ಬೆಂಗಳೂರು: ನಮ್ಮ ಯಾತ್ರಿಯಿಂದ ಅಂಗವಿಕಲರಿಗಾಗಿ ಪರ್ಪಲ್ ರೈಡ್ ಸೇವೆ ಆರಂಭ

ಬೆಂಗಳೂರು ಮೂಲದ ಆ್ಯಪ್ ಆಧಾರಿತ ಸಂಸ್ಥೆ ನಮ್ಮ ಯಾತ್ರಿಯು ಎನೆಬಲ್ ಇಂಡಿಯಾ ಸ್ವಯಂ ಸೇವಾ ಸಂಸ್ಥೆ ಸಹಯೋಗದಲ್ಲಿ ಅಂಗವಿಕಲ ಸ್ನೇಹಿ ಆಟೋರಿಕ್ಷಾ ಸೌಲಭ್ಯ ಪರ್ಪಲ್ ರೈಡ್ ಯೋಜನೆಗೆ ಜಾಲನೆ ನೀಡಿದೆ.
ನಮ್ಮ ಯಾತ್ರಿ
ನಮ್ಮ ಯಾತ್ರಿ

ಬೆಂಗಳೂರು: ಬೆಂಗಳೂರು ಮೂಲದ ಆ್ಯಪ್ ಆಧಾರಿತ ಸಂಸ್ಥೆ ನಮ್ಮ ಯಾತ್ರಿಯು ಎನೆಬಲ್ ಇಂಡಿಯಾ ಸ್ವಯಂ ಸೇವಾ ಸಂಸ್ಥೆ ಸಹಯೋಗದಲ್ಲಿ ಅಂಗವಿಕಲ ಸ್ನೇಹಿ ಆಟೋರಿಕ್ಷಾ ಸೌಲಭ್ಯ ಪರ್ಪಲ್ ರೈಡ್ ಯೋಜನೆಗೆ ಜಾಲನೆ ನೀಡಿದೆ.

ಅಂಧರು, ಶ್ರವಣದೋಷವುಳ್ಳವರು ಹಾಗೂ ಅಂಗವಿಕಲ ವಾಹನ ಸವಾರರಿಗೆ ಅನುಗುಣವಾಗಿ ಪರ್ಪಲ್‌ ರೈಡ್ಸ್‌ ಅನ್ನು ನಮ್ಮ ಯಾತ್ರಿ ಪ್ರಾರಂಭಿಸಿದೆ.

ಈಗಾಗಲೇ ಇದರಲ್ಲಿ 3,500 ಗ್ರಾಹಕರು ಮತ್ತು 1,300 ಚಾಲಕರು ಈ ಸೇವೆನ್ನು ಬಳಸುತ್ತಿದ್ದು, 6 ಸಾವಿರಕ್ಕೂ ಹೆಚ್ಚು ಟ್ರಿಪ್‌ಗಳನ್ನು ಪೂರ್ಣಗೊಳಿಸಿದ್ದಾರೆ’ ಎಂದು ನಮ್ಮ ಯಾತ್ರಿ ಆ್ಯಪ್‌ನ ಎಂ.ಎಸ್. ಶಾನ್‌ ಮಾಹಿತಿ ನೀಡಿದ್ದಾರೆ.

‘ಪರ್ಪಲ್ ರೈಡ್ಸ್‌ನಲ್ಲಿ ಅಂಗವಿಕಲ ಗ್ರಾಹಕರ ಅಗತ್ಯಗಳನ್ನು ಅರ್ಥ ಮಾಡಿಕೊಂಡು ಚಾಲಕರು ಕೆಲಸ ಮಾಡುತ್ತಾರೆ. ಶ್ರವಣ ದೋಷವುಳ್ಳ ಬಳಕೆದಾರರಿಗೆ ಆಟೊ, ಬೈಕ್‌ ಚಾಲಕರೊಂದಿಗೆ ಫೋನ್‌ ಕರೆಗಳ ಬದಲಿಗೆ ಸಂದೇಶಗಳ ಮೂಲಕ ಸಂವಹನ ನಡೆಸಬಹುದು. ಅಂಧರು ಟಾಕ್‌ಬ್ಯಾಕ್‌ ಸಹಾಯದಿಂದ ಸಂವಹನ ನಡೆಸಬಹುದು’ ಎಂದು ಮಾಹಿತಿ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com