ಬಾಗಲಕೋಟೆ: ಟಿಪ್ಪರ್ ಲಾರಿ ಪಲ್ಟಿಯಾಗಿ ಒಂದೇ ಕುಟುಂಬದ ಐವರ ದುರ್ಮರಣ

ಬಾಗಲಕೋಟೆಯ ಬೀಳಗಿ ತಾಲೂಕಿನ ಹೊನ್ಯಾಳ ಕ್ರಾಸ್ ಬಳಿ ಮಣ್ಣು ಸಾಗಿಸುತ್ತಿದ್ದ ಟಿಪ್ಪರ್ ಪಲ್ಟಿಯಾಗಿ ಒಂದೇ ಕುಟುಂಬದ ಐವರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ಬಾಗಲಕೋಟೆ: ಬಾಗಲಕೋಟೆಯ ಬೀಳಗಿ ತಾಲೂಕಿನ ಹೊನ್ಯಾಳ ಕ್ರಾಸ್ ಬಳಿ ಮಣ್ಣು ಸಾಗಿಸುತ್ತಿದ್ದ ಟಿಪ್ಪರ್ ಪಲ್ಟಿಯಾಗಿ ಒಂದೇ ಕುಟುಂಬದ ಐವರು ಸಾವನ್ನಪ್ಪಿರುವ ಘಟನೆ ನಡೆದಿದೆ.

ಮೃತರನ್ನು ಬಾದದಿನ್ನಿ ಗ್ರಾಮದ ಯಂಕಪ್ಪ ತೋಳಮಟ್ಟಿ, ಆತನ ಪತ್ನಿ ಯಲ್ಲವ್ವ, ಮಗ ಪುಂಡಲೀಕ, ಮಗಳು ನಾಗವ್ವ ಹಾಗೂ ಗಂಡ ಅಶೋಕ ಬಮ್ಮಣ್ಣವರ ಎಂದು ಗುರುತಿಸಲಾಗಿದೆ.

ಮೃತರು ಹೊಲದ‌ ಕೆಲಸ ಮುಗಿಸಿ ಮನೆಗೆ ತೆರಳಲು ರಸ್ತೆಪಕ್ಕ ನಿಂತಿದ್ದಾಗ ಟೈರ್ ಬ್ಲಾಸ್ಟ್ ಆಗಿ ಟಿಪ್ಪರ್ ಲಾರಿ ಅವರ ಮೇಲೆ ಉರುಳಿ ಬಿದ್ದಿದ್ದು ಐವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಸಂಗ್ರಹ ಚಿತ್ರ
ನಮ್ಮ ಮೆಟ್ರೋ ಸ್ಕೈವಾಕ್'ನಲ್ಲಿ ಕಾಲೇಜು ಯುವತಿಯೊಂದಿಗೆ ಅನುಚಿತ ವರ್ತನೆ: ಪ್ರಕರಣ ದಾಖಲು

ಘಟನಾ ಸ್ಥಳಕ್ಕೆ ಬೀಳಗಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com