಾದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಪ್ರಾಥಮಿಕ ಅಧಿಸೂಚನೆ ಮತ್ತು 2018 ರಲ್ಲಿ ಅಂತಿಮ ಅಧಿಸೂಚನೆಯನ್ನು ಅನುಸರಿಸಿ ಕ್ರಮ ಜರುಗಿಸಲಾಗಿದೆ. ಸ್ಟಡ್ ಫಾರ್ಮ್‌ನ ಮಾಲೀಕರಿಗೆ ಹಲವಾರು ನೋಟಿಸ್‌ಗಳನ್ನು ನೀಡಲಾಗಿದೆ. ಇದೀಗ ಒತ್ತುವರಿ ತೆರವು ಮಾಡಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದ್ದೇವೆ ಎಂದರು.
ಇದನ್ನೂ ಓದಿ: ಹುಣ್ಣಿಗೆರೆಯಲ್ಲಿ ಪೂರ್ಣಗೊಂಡ ಬಿಡಿಎ ವಸತಿ ಯೋಜನೆ: 2 ತಿಂಗಳಲ್ಲಿ ವಿಲ್ಲಾಗಳ ಮಾರಾಟ
ಸ್ಟಡ್ ಫಾರಂನ ಮೂರು ಕಿ.ಮೀ ಕಾಂಪೌಂಡ್ ಗೋಡೆಯ ಭಾಗವನ್ನು ಕೆಡವಲಾಗಿದೆ. ಆದರೆ ಕುದುರೆಗಳ ಲಾಯಗಳು, ಗದ್ದೆಗಳು ಮತ್ತು ಕೂಲಿ ಕಾರ್ಮಿಕರ ವಸತಿಗಳನ್ನು ಕೆಡವಲಾಗಿಲ್ಲ. ಫಾರ್ಮ್ 50 ಸ್ಟಾಲಿಯನ್‌ಗಳನ್ನು ಹೊಂದಿದೆ. ನಾವು ಬಾಕಿ ಜಾಗ ಖಾಲಿ ಮಾಡಲು ಸ್ಟಡ್ ಫಾರ್ಮ್ ಮಾಲೀಕರಿಗೆ ಸಮಯವನ್ನು ನೀಡುತ್ತೇವೆ. ಸ್ಟಾಲಿಯನ್‌ಗಳನ್ನು ಬೇರೆಡೆಗೆ ಸ್ಥಳಾಂತರಿಸಬೇಕು.. ಈ ಜಮೀನು ಮಾರ್ತಾಂಡ ಸಿಂಗ್ ಮಹೇಂದ್ರ ಅವರಿಗೆ ಸೇರಿದ್ದಾಗಿದೆ. ಡಾ.ಕಾರಂತ್ ಲೇಔಟ್‌ಗೆ ಭೂಸ್ವಾಧೀನ ಪ್ರಕ್ರಿಯೆ ಚುರುಕುಗೊಳಿಸುತ್ತಿದ್ದೇವೆ ಎಂದು ಹೇಳಿದ ಅವರು, ಇದಕ್ಕೆ 3,546 ಎಕರೆ ಮತ್ತು 12 ಗುಂಟಾ ಭೂಮಿ ಅಗತ್ಯವಿದೆ ಎಂದು ಹೇಳಿದರು.
ಭೂಸ್ವಾಧೀನ ಅಧಿಕಾರಿಗಳು, ಬಿಡಿಎ ಎಂಜಿನಿಯರ್‌ಗಳು, ಟಾಸ್ಕ್ ಫೋರ್ಸ್ ಸಿಬ್ಬಂದಿ ಮತ್ತು ಯಲಹಂಕ ಪೊಲೀಸರು ಬೆಳಿಗ್ಗೆ 7.30 ರಿಂದ 10 ಕ್ಕೆ ಮುಕ್ತಾಯಗೊಂಡ ಒತ್ತುವರಿ ತೆರವು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಇದನ್ನೂ ಓದಿ: ಅರ್ಕಾವತಿ ಲೇ ಔಟ್ ನಲ್ಲಿ ಬಿಡಿಎ ಎರಡು ಬಾರಿ ನಿವೇಶನ ಹಂಚಿಕೆ: ತೀವ್ರ ಹತಾಶೆಯಲ್ಲಿ ಮಾಜಿ ರಕ್ಷಣಾ ಸಿಬ್ಬಂದಿ, ಮೂಲಸೌಕರ್ಯ ಕುಂಠಿತ
ಇನ್ನು ದೊಡ್ಡಬಳ್ಳಾಪುರ ಮತ್ತು ಹೆಸರಘಟ್ಟ ನಡುವಿನ 17 ಗ್ರಾಮಗಳಲ್ಲಿ 5,337 ಕೋಟಿ ರೂಪಾಯಿ ವೆಚ್ಚದಲ್ಲಿ 28,000 ಸೈಟ್‌ಗಳನ್ನು ಸುಪ್ರೀಂ ಕೋರ್ಟ್ ನೇಮಕಗೊಂಡ ನ್ಯಾಯಮೂರ್ತಿ ಚಂದ್ರಶೇಖರ್ ಸಮಿತಿಯ ಮೇಲ್ವಿಚಾರಣೆಯಲ್ಲಿ ಅಭಿವೃದ್ಧಿಪಡಿಸುವ ಮೂಲಕ ಇದು ಬಿಡಿಎಯ ಎರಡನೇ ದೊಡ್ಡ ಲೇಔಟ್ ಆಗಿದೆ.