
ಬೆಂಗಳೂರು: 23 ವರ್ಷದ ರೌಡಿಶೀಟರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಪಿ ಅಗ್ರಹಾರ ಪೊಲೀಸರು ಮೂವರು ಆರೋಪಿಗಳನ್ನು ಶನಿವಾರ ಬಂಧನಕ್ಕೊಳಪಡಿಸಿದ್ದಾರೆ.
ಮೇ 22 ರಂದು ಕೆಪಿ ಅಗ್ರಹಾರದ ಚೆಲುವಪ್ಪ ಗಾರ್ಡನ್‌ನಲ್ಲಿರುವ ದೇವಸ್ಥಾನದ ಬಳಿ ಕುಡಿದ ಅಮಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ನಡೆದ ಗಲಾಟೆ ವೇಳೆ ಸಾಗರ್ ಅಲಿಯಾಸ್ ಚಿನ್ನು ಎಂಬ ರೌಡಿಶೀಟರ್ ನನ್ನು ಹತ್ಯೆ ಮಾಡಲಾಗಿತ್ತು.
ಸಾಗರ್ ಅವರ ತಾಯಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆರೋಪಿಗಳಿಗಾಗಿ ಬಲೆ ಬೀಸಿದ್ದರು.
ಇದರಂತೆ ನಿನ್ನೆ ಕೆ.ನವೀನ್ (28), ಹೇಮಂತ್ ಕುಮಾರ್ ಅಲಿಯಾಸ್ ರೋಸಿ (28) ಮತ್ತು ಕುಮಾರ್ ಅಲಿಯಾಸ್ ಡಿಯೋ ಕುಮಾರ್ (20)ನನ್ನು ಬಂಧನಕ್ಕೊಳಪಡಿಸಿದ್ದಾರೆ.