ಕಸ, ಕೊಳಕು,ದುರ್ನಾತ: ಬೆಂಗಳೂರಿನ ಕೆ.ಆರ್. ಮಾರ್ಕೆಟ್ ದುಸ್ಥಿತಿ ಕೇಳುವವರಿಲ್ಲ, ವ್ಯಾಪಾರಿಗಳ ಸ್ಥಿತಿ ಶೋಚನೀಯ!

ವೈವಿಧ್ಯಮಯವೆನಿಸಿಕೊಂಡಿದ್ದ ಬೆಂಗಳೂರು ನಗರದ ವ್ಯಾಪಾರ ಚಟುವಟಿಕೆಗಳ ಹೃದಯ ಭಾಗವಾಗಿದ್ದ ಕೆಆರ್ ಮಾರುಕಟ್ಟೆಯು ತನ್ನ ಗದ್ದಲ, ತಾಜಾ ಉತ್ಪನ್ನಗಳು, ದೊಡ್ಡ ಪ್ರಮಾಣದ ಬಣ್ಣಬಣ್ಣದ ಹೂವುಗಳು, ಹಣ್ಣುಗಳು ಮತ್ತು ತರಕಾರಿಗಳಿಗೆ ವ್ಯಾಪಕವಾಗಿ ಹೆಸರುವಾಸಿಯಾಗಿತ್ತು.
ಕೆ.ಆರ್.ಮಾರ್ಕೆಟ್ ನಲ್ಲಿ ಕಸದ ರಾಶಿ
ಕೆ.ಆರ್.ಮಾರ್ಕೆಟ್ ನಲ್ಲಿ ಕಸದ ರಾಶಿ
Updated on

ಬೆಂಗಳೂರು: ವೈವಿಧ್ಯಮಯವೆನಿಸಿಕೊಂಡಿದ್ದ ಬೆಂಗಳೂರು ನಗರದ ವ್ಯಾಪಾರ ಚಟುವಟಿಕೆಗಳ ಹೃದಯ ಭಾಗವಾಗಿದ್ದ ಕೆಆರ್ ಮಾರುಕಟ್ಟೆಯು ತನ್ನ ಗದ್ದಲ, ತಾಜಾ ಉತ್ಪನ್ನಗಳು, ದೊಡ್ಡ ಪ್ರಮಾಣದ ಬಣ್ಣಬಣ್ಣದ ಹೂವುಗಳು, ಹಣ್ಣುಗಳು ಮತ್ತು ತರಕಾರಿಗಳಿಗೆ ವ್ಯಾಪಕವಾಗಿ ಹೆಸರುವಾಸಿಯಾಗಿತ್ತು. ಅಂತಹ ಕೆ ಆರ್ ಮಾರುಕಟ್ಟೆ ಇಂದು ಕಸದ ರಾಶಿಯಾಗಿದೆ. ಅಸ್ತವ್ಯಸ್ತವಾಗಿರುವ ಲೋಡಿಂಗ್ ಮತ್ತು ವಸ್ತುಗಳ ಅಶಿಸ್ತುಬದ್ಧ ಇಳಿಸುವಿಕೆ, ಹಣ್ಣುಗಳು ಮತ್ತು ಮಾಂಸದ ಉತ್ಪಾದನೆ ಮತ್ತು ನಿರ್ವಹಣೆ. ತ್ಯಾಜ್ಯ, ಮತ್ತು ಮುರಿದ ಮ್ಯಾನ್‌ಹೋಲ್‌ಗಳ ದುಸ್ಥಿತಿಗಳು ಕಣ್ಣಿಗೆ ರಾಚುತ್ತವೆ.

ಸಾವಿರಾರು ಪ್ರವಾಸಿಗರನ್ನು ಸೆಳೆಯುವ ನಗರದ ಅತಿದೊಡ್ಡ ಹೂವಿನ ಮಾರುಕಟ್ಟೆಯು ಇಲ್ಲಿನ ಮಾರಾಟಗಾರರು ವಿಶೇಷವಾಗಿ ಮಹಿಳೆಯರು, ನೈರ್ಮಲ್ಯದ ವಿಶ್ರಾಂತಿ ಕೊಠಡಿ ಸೌಲಭ್ಯಗಳನ್ನು ಬಳಸುವುದು ಸೇರಿದಂತೆ ಹಲವು ಸವಾಲುಗಳನ್ನು ಎದುರಿಸುತ್ತಿದೆ. ಶೌಚೌಲಯ ಮತ್ತು ಸ್ನಾನಗೃಹದ ದುಸ್ಥಿತಿ ಹೇಳತೀರದಾಗಿದೆ.

ವಾಶ್‌ರೂಮ್‌ಗಳು ಒಡೆದ, ಒಣ ಟ್ಯಾಪ್‌ಗಳು ಮತ್ತು ದೋಷಯುಕ್ತ ಲಾಚ್‌ಗಳನ್ನು ಹೊಂದಿವೆ. ಪ್ರತಿ ಮೂರು ದಿನಗಳಿಗೊಮ್ಮೆ ಮಾತ್ರ ಅವುಗಳನ್ನು ಸ್ವಚ್ಛಗೊಳಿಸಲಾಗುತ್ತದೆ. ಕೆ ಆರ್ ಮಾರುಕಟ್ಟೆಯಲ್ಲಿರುವ ಅನೇಕ ಮಹಿಳಾ ವ್ಯಾಪಾರಿಗಳು ಮೂತ್ರ ಸಂಬಂಧಿ ಸೋಂಕು ಮತ್ತು ರೋಗಗಳಿಂದ ಬಳಲುತ್ತಿದ್ದಾರೆ. ನಮ್ಮ ಕಾಳಜಿಗೆ ಯಾರೂ ಗಮನಹರಿಸುತ್ತಿಲ್ಲ. ಸಂದರ್ಶಕರು ತಮ್ಮ ಕ್ಯಾಮೆರಾಗಳೊಂದಿಗೆ ಬೆಳಿಗ್ಗೆ ಬಂದಾಗ ನಾವು ಮುಖದಲ್ಲಿ ನಗೆ ತೋರಿಸಿಕೊಂಡು ಇರಬೇಕು ಎಂದು ಮಹಿಳಾ ಮಾರಾಟಗಾರ್ತಿಯೊಬ್ಬರು ವಿಷಾದದಿಂದ ಹೇಳುತ್ತಾರೆ.

ಮತ್ತೋರ್ವ ಮಾರಾಟಗಾರ್ತಿ ಲಕ್ಷ್ಮಿ, “ನಾವು ಪ್ರತಿದಿನ ಬೆಳಿಗ್ಗೆ 4 ರಿಂದ 4.30 ರ ನಡುವೆ ಹೊಸೂರಿನಿಂದ ಇಲ್ಲಿಗೆ ಬರುತ್ತೇವೆ. ಪ್ರತಿದಿನ ಹಣ್ಣು ಮತ್ತು ತರಕಾರಿ ತ್ಯಾಜ್ಯದ ಮೇಲೆ ಮಾಂಸದ ತ್ಯಾಜ್ಯವನ್ನು ಜೋಡಿಸಿ, ಬಿಬಿಎಂಪಿ ತ್ಯಾಜ್ಯ ಟ್ರಕ್‌ಗಳು ಬರುವವರೆಗೆ ಕೆಟ್ಟ ವಾಸನೆಯನ್ನು ಹೊರಸೂಸುತ್ತದೆ. ಕೋವಿಡ್-19 ಸಮಯದಲ್ಲಿ, ಮಾರುಕಟ್ಟೆಯಲ್ಲಿ ಜನಸಂದಣಿ ಇಲ್ಲದಿದ್ದಾಗಲೂ, ತ್ಯಾಜ್ಯ ನಿರ್ವಹಣಾ ವ್ಯವಸ್ಥೆಯನ್ನು ಅಳವಡಿಸಲು ಮತ್ತು ವಾಶ್‌ರೂಮ್‌ಗಳ ಸ್ಥಿತಿಯನ್ನು ಸುಧಾರಿಸಲು ಅವಕಾಶವಿತ್ತು. ಆದರೂ ಯಾವುದೇ ಬದಲಾವಣೆ ಕಂಡಿಲ್ಲ ಎನ್ನುತ್ತಾರೆ.

ಕೆ.ಆರ್.ಮಾರ್ಕೆಟ್ ನಲ್ಲಿ ಕಸದ ರಾಶಿ
ಮೆಜೆಸ್ಟಿಕ್, ಕೆ ಆರ್ ಮಾರ್ಕೆಟ್ ಸುತ್ತಮುತ್ತ ಪ್ರವಾಹಕ್ಕೆ ಬಿಬಿಎಂಪಿಯಿಂದ ಪರಿಹಾರ: 5 ಎಂಎಲ್‌ಡಿ ಸಾಮರ್ಥ್ಯದ ಎಸ್ ಟಿಪಿ ಸ್ಥಾಪನೆ

ಸುಮಾರು 15 ವರ್ಷಗಳಿಂದ ಇಲ್ಲಿನ ಪರಿಸ್ಥಿತಿ ಸುಧಾರಿಸಿಲ್ಲ. ನಾವು ಭರವಸೆಯನ್ನು ಕಳೆದುಕೊಂಡಿದ್ದೇವೆ, ಆದರೂ ಜೀವನೋಪಾಯಕ್ಕಾಗಿ ಈ ಪರಿಸ್ಥಿತಿಯಲ್ಲಿಯೇ ಬದುಕುವುದು ನಮಗೆ ಅನಿವಾರ್ಯವಾಗಿದೆ ಎನ್ನುತ್ತಾರೆ.

ಮಾಂಸ ಮಾರಾಟಗಾರ ಜಮೀಲ್, ಮಾಂಸದ ತ್ಯಾಜ್ಯವನ್ನು ಮಾರುಕಟ್ಟೆಯ ಆವರಣದೊಳಗೆ ಹೆಚ್ಚಾಗಿ ಎಸೆಯಲಾಗುತ್ತದೆ. ಎಸೆಯುವ ಮೊದಲು ಒಂದು ಅಥವಾ ಎರಡು ದಿನಗಳವರೆಗೆ ಇರುತ್ತದೆ. ಕಸ ತೆರವು ಬಹಳ ನಿಧಾನವಾಗುವುದರಿಂದ ರೋಗ ಹರಡುವಿಕೆ ಸಾಧ್ಯತೆ ಹೆಚ್ಚು ಎನ್ನುತ್ತಾರೆ.

ಮತ್ತೊಬ್ಬ ಮಾಂಸ ಮಾರಾಟಗಾರ ಜುಬೇರ್, ನಿತ್ಯವೂ ತೆರವುಗೊಳಿಸದ ಕಾರಣ ಅನೇಕ ಮಾರಾಟಗಾರರು ಸಣ್ಣ ಆಟೊಗಳ ಮೂಲಕ ತ್ಯಾಜ್ಯ ವಿಲೇವಾರಿ ಮಾಡುತ್ತಾರೆ. ಪ್ರತಿದಿನ ಉತ್ಪತ್ತಿಯಾಗುವ ತ್ಯಾಜ್ಯದಿಂದ, ಅದನ್ನು ತೆರವುಗೊಳಿಸಲು ನಾವು ಬಿಬಿಎಂಪಿಯನ್ನು ಅವಲಂಬಿಸಲಾಗುವುದಿಲ್ಲ, ಸರ್ಕಾರ, ಬಿಬಿಎಂಪಿ, ಜನಪ್ರತಿನಿಧಿಗಳ ಮೇಲೆ ನಮಗೆ ಯಾವುದೇ ಭರವಸೆಯಿಲ್ಲ. ಜೀವನೋಪಾಯವನ್ನು ಗಳಿಸಲು ನಾವು ನಮ್ಮ ವ್ಯವಹಾರಗಳನ್ನು ನಡೆಸುವುದನ್ನು ಮುಂದುವರಿಸಬೇಕು. ನನ್ನಂಥವರು ಇನ್ನೆಲ್ಲಿಗೆ ಹೋಗಬಹುದು ಎಂದು ಕೇಳುತ್ತಾರೆ 10 ವರ್ಷಗಳಿಂದ ಅಂಗಡಿ ನಡೆಸುತ್ತಿರುವ 68 ವರ್ಷದ ವ್ಯಕ್ತಿ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com