ಬೆಂಗಳೂರು: ಕಳೆದ 62 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಅತಿ ಸುದೀರ್ಘ ಒಣಹವೆ; ಮಳೆ ಬಾರದೆ ಸಂಕಷ್ಟ

ವಿಜಯಪುರ, ಬೀದರ್ ಮತ್ತು ಬಾಗಲಕೋಟೆ ಸೇರಿದಂತೆ ಕರ್ನಾಟಕದ ಇತರ ಭಾಗಗಳಲ್ಲಿ ಮಳೆಯಾಗುತ್ತಿದ್ದು, ಹಿತಕರವಾದ ವಾತಾವರಣಕ್ಕೆ ಜಾಗತಿಕವಾಗಿ ಹೆಸರುವಾಸಿಯಾಗಿದ್ದ ಬೆಂಗಳೂರಿನಲ್ಲಿ ಮಾತ್ರ ಮಳೆ ದೂರದ ಬೆಟ್ಟದಂತಾಗಿದೆ. ಕಳೆದ 62 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಅತಿ ದೀರ್ಘವಾದ ಒಣಹವೆಯು ನಗರದ ನಾಗರಿಕರನ್ನು ಕಂಗೆಡಿಸಿದೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ
Updated on

ಬೆಂಗಳೂರು: ವಿಜಯಪುರ, ಬೀದರ್ ಮತ್ತು ಬಾಗಲಕೋಟೆ ಸೇರಿದಂತೆ ಕರ್ನಾಟಕದ ಇತರ ಭಾಗಗಳಲ್ಲಿ ಮಳೆಯಾಗುತ್ತಿದ್ದು, ಹಿತಕರವಾದ ವಾತಾವರಣಕ್ಕೆ ಜಾಗತಿಕವಾಗಿ ಹೆಸರುವಾಸಿಯಾಗಿದ್ದ ಬೆಂಗಳೂರಿನಲ್ಲಿ ಮಾತ್ರ ಮಳೆ ದೂರದ ಬೆಟ್ಟದಂತಾಗಿದೆ. ಕಳೆದ 62 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಅತಿ ದೀರ್ಘವಾದ ಒಣಹವೆಯು ನಗರದ ನಾಗರಿಕರನ್ನು ಕಂಗೆಡಿಸಿದೆ.

ಭಾರತೀಯ ಹವಾಮಾನ ಇಲಾಖೆಯ ಅಂಕಿಅಂಶಗಳ ಪ್ರಕಾರ, ನಗರವು ಕಳೆದ 146 ದಿನಗಳಿಂದ ದೀರ್ಘಕಾಲದ ಶುಷ್ಕತೆಯನ್ನು ಅನುಭವಿಸಿದೆ. ಬೆಂಗಳೂರಿನಲ್ಲಿ ಕೊನೆಯ ಬಾರಿಗೆ ನವೆಂಬರ್ 7 ಮತ್ತು 8 ರಂದು ಕ್ರಮವಾಗಿ 71.2 ಮಿಮೀ ಮತ್ತು 29.3 ಮಿಮೀ ಮಳೆಯಾಗಿತ್ತು. ನವೆಂಬರ್ 23 ರಂದು ನಗರದಲ್ಲಿ 1.6 ಮಿಮೀ ಮಳೆಯಾಗಿತ್ತು. ಅದಾದ ನಂತರ ಡಿಸೆಂಬರ್ 3 ಮತ್ತು 4 ರಂದು ನಗರದಲ್ಲಿ ಕ್ರಮವಾಗಿ 0.3 ಮಿಮೀ ಮತ್ತು 0.4 ಮಿಮೀ ಮಳೆಯಾಗಿದೆ.

'ಕಳೆದ ಡಿಸೆಂಬರ್‌ನಲ್ಲಿನ 1 ಮಿಮೀಗಿಂತಲೂ ಕಡಿಮೆ ಮಳೆಯಾಗಿತ್ತು. 1962 ರಿಂದೀಚೆಗೆ ನಗರವು ದೀರ್ಘಕಾಲದ ಒಣಹವೆಯನ್ನು ಅನುಭವಿಸಿದೆ. 1962 ರಿಂದ 2024ರ ನಡುವೆ ಜನವರಿಯಿಂದ ಮಾರ್ಚ್ ತಿಂಗಳ ಅವಧಿಯಲ್ಲಿ ನಗರದಲ್ಲಿ ಒಂಬತ್ತು ವರ್ಷ ಮಳೆಯಾಗಿಲ್ಲ. ನಿರ್ದಿಷ್ಟವಾಗಿ 1964, 1965, 1973, 1975, 1976, 1983, 1992, 1996 ಮತ್ತು 2007ರಲ್ಲಿ ನಗರದಲ್ಲಿ ಜನವರಿ-ಮಾರ್ಚ್ ತಿಂಗಳಲ್ಲಿ ಮಳೆಯಾಗಿಲ್ಲ ಎಂದು ಬೆಂಗಳೂರು ಹವಾಮಾನ ಇಲಾಖೆಯ ನಿರ್ದೇಶಕ ಎನ್ ಪುವೈರಸನ್ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.

ಪ್ರಾತಿನಿಧಿಕ ಚಿತ್ರ
Bengaluru Rains: 'ಹುಸಿಯಾಯ್ತು ಏಪ್ರಿಲ್ ಮಳೆ', ಮೇ ನಲ್ಲಿ 'ನೋಡೋಣ' ಎಂದ ಹವಾಮಾನ ಇಲಾಖೆ

ಮೋಡ ರಚನೆಗೆ ಎಲ್‌ ನಿನೊ ಅಡ್ಡಿ

ಡಿಸೆಂಬರ್ 4 ರಿಂದ ಏಪ್ರಿಲ್ 17, 2024 ರ ಸುದೀರ್ಘ ಅವಧಿಗೆ ಬೆಂಗಳೂರು ನಗರದಲ್ಲಿ ಮಳೆಯಾಗಿಲ್ಲ. ಈ ಸಮಯದಲ್ಲಿ ಕರ್ನಾಟಕದ ಇತರ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುತ್ತಿದ್ದರೆ, ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿಲ್ಲ. ಇದಕ್ಕೆ ಕಾರಣ ಎಲ್ ನಿನೋ ಪರಿಣಾಮ. ಇದು ಸರಾಸರಿ ಸಮುದ್ರ ಮಟ್ಟಕ್ಕಿಂತ 3.2 ಕಿಮೀ ಎತ್ತರದ ವ್ಯವಸ್ಥೆಯ ರಚನೆಯಿಂದಾಗಿ, ಇದು ಮೋಡಗಳು ರೂಪುಗೊಳ್ಳಲು ಅವಕಾಶ ನೀಡುತ್ತಿಲ್ಲ ಎಂದು ತಿಳಿಸಿದ್ದಾರೆ.

ಮತ್ತೊಬ್ಬ ಐಎಂಡಿ ಅಧಿಕಾರಿ ಮಾತನಾಡಿ, ದೀರ್ಘಕಾಲದ ಒಣಹವೆ ಮತ್ತು ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನದಲ್ಲಿನ ಏರಿಕೆಯು ಸ್ಥಳೀಯ ವಾತಾವರಣದ ಪ್ರಕ್ರಿಯೆಗಳಿಂದಲೂ ಪ್ರಭಾವಿತವಾಗಿರುತ್ತದೆ. ಹಸಿರು ಹೊದಿಕೆ ಮತ್ತು ಜಲಮೂಲಗಳ ಕಡಿತವು ಇದಕ್ಕೆ ಕೊಡುಗೆ ನೀಡುತ್ತಿದೆ ಎಂದಿದ್ದಾರೆ.

ಭಾರತೀಯ ಹವಾಮಾನ ಇಲಾಖೆ (IMD) ಇಡೀ ದೇಶಕ್ಕೆ ಸಾಮಾನ್ಯಕ್ಕಿಂತ ಹೆಚ್ಚಿನ ನೈಋತ್ಯ ಮಾನ್ಸೂನ್ ಮುನ್ಸೂಚನೆ ನೀಡಿದ್ದರೂ, ಹವಾಮಾನ ತಜ್ಞರು ಬೆಂಗಳೂರು ಇಂತಹ ಮುನ್ಸೂಚನೆಗಳ ಹೊರತಾಗಿಯೂ ಹಠಾತ್, ತೀವ್ರವಾದ ಮಳೆಯನ್ನು ಅನುಭವಿಸುವ ಇತಿಹಾಸವನ್ನು ಹೊಂದಿದೆ ಎಂದು ಸೂಚಿಸಿದ್ದಾರೆ. ಈ ತೀವ್ರವಾದ ಶಾಖವು ಅದರ ಸಂಭವನೀಯತೆಯನ್ನು ಮಾತ್ರ ಹೆಚ್ಚಿಸುತ್ತದೆ. ಸುದೀರ್ಘ ಒಣಹವೆಯ ಸಂದರ್ಭದಲ್ಲಿ ಬೆಂಗಳೂರಿನ ಕೆಲವು ಭಾಗಗಳಲ್ಲಿ ನೀರಿನ ಬಿಕ್ಕಟ್ಟು ಎದುರಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com