ಕರ್ನಾಟಕವನ್ನು 'ಮಾದಕವಸ್ತು ಮುಕ್ತ' ರಾಜ್ಯವನ್ನಾಗಿ ಮಾಡುವ ಗುರಿ: ನೂತನ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್

ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿ (ಡಿಜಿ–ಐಜಿಪಿ) ಡಾ. ಅಲೋಕ್ ಮೋಹನ್ ಅವರು ಸೋಮವಾರ ಪ್ರವೀಣ್ ಸೂದ್ ಅವರಿಂದ ಅಧಿಕಾರ ಸ್ವೀಕರಿಸಿದರು. ಡಿಜಿ–ಐಜಿಪಿಯಾಗಿದ್ದ ಪ್ರವೀಣ್ ಸೂದ್ ಅವರನ್ನು ಸೋಮವಾರ ಈ ಹುದ್ದೆಯಿಂದ ಬಿಡುಗಡೆ ಮಾಡಲಾಯಿತು.
ಅಲೋಕ್ ಮೋಹನ್
ಅಲೋಕ್ ಮೋಹನ್

ಬೆಂಗಳೂರು: ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿ (ಡಿಜಿ–ಐಜಿಪಿ) ಡಾ. ಅಲೋಕ್ ಮೋಹನ್ ಅವರು ಸೋಮವಾರ ಪ್ರವೀಣ್ ಸೂದ್ ಅವರಿಂದ ಅಧಿಕಾರ ಸ್ವೀಕರಿಸಿದರು. ಡಿಜಿ–ಐಜಿಪಿಯಾಗಿದ್ದ ಪ್ರವೀಣ್ ಸೂದ್ ಅವರನ್ನು ಸೋಮವಾರ ಈ ಹುದ್ದೆಯಿಂದ ಬಿಡುಗಡೆ ಮಾಡಲಾಯಿತು.

ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಡಿಜಿಪಿ ಅಲೋಕ್ ಮೋಹನ್ ಅವರಿಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿ-ಐಜಿಪಿ) ಹುದ್ದೆಯನ್ನು ಹೆಚ್ಚುವರಿಯಾಗಿ ನೀಡಿ ಎರಡು ದಿನಗಳ ಹಿಂದಷ್ಟೇ ಸರ್ಕಾರ ಆದೇಶ ಹೊರಡಿಸಿತ್ತು. 

ಬಿಹಾರದ ಪಾಟ್ನಾದವರಾದ ಅಲೋಕ್ 1987ನೇ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿದ್ದಾರೆ. ರಾಜ್ಯದ ಡಿಜಿ-ಐಜಿಪಿ ಹುದ್ದೆಯಲ್ಲಿದ್ದ ಪ್ರವೀಣ್ ಸೂದ್ ಅವರನ್ನು ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಸಿಬಿಐ) ನಿರ್ದೇಶಕರನ್ನಾಗಿ ನೇಮಿಸಲಾಗಿದೆ. 

ಔಪಚಾರಿಕವಾಗಿ ಅಧಿಕಾರ ಸ್ವೀಕರಿಸಿದ ನಂತರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅಲೋಕ್ ಮೋಹನ್, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ಮತ್ತು ಅಪರಾಧಗಳ ತಡೆಗಟ್ಟುವಿಕೆ ಮತ್ತು ಪತ್ತೆಗೆ ಆದ್ಯತೆ ನೀಡಲಾಗುವುದು. ಕರ್ನಾಟಕವನ್ನು ಮಾದಕ ದ್ರವ್ಯ ಮುಕ್ತ ರಾಜ್ಯವನ್ನಾಗಿ ಮಾಡುವುದು ಗುರಿಯಾಗಿದೆ ಎಂದರು.

ಸಂಘಟಿತ ಅಪರಾಧಗಳ ಬಗ್ಗೆ ಸಂಪೂರ್ಣ ಶೂನ್ಯ ಸಹಿಷ್ಣುತೆ ಇರುತ್ತದೆ. ಅದು ಜೂಜು, ವೇಶ್ಯಾವಾಟಿಕೆ ಅಥವಾ ಮಾದಕ ದ್ರವ್ಯ ದಂಧೆಯಾಗಿರಲಿ, ಯಾವುದೇ ವ್ಯಕ್ತಿ ಅಥವಾ ಯಾವುದೇ ಗ್ಯಾಂಗ್ ಭಾಗಿಯಾಗಿರಲಿ, ಅಂತಹ ಅಂಶಗಳ ವಿರುದ್ಧ ನಾವು ಶಿಸ್ತುಕ್ರಮ ಕೈಗೊಳ್ಳುತ್ತೇವೆ. ಮಾದಕವಸ್ತು ಕಳ್ಳಸಾಗಣೆ ಪ್ರಕರಣಗಳಲ್ಲಿ ಸಮಗ್ರ ತನಿಖೆ ನಡೆಸಲಾಗುವುದು. ತಳಮಟ್ಟದ ಜಾಲವನ್ನು ಕೂಡ ಬೇಧಿಸಲಾಗುವುದು ಎಂದು ಪೊಲೀಸ್ ಪಡೆಯ ಹೊಸ ಮುಖ್ಯಸ್ಥರು ಎಚ್ಚರಿಸಿದ್ದಾರೆ. 

ಭವಿಷ್ಯದಲ್ಲಿ ಹೆಚ್ಚಿನ ಅಪರಾಧಗಳು ಸೈಬರ್ ಅಪರಾಧಗಳಾಗಿರುತ್ತವೆ ಎಂದು ಒತ್ತಿ ಹೇಳಿದ ಅವರು, ಹೊಸ ತಂತ್ರಜ್ಞಾನದ ಅಪರಾಧಗಳನ್ನು ತನಿಖೆ ಮಾಡಲು ಪ್ರತಿಯೊಬ್ಬರನ್ನು ಸಕ್ರಿಯಗೊಳಿಸಲು ಪೊಲೀಸ್ ಸಿಬ್ಬಂದಿಗೆ ತರಬೇತಿ ನೀಡಲಾಗುವುದು. ವೈಟ್ ಕಾಲರ್ ಮತ್ತು ಸೈಬರ್ ಅಪರಾಧಗಳನ್ನು ತನಿಖೆ ಮಾಡಲು ಪ್ರತಿ ಸಿಬ್ಬಂದಿಗೆ ತರಬೇತಿ ನೀಡಲಾಗುವುದು. ಅಧಿಕಾರಿಗಳು ತಾಂತ್ರಿಕ ಪರಿಣತಿ ಹೊಂದಿದ್ದಾರೆ ಮತ್ತು ಅಗತ್ಯವಿರುವ ತರಬೇತಿಯನ್ನು ನೀಡಲಾಗುವುದು. ದೂರುಗಳಿಗೆ ಸ್ಪಂದಿಸದ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು. 

ಸಾರ್ವಜನಿಕರೊಂದಿಗೆ ಸರಿಯಾದ ನಡವಳಿಕೆ ಅತ್ಯಗತ್ಯ ಮತ್ತು ಸಿಬ್ಬಂದಿ ಮಾನವ ಹಕ್ಕುಗಳನ್ನು ಗೌರವಿಸಬೇಕು. ಕೋರ್ಟ್ ಮತ್ತು ಹೈಕೋರ್ಟ್ ಹೊರಡಿಸಿದ ಮಾರ್ಗಸೂಚಿಗಳನ್ನು ಅನುಸರಿಸಬೇಕು. ಸಮಾಜಘಾತುಕ ಶಕ್ತಿಗಳೊಂದಿಗೆ ಪೊಲೀಸರು ಕೈಜೋಡಿಸುತ್ತಿರುವ ಕುರಿತು ಅವರು, 'ನೀವು ಸಮವಸ್ತ್ರವನ್ನು ಧರಿಸಿರಲಿ ಅಥವಾ ಧರಿಸದಿರಲಿ, ಅದು ಇಲಾಖೆಯ ಒಳಗೆ ಅಥವಾ ಹೊರಗೆ ಇರಲಿ, ಒಬ್ಬ ಅಪರಾಧಿಯು ಅಪರಾಧಿಯೇ. ಸಮಾಜವಿರೋಧಿ ಚಟುವಟಿಕೆಗಳಲ್ಲಿ ತೊಡಗುವವರ ಬಗ್ಗೆ ನಾವು ನಿಷ್ಕರುಣೆ ತೋರುತ್ತೇವೆ ಎಂದು ಅವರು ಹೇಳಿದರು.

ಇದಲ್ಲದೆ, ನಗರಗಳು ಮತ್ತು ಹೆದ್ದಾರಿಗಳಲ್ಲಿ ನಿಯಮ ಉಲ್ಲಂಘನೆಗಾಗಿ ವಾಹನಗಳನ್ನು ಪರಿಶೀಲಿಸುವ ಬದಲು ಟ್ರಾಫಿಕ್ ಅನ್ನು ನಿಯಂತ್ರಿಸುವ ಮೂಲಕ ಸಂಚಾರ ನಿರ್ವಹಣೆಗೆ ಪ್ರಾಮುಖ್ಯತೆ ನೀಡಲಾಗುವುದು. ಇದೇ ವೇಳೆ, ಸಿಬ್ಬಂದಿಯ ಮಾನಸಿಕ ಮತ್ತು ದೈಹಿಕ ಸ್ವಾಸ್ಥ್ಯ ಉತ್ತಮ ಪೋಲೀಸಿಂಗ್‌ಗೆ ಪ್ರಮುಖವಾಗಿದ್ದು, ಅದಕ್ಕೆ ಪ್ರಾಮುಖ್ಯತೆ ನೀಡಲಾಗುವುದು ಎಂದು ಅವರು ಒತ್ತಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com