ಬೆಂಗಳೂರು: ಮಾಲೀಕನ ಮನೆಯಿಂದ 50 ಲಕ್ಷ ರು. ದರೋಡೆ ಮಾಡಿದ್ದ ಅಡುಗೆ ಕೆಲಸದಾತನ ಬಂಧನ!

ಮಾಲೀಕನ ಮನೆಯಿಂದ 50 ಲಕ್ಷ ಮೌಲ್ಯದ ವಸ್ತುಗಳೊಂದಿಗೆ ಪರಾರಿಯಾಗಿದ್ದ ಅಡುಗೆಯವರನ್ನು ಮಹದೇವಪುರ ಪೊಲೀಸರು ಬಂಧಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಮಾಲೀಕನ ಮನೆಯಿಂದ 50 ಲಕ್ಷ ಮೌಲ್ಯದ ವಸ್ತುಗಳೊಂದಿಗೆ ಪರಾರಿಯಾಗಿದ್ದ ಅಡುಗೆಯವರನ್ನು ಮಹದೇವಪುರ ಪೊಲೀಸರು ಬಂಧಿಸಿದ್ದಾರೆ.

ಆರೋಪಿಯನ್ನು ಬಿಹಾರ ಮೂಲದ ಸುರೇಂದ್ರ ಕುಮಾರ್ ಕಾಮತ್ (36) ಎಂದು ಗುರುತಿಸಲಾಗಿದೆ. ಮೂರೂವರೆ ವರ್ಷಗಳಿಂದ ಖಾಸಗಿ ಸಂಸ್ಥೆಯೊಂದರ ಸಿಇಒ ಅಮಿತ್ ಜೈನ್ ಅವರ ನಿವಾಸದಲ್ಲಿ ಕೆಲಸ ಮಾಡುತ್ತಿದ್ದ. ದೊಡ್ಡನೆಕ್ಕುಂದಿಯಲ್ಲಿರುವ ಅದೇ ಮನೆಯಲ್ಲಿಆತನಿಗೆ ವಸತಿ ನೀಡಲಾಗಿತ್ತು.

ಜೈನ್ ಮತ್ತು ಅವರ ಕುಟುಂಬ ಸದಸ್ಯರು ಏಪ್ರಿಲ್ 12 ರಂದು ಮುಂಬೈನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಹೋಗಿದ್ದರು. ಏಪ್ರಿಲ್ 15 ರಂದು ಹಿಂದಿರುಗಿದಾಗ ಕಳ್ಳತನ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಾಂದರ್ಭಿಕ ಚಿತ್ರ
ಬೆಳಗಾವಿ: ಸಹಪಾಠಿ ವಿದ್ಯಾರ್ಥಿನಿಗೆ ಲಿಫ್ಟ್ ಕೊಟ್ಟಿದ್ದಕ್ಕೆ ಯುವಕನ ಮೇಲೆ ಹಲ್ಲೆ, ಏಳು ಮಂದಿ ಬಂಧನ

ಮನೆಯ ಉಸ್ತುವಾರಿ ವಹಿಸಿದ್ದ ಕಾಮತ್ ಚಿನ್ನಾಭರಣಗಳನ್ನು ಕದ್ದ ನಂತರ ತಲೆಮರೆಸಿಕೊಂಡಿದ್ದ. 50 ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನಾಭರಣ, 12,000 ರೂ ನಗದು ದೋಚಿ ಪರಾರಿಯಾಗಿದ್ದ. ಜೈನ್ ಅವರು ಕಾಮತ್‌ನ ಕೈವಾಡವಿದೆ ಎಂದು ಶಂಕಿಸಿ ದೂರು ದಾಖಲಿಸಿದ್ದರು, ನಂತರ ಪೊಲೀಸರು ಆರೋಪಿಗಳ ಪತ್ತೆಗೆ ಶೋಧ ನಡೆಸಿದರು.

ಅ ನಂತರ ತಂಡವನ್ನು ಬಿಹಾರಕ್ಕೆ ಕಳುಹಿಸಲಾಯಿತು, ಅಲ್ಲಿ ಅವರು ಅವರ ಕುಟುಂಬ ಸದಸ್ಯರಿಂದ ಮಾಹಿತಿಯನ್ನು ಸಂಗ್ರಹಿಸಿದರು, ಅವರನ್ನು ಆಂಧ್ರಪ್ರದೇಶದ ವಿಜಯವಾಡಕ್ಕೆ ಕರೆದೊಯ್ದರು. ಅಲ್ಲಿ ಕಾಮತ್ ಅಡಗಿಕೊಂಡಿದ್ದ ಎಂದು ವರದಿಯಾಗಿದೆ. ಏಪ್ರಿಲ್ 18 ರಂದು, ಪೊಲೀಸ್ ತಂಡವು ಕಾಮತ್ ನನ್ನು ರೈಲ್ವೆ ನಿಲ್ದಾಣದಲ್ಲಿ ಬಂಧಿಸಿತು ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com