ಸಹೋದ್ಯೋಗಿ ಮೇಲೆ ಗುಂಡು ಹಾರಿಸಿದ ಖಾಸಗಿ ಗನ್ ಮ್ಯಾನ್ ಬಂಧನ

ಸಹೋದ್ಯೋಗಿ ಮೇಲೆ ಗುಂಡು ಹಾರಿಸಿದ ಆರೋಪದ ಮೇರೆಗೆ ಖಾಸಗಿ ಗನ್ ಮ್ಯಾನ್ ಒಬ್ಬರನ್ನು ಬೆಂಗಳೂರು ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಸಹೋದ್ಯೋಗಿ ಮೇಲೆ ಗುಂಡು ಹಾರಿಸಿದ ಆರೋಪದ ಮೇರೆಗೆ ಖಾಸಗಿ ಗನ್ ಮ್ಯಾನ್ ಒಬ್ಬರನ್ನು ಬೆಂಗಳೂರು ಪೊಲೀಸರು ಗುರುವಾರ ಬಂಧಿಸಿದ್ದಾರೆ.

ನಗರದ ಖ್ಯಾತ ಉದ್ಯಮಿಯೊಬ್ಬರ 39 ವರ್ಷದ ಖಾಸಗಿ ಗನ್‌ಮ್ಯಾನ್‌ನನ್ನು ಸಹೋದ್ಯೋಗಿ ಮೇಲೆ ಗುಂಡು ಹಾರಿಸಿದ ಆರೋಪದ ಮೇರೆಗೆ ತಿಲಕನಗರ ಪೊಲೀಸರು ಬಂಧಿಸಿದ್ದಾರೆ.

ಮೂಲಗಳ ಪ್ರಕಾರ ಆಗಸ್ಟ್ 26 ರ ಮಧ್ಯರಾತ್ರಿ ಈ ಘಟನೆ ಸಂಭವಿಸಿದ್ದು, ಆರೋಪಿಯನ್ನು ನಿವೃತ್ತ ಸೈನಿಕ ಪ್ರಶಾಂತ್ ಎಂದು ಗುರುತಿಸಲಾಗಿದೆ. ಆತ ತನ್ನ ಸಹೋದ್ಯೋಗಿ ಪಿಪಿ ಅನಿಲ್ ಕುಮಾರ್ ಮೇಲೆ ಬಂದೂಕಿನಿಂದ ಹಲ್ಲೆ ನಡೆಸಿದ್ದ ಎಂದು ಆರೋಪಿಸಲಾಗಿದೆ. ಮಾಜಿ ಸೈನಿಕರೂ ಆಗಿರುವ ಕುಮಾರ್ (48) ಅವರು ಗುಂಡು ತಪ್ಪಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆ ಬಳಿರ ಕುಮಾರ್ ಪೊಲೀಸರಿಗೆ ದೂರು ನೀಡಿದ್ದಾರೆ.

ಜಯನಗರದಲ್ಲಿರುವ ತಮ್ಮ ಮಾಲೀಕ ದೀಪಕ್ ಗೌಡ ಎಂಬಾತ ನೀಡಿದ ಮನೆಯಲ್ಲಿ ಸ್ನೇಹಿತನ ಜತೆ ಇಬ್ಬರೂ ಮದ್ಯ ಸೇವಿಸುತ್ತಿದ್ದಾಗ ಈ ಘಟನೆ ನಡೆದಿದೆ. ಪತ್ನಿಯ ಫೋನ್ ಕರೆಗೆ ಉತ್ತರಿಸುತ್ತಿದ್ದ ಆರೋಪಿ, ಆಕೆಯ ಮೇಲೆ ಕೂಗಾಡಲು ಆರಂಭಿಸಿದ್ದಾನೆ. ಕುಮಾರ್ ಧ್ವನಿ ತಗ್ಗಿಸುವಂತೆ ಕೇಳಿಕೊಂಡರು. ಇದರಿಂದ ಕುಪಿತಗೊಂಡ ಅವರು ಕುಮಾರ್‌ಗೆ ಗುಂಡು ಹಾರಿಸಲು ಯತ್ನಿಸಿದ್ದರು ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ಪ್ರಸ್ತುತ ದೂರು ದಾಖಲಿಸಿಕೊಂಡು ಆರೋಪಿ ಪ್ರಶಾಂತ್ ರನ್ನು ವಶಕ್ಕೆ ಪಡೆದಿರುವ ಪೊಲೀಸರು ಆರೋಪಿಯಿಂದ ಲೈಸನ್ಸ್‌ ಹೊಂದಿರುವ ಗನ್‌ ವಶಪಡಿಸಿಕೊಂಡಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com