ಬೆಂಗಳೂರು: ಮಾರ್ಗ ಬದಲಿಸಿದ ಚಾಲಕ; ವೇಗವಾಗಿ ಸಂಚರಿಸುತ್ತಿದ್ದ ಆಟೋದಿಂದ ಜಿಗಿದು ಕೈ ಮುರಿದುಕೊಂಡ ಮಹಿಳೆ!

ವೇಗವಾಗಿ ಸಂಚರಿಸುತ್ತಿದ್ದ ಆಟೋರಿಕ್ಷಾದಿಂದ ಹಾರಿ ಕೇರಳದ 25 ವರ್ಷದ ಡೇಟಾ ಅನಲಿಸ್ಟ್ ಒಬ್ಬರು ಬಲಗೈ ಮುರಿದುಕೊಂಡಿರುವ ಘಟನೆ ಶನಿವಾರ ಮಧ್ಯಾಹ್ನ ಮಹದೇವಪುರ ಪೊಲೀಸ್ ವ್ಯಾಪ್ತಿಯ ಪೈ ಲೇಔಟ್‌ನಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ವೇಗವಾಗಿ ಸಂಚರಿಸುತ್ತಿದ್ದ ಆಟೋರಿಕ್ಷಾದಿಂದ ಹಾರಿ ಕೇರಳದ 25 ವರ್ಷದ ಡೇಟಾ ವಿಶ್ಲೇಷಕರೊಬ್ಬರು ಬಲಗೈ ಮುರಿದುಕೊಂಡಿರುವ ಘಟನೆ ಶನಿವಾರ ಮಧ್ಯಾಹ್ನ ಮಹದೇವಪುರ ಪೊಲೀಸ್ ವ್ಯಾಪ್ತಿಯ ಪೈ ಲೇಔಟ್‌ನಲ್ಲಿ ನಡೆದಿದೆ.

ಪ್ರಶಾಂತ್ ಲೇಔಟ್‌ನ ಹೋಪ್ ಫಾರ್ಮ್ ಬಳಿ ಪೇಯಿಂಗ್ ಗೆಸ್ಟ್ ಸೌಲಭ್ಯದಲ್ಲಿ ವಾಸಿಸುತ್ತಿರುವ ಸಂತ್ರಸ್ತೆ ರೋಶಿನಿ ಜೋಸೆಫ್, ಬಿ ನಾರಾಯಣಪುರದ ಜಿಮ್ ಬಳಿಯಿಂದ ವಿಜಿನಾಪುರದ ಬೃಂದಾವನ ಲೇಔಟ್‌ಗೆ ಆಟೋ ಬಾಡಿಗೆಗೆ ಪಡೆದಿದ್ದರು.

ಆಕೆ ಆಟೋ ಹತ್ತಿದ ನಂತರ, ಚಾಲಕ ಜನರಲ್ ರೂಟ್ ಬಿಟ್ಟು ಬೇರೆ ಮಾರ್ಗವನ್ನು ಹಿಡಿದಿದ್ದ, ಇದನ್ನೂ ಗಮನಿಸಿ ಅನುಮಾನಿಸಿದ ಆಕೆ ಚಾಲಕನನ್ನು ನಿಲ್ಲಿಸಲು ಕೇಳಿದಳು, ಆದರೆ ಚಾಲಕ ವೇಗವಾಗಿ ಓಡಿಸುತ್ತಿದ್ದ. ತೊಂದರೆ ಗ್ರಹಿಸಿದ ಆಕೆ ಐಟಿಪಿಎಲ್ ರಸ್ತೆಯ ಪೈ ಲೇಔಟ್‌ನಲ್ಲಿ ಮಧ್ಯಾಹ್ನ 2.45 ರ ಸುಮಾರಿಗೆ ವೇಗವಾಗಿ ಓಡುತ್ತಿದ್ದ ಆಟೋದಿಂದ ಜಿಗಿದಿದ್ದಾಗಿ ರೋಶಿನಿ ಹೇಳಿದ್ದಾರೆ.

ತನಗೆ ನಾಲ್ಕು ವಾರಗಳ ಕಾಲ ಬೆಡ್ ರೆಸ್ಟ್‌ಗೆ ಸಲಹೆ ನೀಡಲಾಗಿದೆ ಮತ್ತು ನಡೆಯಲು ಸಾಧ್ಯವಾಗುತ್ತಿಲ್ಲ ಎಂದು ಆಕೆ ಹೇಳಿದರು. “ಮ್ಯಾಪ್ ನಲ್ಲಿ, ಪ್ರಯಾಣದ ಸಮಯವು ಕೇವಲ ಒಂಬತ್ತು ನಿಮಿಷಗಳನ್ನು ತೋರಿಸುತ್ತಿತ್ತು. ಆದರೆ ಅವರು ಸುಮಾರು 15 ನಿಮಿಷಗಳ ಕಾಲ ಬೇರೆ ದಿಕ್ಕಿನಲ್ಲಿ ಸಂಚರಿಸಿದರು. ರಸ್ತೆಯಲ್ಲಿ ವಾಹನಗಳಾಗಲಿ, ಜನರಾಗಲಿ ಇರಲಿಲ್ಲ. ನಾನು ಆಟೋದಿಂದ ಜಿಗಿದ ನಂತರ, ಚಾಲಕ ವೇಗವಾಗಿ ಓಡಿಸಿದ. ಚಾಲಕ ಹಿಂದಿ ಮಾತನಾಡುತ್ತಿದ್ದನು ಎಂದು ಆಕೆ ವಿವರಿಸಿದ್ದಾರೆ.

ರಸ್ತೆಯಲ್ಲಿ ಯಾವುದೇ ಸಹಾಯ ಸಿಗದ ಕಾರಣ ಆಕೆ ತನ್ನ ಸಹೋದರಿಗೆ ಕರೆ ಮಾಡಿದರು, ನಂತರ ಆಕೆ ಆಸ್ಪತ್ರೆಗೆ ಕರೆದೊಯ್ದಳು. “ನಾನು ತೀವ್ರ ನೋವಿನಲ್ಲಿದ್ದೇನೆ. ನನ್ನ ಸೊಂಟಕ್ಕೆ ತುಂಬಾ ನೋವಾಗಿದೆ ಮತ್ತು ನನ್ನ ಬಲಗೈ ಮುರಿದಿದೆ ಎಂದು ಅವರು ಹೇಳಿದರು. ತನ್ನ ತಾಯಿ ತನ್ನೊಂದಿಗೆ ನಗರದಲ್ಲಿ ಇರಲು ಬಯಸಿದ್ದರಿಂದ ತಾನು ಮನೆಯನ್ನು ಹುಡುಕುತ್ತಿದ್ದೇನೆ ಎಂದು ರೋಶಿನಿ ಹೇಳಿದರು. ಅಂದು ಮಹದೇವಪುರದ ಮನೆಗಳನ್ನು ನೋಡಲು ಒಬ್ಬರನ್ನು ಭೇಟಿಯಾಗಬೇಕಿತ್ತು ಎಂದು ವಿವರಿಸಿದ್ದಾರೆ.

ದೂರಿನ ಮೇರೆಗೆ ಪೊಲೀಸರು ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದರು ಆದರೆ ಮೂಲಗಳ ಪ್ರಕಾರ ಆಟೋರಿಕ್ಷಾದ ನೋಂದಣಿ ಸಂಖ್ಯೆಯನ್ನು ಸರಿಯಾಗಿ ನೋಡಲಾಗಲಿಲ್ಲ. “ಚಾಲಕನನ್ನು ಇನ್ನೂ ಬಂಧಿಸಲಾಗಿಲ್ಲ. ಆಟೋ ಚಾಲಕನ ವಿರುದ್ಧ ಇತರರ ಜೀವ ಅಥವಾ ವೈಯಕ್ತಿಕ ಸುರಕ್ಷತೆಗೆ (IPC 337) ಅಪಾಯವನ್ನುಂಟುಮಾಡುವ ಕೃತ್ಯದಿಂದ ನೋವುಂಟುಮಾಡುವ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com