ಸಂಗ್ರಹ ಚಿತ್ರ
ರಾಜ್ಯ
ಕಲಬುರಗಿ: ಕೂಲಿ ಕೆಲಸಕ್ಕೆ ಹೋಗಿದ್ದ ಮಹಿಳೆಯರಿಬ್ಬರನ್ನು ಕಲ್ಲಿನಿಂದ ಜಜ್ಜಿ ಭೀಕರ ಹತ್ಯೆ
ಕೂಲಿ ಕೆಲಸಕ್ಕೆಂದು ಜಮೀನಿಗೆ ಹೋಗಿ ಮಹಿಳೆಯರಿಬ್ಬರನ್ನು ಕಲ್ಲಿನಿಂದ ಜಜ್ಜಿ ಭೀಕರ ಹತ್ಯೆ ಮಾಡಿರುವ ಘಟನೆ ನಗರದ ಹೊರವಲಯದ ತಾವರಗೇರ ಕ್ರಾಸ್ ಬಳಿ ನಡೆದಿದೆ.
ಕಲಬುರಗಿ: ಕೂಲಿ ಕೆಲಸಕ್ಕೆಂದು ಜಮೀನಿಗೆ ಹೋಗಿ ಮಹಿಳೆಯರಿಬ್ಬರನ್ನು ಕಲ್ಲಿನಿಂದ ಜಜ್ಜಿ ಭೀಕರ ಹತ್ಯೆ ಮಾಡಿರುವ ಘಟನೆ ನಗರದ ಹೊರವಲಯದ ತಾವರಗೇರ ಕ್ರಾಸ್ ಬಳಿ ನಡೆದಿದೆ.
ಹತ್ಯೆಯಾದ ಮಹಿಳೆಯರನ್ನು 51 ವರ್ಷದ ಚಂದ್ರಮ್ಮ ಮತ್ತು 53 ವರ್ಷದ ಶರಣಮ್ಮ ಎಂದು ಗುರುತಿಸಲಾಗಿದೆ. ಘಟನೆಗೆ ಕಾರಣ ಏನೆಂಬುದು ತಿಳಿದುಬಂದಿಲ್ಲ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ