ಶ್ರದ್ಧಾಂಜಲಿ: ನಾಡಿನ ಪ್ರಸಿದ್ಧ ಜ್ಯೋತಿಷಿ ಎಸ್‌ ಕೆ ಜೈನ್ ನಿಧನ!

ಖ್ಯಾತ ಜ್ಯೋತಿಷಿ ಡಾ ಸುರೇಂದ್ರ ಕುಮಾರ್ ಜೈನ್ ಶುಕ್ರವಾರ ಸಂಜೆ ಶ್ವಾಸಕೋಶದ ತೊಂದರೆಯಿಂದ ಇಹಲೋಕ ತ್ಯಜಿಸಿದ್ದಾರೆ. 67 ವರ್ಷ ವಯಸ್ಸಿನ ಜೋತಿಷ್ಯ ತಜ್ಞರನ್ನು ಮಾರ್ಚ್ 18 ರಂದು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಎಸ್ ಕೆ ಜೈನ್
ಎಸ್ ಕೆ ಜೈನ್

ಬೆಂಗಳೂರು: ಖ್ಯಾತ ಜ್ಯೋತಿಷಿ ಡಾ ಸುರೇಂದ್ರ ಕುಮಾರ್ ಜೈನ್ ಶುಕ್ರವಾರ ಸಂಜೆ ಶ್ವಾಸಕೋಶದ ತೊಂದರೆಯಿಂದ ಇಹಲೋಕ ತ್ಯಜಿಸಿದ್ದಾರೆ. 67 ವರ್ಷ ವಯಸ್ಸಿನ ಜೋತಿಷ್ಯ ತಜ್ಞರನ್ನು ಮಾರ್ಚ್ 18 ರಂದು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಏಪ್ರಿಲ್ ಎರಡನೇ ವಾರದಲ್ಲಿ ಮೊದಲು ಡಿಸ್ಚಾರ್ಜ್ ಆಗಿದ್ದರು. ಆದಾಗ್ಯೂ, ನಾಲ್ಕು ದಿನಗಳ ಹಿಂದೆ ಮತ್ತೆ ಅಸ್ವಸ್ಥರಾದ ನಂತರ ಅವರನ್ನು ಮಹಾವೀರ್ ಜೈನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ರಾಜಕಾರಣಿಗಳಿಂದ ನಟರವರೆಗಿನ ಅವರ ಭವಿಷ್ಯವಾಣಿಗಳಿಗೆ ಅಪಾರ ಅನುಯಾಯಿಗಳಿದ್ದಾರೆ. ಅವರೊಂದಿಗೆ ಸಂಪರ್ಕದಲ್ಲಿರುವ ಪ್ರತಿಯೊಬ್ಬರೂ ಜೈನ್ ಅವರೊಂದಿಗೆ ವೈಯಕ್ತಿಕ ಬಾಂಧವ್ಯ ಹೊಂದಿದ್ದರು. ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ, ಮಾಜಿ ಮುಖ್ಯಮಂತ್ರಿಗಳಾದ ಎಸ್‌ಎಂ ಕೃಷ್ಣ, ಬಿಎಸ್ ಯಡಿಯೂರಪ್ಪ ಮತ್ತು ಎನ್ ಧರಂ ಸಿಂಗ್, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಧರ್ಮಸ್ಥಳದ ವೀರೇಂದ್ರ ಹೆಗಡೆ ಎಲ್ಲರೂ ಅವರ ಭವಿಷ್ಯವನ್ನು ನಿಖರವಾಗಿ ಪರಿಗಣಿಸಿರುವಂತಹವರು.

ಕಾಲಚಕ್ರ ಬಿಡುಗಡೆ ಕಾರ್ಯಕ್ರಮದಲ್ಲಿ ಎಸ್ ಕೆ ಜೈನ್ ಮತ್ತಿತರರು
ಕಾಲಚಕ್ರ ಬಿಡುಗಡೆ ಕಾರ್ಯಕ್ರಮದಲ್ಲಿ ಎಸ್ ಕೆ ಜೈನ್ ಮತ್ತಿತರರು

ವಿಶ್ವಪ್ರಸಿದ್ಧ ಕೆನಡಾದ ಸಂಗೀತಗಾರ, ಗಾಯಕ, ಗೀತರಚನೆಕಾರ, ರೆಕಾರ್ಡ್ ನಿರ್ಮಾಪಕ, ಬ್ರಿಯಾನ್ ಆಡಮ್ಸ್ ಅವರಂತಹ ಅಂತರರಾಷ್ಟ್ರೀಯ ಪ್ರಸಿದ್ಧ ವ್ಯಕ್ತಿಗಳು ಜೈನ್ ಅವರ ಜ್ಯೋತಿಷ್ಯ ಸಮಾಲೋಚನೆಗಾಗಿ ಅವರ ನಿವಾಸಕ್ಕೆ ಭೇಟಿ ನೀಡಿದ್ದರು. 20 ವರ್ಷಗಳಿಂದ ಉದಯ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕಾರ್ಯಕ್ರಮದ ಮೂಲಕ ಜೈನ್ ನಾಡಿನ ಮನೆಮಾತಾಗಿದ್ದರು.

ಇಸ್ಕಾನ್ ದೇವಾಲಯ ಮತ್ತು ವೈಯಾಲಿಕಾವಲ್‌ನ ಜಗನ್ನಾಥ ದೇವಾಲಯದ ಪ್ರಮುಖ ಸದಸ್ಯರಾದ ಜೈನ್ ಭಗವದ್ಗೀತೆಯಲ್ಲಿ ಪ್ರತಿಪಾದಿಸಲಾದ ತತ್ವಗಳು ಮತ್ತು ವಿಚಾರಗಳಲ್ಲಿ ಬಲವಾದ ನಂಬಿಕೆಯನ್ನು ಹೊಂದಿದ್ದರು. ಇತ್ತೀಚೆಗಷ್ಟೇ ಕರ್ನಾಟಕ ಸರ್ಕಾರ ವಿವಿಧ ಕ್ಷೇತ್ರಗಳಲ್ಲಿನ ಅವರ ಕೊಡುಗೆಗಾಗಿ ರಾಜೋತ್ಸವ ಪ್ರಶಸ್ತಿ ನೀಡಿ ಗೌರವಿಸಿತು.

ಎಸ್ ಕೆ ಜೈನ್
SK Jain Death: ಖ್ಯಾತ ಜ್ಯೋತಿಷಿ ಎಸ್ ಕೆ ಜೈನ್ ವಿಧಿವಶ
ಎಸ್ ಕೆ ಜೈನ್
ಎಸ್ ಕೆ ಜೈನ್

ತಂದೆ ಶಶಿಕಾಂತ್ ಜೈನ್ ಅವರಿಂದ ಜ್ಯೋತಿಷ್ಯ, ಮುನ್ಸೂಚನೆಗಳ ಸೂಕ್ಷ್ಮ ವ್ಯತ್ಯಾಸಗಳನ್ನು ಕಲಿತಿದ್ದ ಜೈನ್ ಅವರು, ಕಳೆದ 40 ವರ್ಷಗಳಿಂದ ಜ್ಯೋತಿಷ್ಯ ವಿಜ್ಞಾನದ ವೃತ್ತಿಯಲ್ಲಿದ್ದರು. ಪ್ರತಿ ಯುಗಾದಿ ಹಬ್ಬದ ದಿನದಂದು, ಜೈನ್ ಅವರು 'ಕಾಲ ಚಕ್ರ ಎಫಿಸರ್ಮಿಸ್' ಎಂಬ ಪುಸ್ತಕ ಬಿಡುಗಡೆ ಮಾಡುತ್ತಿದ್ದರು. ಇದು ನೈಸರ್ಗಿಕವಾಗಿ ಸಂಭವಿಸುವ ಖಗೋಳ ಘಟನೆಗಳು ಮತ್ತು ಶುಭ ಸಮಯಗಳ ಬಗ್ಗೆ ವಿವರಗಳನ್ನು ನೀಡುತ್ತದೆ.

ಎಸ್ ಕೆ ಜೈನ್
ಎಸ್ ಕೆ ಜೈನ್

ಜೈನ್ ಅವರು ತಮ್ಮ ಕೆಲಸದ ಮೂಲಕ ಅನೇಕರ ಜೀವನವನ್ನು ರೂಪಿಸಿದ್ದಾರೆ. ಸಕಾರಾತ್ಮಕತೆಯನ್ನು ಹರಡಿದ್ದು, ಅವರ ಸಂಪರ್ಕಕ್ಕೆ ಬಂದವರಿಗೆ ನೆರವಾಗಿದ್ದಾರೆ. ಅವರೊಂದಿಗೆ ಇದ್ದವರು ಅವರನ್ನು "ಮಾರ್ಗದರ್ಶಕ ಶಕ್ತಿ" ಮತ್ತು "ಎಲ್ಲರನ್ನು ನಗುವಂತೆ ಮಾಡಿದವರು ಎಂದು ವಿವರಿಸುತ್ತಾರೆ. ಜೈನ್ ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಅವರ ಅನೇಕ ಅನುಯಾಯಿಗಳು ಅಂತಿಮ ನಮನ ಸಲ್ಲಿಸಲು ಆಸ್ಪತ್ರೆಗೆ ದೌಡಾಯಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com