ಬೆಂಗಳೂರು: ಗಣೇಶ ಹಬ್ಬದ ಮೊದಲ ದಿನವೇ 1.52 ಲಕ್ಷ ಮೂರ್ತಿ ವಿಸರ್ಜನೆ, 10,000ಕ್ಕೂ ಹೆಚ್ಚು ಪಿಒಪಿ ಮೂರ್ತಿ

ಗಣೇಶ ಹಬ್ಬದ ಮೊದಲ ದಿನವಾದ ಸೋಮವಾರ ಬಿಬಿಎಂಪಿ ವ್ಯಾಪ್ತಿಯಲ್ಲಿ 418 ಸಂಚಾರಿ ವಿಸರ್ಜನಾ ಟ್ಯಾಂಕ್‌ಗಳು ಮತ್ತು 39 ಕಲ್ಯಾಣಿಗಳಲ್ಲಿ ಒಟ್ಟು 1,52,965 ಮೂರ್ತಿ ವಿಸರ್ಜನೆ ನಡೆದಿದೆ. ಇದರಲ್ಲಿ 10,000 ಕ್ಕೂ ಹೆಚ್ಚು ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಮೂರ್ತಿಗಳಾಗಿವೆ.
ಹಲಸೂರು ಕೆರೆಯಲ್ಲಿ ಗಣೇಶ ಮೂರ್ತಿ ವಿಸರ್ಜನೆ (ಫೋಟೊ- ನಾಗರಾಜ ಗಡೇಕಲ್, ಎಕ್ಸ್‌ಪ್ರೆಸ್)
ಹಲಸೂರು ಕೆರೆಯಲ್ಲಿ ಗಣೇಶ ಮೂರ್ತಿ ವಿಸರ್ಜನೆ (ಫೋಟೊ- ನಾಗರಾಜ ಗಡೇಕಲ್, ಎಕ್ಸ್‌ಪ್ರೆಸ್)
Updated on

ಬೆಂಗಳೂರು: ಗಣೇಶ ಹಬ್ಬದ ಮೊದಲ ದಿನವಾದ ಸೋಮವಾರ ಬಿಬಿಎಂಪಿ ವ್ಯಾಪ್ತಿಯಲ್ಲಿ 418 ಸಂಚಾರಿ ವಿಸರ್ಜನಾ ಟ್ಯಾಂಕ್‌ಗಳು ಮತ್ತು 39 ಕಲ್ಯಾಣಿಗಳಲ್ಲಿ ಒಟ್ಟು 1,52,965 ಮೂರ್ತಿ ವಿಸರ್ಜನೆ ನಡೆದಿದೆ. ಇದರಲ್ಲಿ 10,000 ಕ್ಕೂ ಹೆಚ್ಚು ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಮೂರ್ತಿಗಳಾಗಿವೆ.

ಪಿಒಪಿ ವಿಗ್ರಹಗಳನ್ನು ಬಿಬಿಎಂಪಿ ನಿಷೇಧಿಸಿದೆ. ಹೊಸ ನಿಯಮಗಳು ಮತ್ತು ಜಾಗೃತಿಯಿಂದಾಗಿ ಈ ವರ್ಷ ಪಿಒಪಿ ಮೂರ್ತಿಗಳ ಸಂಖ್ಯೆ ತೀವ್ರವಾಗಿ ಕಡಿಮೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಿಒಪಿ ಮೂರ್ತಿಗಳ ಬಳಕೆಯನ್ನು ನಿಷೇಧಿಸಿದ್ದರೂ ಸಂಚಾರಿ ವಿಸರ್ಜನಾ ಟ್ಯಾಂಕ್‌ಗಳಲ್ಲಿ 10,248 ಪಿಒಪಿ ಗಣೇಶ ಮೂರ್ತಿಗಳು ಪತ್ತೆಯಾಗಿವೆ. ಕೆರೆಗಳಲ್ಲಿ ಯಾವುದೇ ಪಿಒಪಿ ಮೂರ್ತಿ ವಿಸರ್ಜನೆಗೆ ಅನುಮತಿ ನೀಡಲಾಗಿಲ್ಲ.

'ಸರ್ಕಾರ ಹೊಸ ನಿಯಮಗಳನ್ನು ಜಾರಿಗೆ ತಂದಿದೆ ಮತ್ತು ಪಿಒಪಿ ವಿಗ್ರಹಗಳನ್ನು ತಯಾರಿಸುವ ಮತ್ತು ಮಾರಾಟ ಮಾಡುವವರ ವಿರುದ್ಧ ದಂಡ ಮತ್ತು ಜೈಲು ವಿಧಿಸುವುದಾಗಿ ಘೋಷಿಸಿದೆ. ಸರ್ಕಾರಿ ನಾಗರಿಕ ಸಂಸ್ಥೆಗಳು ಮತ್ತು ಎನ್‌ಜಿಒಗಳ ಜಾಗೃತಿ ಅಭಿಯಾನಗಳು ಪಿಒಪಿ ವಿಗ್ರಹಗಳ ಸಂಖ್ಯೆಯಲ್ಲಿ ಇಳಿಕೆ ಕಾಣುವಂತೆ ಮಾಡಿವೆ ಮತ್ತು ಮುಂದಿನ ವರ್ಷ ಈ ಸಂಖ್ಯೆಯಲ್ಲಿ ಮತ್ತಷ್ಟು ಇಳಿಕೆ ಕಾಣುವ ನಿರೀಕ್ಷೆಯಿದೆ' ಎಂದು ಫ್ರೆಂಡ್ಸ್ ಆಫ್ ಲೇಕ್ಸ್‌ನ ಸಹ-ಸಂಸ್ಥಾಪಕ ರಾಮ್ ಪ್ರಸಾದ್ ಹೇಳಿದ್ದಾರೆ.

  
  

ಬೆಂಗಳೂರು ದಕ್ಷಿಣ ಅತಿ ಹೆಚ್ಚು ವಿಗ್ರಹ ವಿಸರ್ಜನೆಗೆ ಸಾಕ್ಷಿಯಾಗಿದ್ದು, ಸುಮಾರು 60,000 ಗಣೇಶ ವಿಗ್ರಹಗಳ ವಿಸರ್ಜನೆ ನಡೆದಿದೆ ಮತ್ತು ಅವುಗಳಲ್ಲಿ ಹೆಚ್ಚಿನವು ಯಡಿಯೂರು ಕೆರೆಯಲ್ಲಿ ವಿಸರ್ಜಿಸಲಾಗಿದೆ. ಬೆಂಗಳೂರು ಪಶ್ಚಿಮ ವಲಯದಲ್ಲಿ ಸುಮಾರು 36,000 ಮೂರ್ತಿಗಳನ್ನು ಹೆಚ್ಚಾಗಿ ಸ್ಯಾಂಕಿ ಟ್ಯಾಂಕ್ ಕಲ್ಯಾಣಿಯಲ್ಲಿ ವಿಸರ್ಜನೆ ಮಾಡಲಾಗಿದೆ  ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏಷ್ಯಾ ಬುಕ್ ಆಫ್ ರೆಕಾರ್ಡ್‌ಗೆ ಸೇರಿದ 21 ಅಡಿ ಪರಿಸರ ಸ್ನೇಹಿ ಗಣೇಶನ ವಿಗ್ರಹ

ಬೆಂಗಳೂರಿನ ವಿದ್ಯಾರ್ಥಿಗಳು 21 ಅಡಿ ಎತ್ತರದ ಗಣೇಶನ ಪ್ರತಿಮೆಯನ್ನು ರಚಿಸಿದ್ದಾರೆ. ಇದು ನವೀಕರಿಸಿದ ವಸ್ತುಗಳನ್ನು ಬಳಸಿ ತಯಾರಿಸಿದ ವಿಶ್ವದ ಅತಿದೊಡ್ಡ ವಿಗ್ರಹ ಎಂದು ಹೇಳಲಾಗುತ್ತಿದೆ. ಈ ವಿಗ್ರಹವನ್ನು ಶಾಂತಾಮಣಿ ಕಲಾ ಕೇಂದ್ರವು ಜೈನ್ (ಡೀಮ್ಡ್-ಟು-ಬಿ ಯೂನಿವರ್ಸಿಟಿ) ಸ್ಕೂಲ್ ಆಫ್ ಡಿಸೈನ್, ಮೀಡಿಯಾ ಮತ್ತು ಕ್ರಿಯೇಟಿವ್ ಆರ್ಟ್ಸ್‌ನ ಸಹಯೋಗದೊಂದಿಗೆ ರಚಿಸಿದೆ. 21 ವಿದ್ಯಾರ್ಥಿಗಳು, ಬೋಧಕರು ಮತ್ತು ಸಿಬ್ಬಂದಿ ಸೇರಿ 21 ಗಂಟೆಗಳಲ್ಲಿ 21 ಕೆಜಿ ಹಿಟ್ಟು ಮತ್ತು 108 ಕೆಜಿ ಸುದ್ದಿ ಪತ್ರಿಕೆಗಳನ್ನು ಬಳಸಿ ತಯಾರಿಸಲಾಗಿದ್ದು, ಇದನ್ನು ಏಷ್ಯಾ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಅಂಗೀಕರಿಸಿದೆ.

ವಿಗ್ರಹ ವಿಸರ್ಜನೆಗಾಗಿ ಸಂಚಾರ ಸಲಹೆ

ಕೆಜಿ ಹಳ್ಳಿ, ಪುಲಕೇಶಿನಗರದಲ್ಲಿ ಈ ಸಂಚಾರಿ ನಿಯಮಗಳನ್ನು ಪಾಲಿಸಿ

* ನಾಗವಾರ ಜಂಕ್ಷನ್‌ನಿಂದ ಕುಂಬಾರ ವೃತ್ತದವರೆಗೆ ಬೆಳಗ್ಗೆ 10ರಿಂದ ರಾತ್ರಿ 10ರವರೆಗೆ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ.

* ನೇತಾಜಿ ವೃತ್ತದಿಂದ ಕುಂಬಾರ ವೃತ್ತದ ಕಡೆಗೆ ವಾಹನ ಸಂಚಾರ ನಿಷೇಧಿಸಲಾಗಿದೆ

* ಕೆನ್ಸಿಂಗ್ಟನ್ ರಸ್ತೆಯಿಂದ ಎಂಇಜಿ ಸೆಂಟರ್ ಮೂಲಕ ಹಲಸೂರು ಕೆರೆ ಕಡೆಗೆ ತಾತ್ಕಾಲಿಕ ನಿರ್ಬಂಧ

* ಎಂಇಜಿ ಕೇಂದ್ರದಿಂದ ಕೆನ್ಸಿಂಗ್ಟನ್ ರಸ್ತೆ ಕಡೆಗೆ ಸಂಚಾರಕ್ಕೆ ಅನುಮತಿ

ಪಾರ್ಕಿಂಗ್ ನಿರ್ಬಂಧ

ನಾಗವಾರ ಜಂಕ್ಷನ್‌ನಿಂದ ಕುಂಬಾರ ವೃತ್ತ, ಗೋವಿಂದಪುರ ಜಂಕ್ಷನ್‌ನಿಂದ ಗೋವಿಂದಪುರ ಪೊಲೀಸ್ ಠಾಣೆ ಮತ್ತು ಎಚ್‌ಬಿಆರ್ ಲೇಔಟ್ ಸಿದ್ದಪ್ಪ ರೆಡ್ಡಿ ಜಂಕ್ಷನ್‌ನಿಂದ ನರೇಂದ್ರ ಟೆಂಟ್ ಜಂಕ್ಷನ್, ಪಾಟರಿ ಸರ್ಕಲ್‌ನಿಂದ ಲಾಜರ್ ರಸ್ತೆ, ಸಿಂಧಿ ಕಾಲೋನಿ ಜಂಕ್ಷನ್‌ನಿಂದ ವಾರ್ ಮೆಮೋರಿಯಲ್, ಹಲಸೂರು ಕೆರೆಯ ಮುಖ್ಯ ದ್ವಾರ ಮತ್ತು ಕೆರೆಯ ಸುತ್ತ ಎರಡೂ ಬದಿಗಳಲ್ಲಿ ವಾಹನಗಳ ನಿಲುಗಡೆಗೆ ನಿರ್ಬಂಧ ವಿಧಿಸಲಾಗಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com