ಬೆಂಗಳೂರು: ಮತ ಪಟ್ಟಿಯಲ್ಲಿ ಹೆಸರು ಡಿಲೀಟ್, ಮತ ಹಾಕಲು ಬಂದ ಜನತೆಯಿಂದ ಅಧಿಕಾರಿಗಳಿಗೆ ಹಿಡಿಶಾಪ!

ಸಿಲಿಕಾನ್ ಸಿಟಿಯಲ್ಲಿ ಮತದಾನ ಪ್ರಮಾಣ ಕಡಿಮೆಯಾಗಿದದು, ಇದಕ್ಕೆ ಅಧಿಕಾರಿಗಳ ಎಡವಟ್ಟು ಕೂಡ ಕೂಡ ಕಾರಣವಾಗಿದೆ. ನಗರದ ಹಲವೆಡೆ ಮತಹಕ್ಕು ಚಲಾಯಿಸಲು ಬಂದ ಜನರು ಮತಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲದಿರುವುದನ್ನು ಕಂಡು ತಬ್ಬಿಬ್ಬಾಗಿ, ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮತ ಕೇಂದ್ರದ ಬಳಿ ಇರುವ ಪೊಲೀಸ್ ಸಿಬ್ಬಂದಿ
ಮತ ಕೇಂದ್ರದ ಬಳಿ ಇರುವ ಪೊಲೀಸ್ ಸಿಬ್ಬಂದಿ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತದಾನ ಪ್ರಮಾಣ ಕಡಿಮೆಯಾಗಿದದು, ಇದಕ್ಕೆ ಅಧಿಕಾರಿಗಳ ಎಡವಟ್ಟು ಕೂಡ ಕೂಡ ಕಾರಣವಾಗಿದೆ. ನಗರದ ಹಲವೆಡೆ ಮತಹಕ್ಕು ಚಲಾಯಿಸಲು ಬಂದ ಜನರು ಮತಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲದಿರುವುದನ್ನು ಕಂಡು ತಬ್ಬಿಬ್ಬಾಗಿ, ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಶಂಕರಪುರಂನ ರಾಜೇಂದ್ರ ಬಾಬು ದಂಪತಿ ಬಸವನಗುಡಿಯ ನ್ಯಾಷನಲ್ ಕಾಲೇಜಿಗೆ ಮತ ಹಾಕಲು ಬಂದಿದ್ದು, ಈ ವೇಳೆ ಮತಪಟ್ಟಿಯಲ್ಲಿ ಪತ್ನಿಯ ಹೆಸರು ಡಿಲೀಟ್ ಆಗಿರುವುದನ್ನು ಕಂಡು ತಬ್ಬಿಬ್ಬಾದರು.

ಶಂಕರಪುರಂನ ವಸತಿ ಸಮುಚ್ಛಯದಲ್ಲಿ ಶಂಕರ್ ಬಾಬು ಅವರು ಕುಟುಂಬದೊಂದಿಗೆ ವಾಸವಿದ್ದಾರೆ. ಹಲವು ವರ್ಷಗಳಿಂದಲೂ ಈ ಕುಟುಂಬ ಮತ ಹಕ್ಕು ಚಲಾಯಿಸುತ್ತಿದ್ದರೂ, ಈ ಬಾರಿ ಮೂವರು ಸದಸ್ಯರ ಹೆಸರು ಮತಪಟ್ಟಿಯಿಂದ ಡಿಲೀಟ್ ಆಗಿರುವುದನ್ನು ಕಂಡು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಷ್ಟೇ ಅಲ್ಲದೆ, ನಗರದ ಇತರೆ ಎರಡು ಲೋಕಸಭಾ ಕ್ಷೇತ್ರಗಳಲ್ಲೂ ಈ ರೀತಿಯ ಘಟನೆಗಳು ವರದಿಯಾಗಿವೆ.

ಮತ ಕೇಂದ್ರದ ಬಳಿ ಇರುವ ಪೊಲೀಸ್ ಸಿಬ್ಬಂದಿ
#LoksabhaElections2024: ರಾಜ್ಯದಲ್ಲಿ ಶೇ.69.23 ರಷ್ಟು ಮತದಾನ

ಬಸವನಗುಡಿಯ ನ್ಯಾಷನಲ್ ಕಾಲೇಜಿನಲ್ಲಿರುವ ಮತಗಟ್ಟೆ ಕೇಂದ್ರದಲ್ಲಿಯೂ ಮತಪಟ್ಟಿಯಲ್ಲಿ ತಮ್ಮ ಹೆಸರು ಕಾಣದ ಕಾರಣ ಹಲವರು ನಿರಾಶೆಗೊಂಡಿದ್ದು ಕಂಡು ಬಂದಿತು. ಕನಿಷ್ಠ 40-50 ಮಂದಿ EPIC ಕಾರ್ಡ್‌ಗಳೊಂದಿಗೆ ನಿಂತು, ಮತಪಟ್ಟಿಯಲ್ಲವಿ ತಮ್ಮ ಹೆಸರು ಕಂಡುಬರದ ಕಾರಣ ಮತದಾನ ಮಾಡದೆ ಮನೆಗಳಿಗೆ ವಾಪಸ್ಸಾದರು.

ಕಳೆದ 30 ವರ್ಷಗಳಿಂದ ಇದೇ ಮತಗಟ್ಟೆಯಲ್ಲಿ ಮತದಾನ ಮಾಡುತ್ತಿದ್ದೇನೆ, ಆದರೆ, ಈ ಬಾರಿ ಮತಪಟ್ಟಿಯಲ್ಲಿ ನನ್ನ ಹೆಸರು ಇಲ್ಲದಿರುವುದು ವಿಚಿತ್ರವೆನಿಸಿತು ಎಂದು ಮತಗಟ್ಟೆಗೆ ಬಂದಿದ್ದ ಶಂಕರಪುರಂ ನಿವಾಸಿ ಸೌಭಾಗ್ಯ ಅವರು ಹೇಳಿದ್ದಾರೆ.

ಶಂಕರಪುರಂ ನಿವಾಸಿಯಾಗಿರುವ ಮತ್ತೊಬ್ಬ ನಿವಾಸಿ ತ್ರಿಶಾಲಾದೇವಿ ಅವರು ಮಾತನಾಡಿ, ನನ್ನ ಹೆಸರೂ ಪಟ್ಟಿಯಲ್ಲಿ ಕಾಣೆಯಾಗಿದೆ. “ಇಲ್ಲಿ ನಾನಷ್ಟೇ ಅಲ್ಲ, ಮತದಾರರ ಗುರುತಿನ ಚೀಟಿಯನ್ನು ನೋಂದಾಯಿಸಿದ ಅನೇಕರಿದ್ದಾರೆ, ಆದರೆ ಅವರ ಹೆಸರು ಪಟ್ಟಿಯಲ್ಲಿಲ್ಲ. ಈ ಬಾರಿ ನಮ್ಮ ಮತ ವ್ಯರ್ಥವಾಗಿದೆ ಇದು ಬೇಸರ ತರಿಸಿದೆ. ಅದು ಹೇಗೆ ಹೆಸರುಗಳನ್ನು ಅಳಿಸುತ್ತಾರೆ? ಎಂದು ಪ್ರಶ್ನಿಸಿದ್ದಾರೆ.

ಬಿಸಿಲಿನ ಝಳದ ನಡುವಲ್ಲೂ ಮತ ಚಲಾಯಿಸಲು ಬಂದ ಹಿರಿಯ ನಾಗರೀಕ ಸುಧೀರ್ ಮೆಹ್ತಾ ಮತಪಟ್ಟಿಯಲ್ಲಿ ಹೆಸರು ಕಾಣದ ಕಾರಣ ಆಘಾತಕ್ಕೊಳಗಾದರು.

ಮತ ಕೇಂದ್ರದ ಬಳಿ ಇರುವ ಪೊಲೀಸ್ ಸಿಬ್ಬಂದಿ
ಲೋಕಸಭಾ ಚುನಾವಣೆ 2024: ಮತದಾನಕ್ಕೆ ಸಿಲಿಕಾನ್ ಸಿಟಿ ಜನತೆಯಿಂದ ನೀರಸ ಪ್ರತಿಕ್ರಿಯೆ, ಶೇ.52.81ರಷ್ಟು ಮತದಾನ!

ಬಸವನಗುಡಿಯ ಸಂಜಯ್ ಎಂ ಜೈನ್ ಎಂಬುವವರು ಮಾತನಾಡಿ, , ನನ್ನ ಹೆಸರನ್ನು ಅಳಿಸಲಾಗಿಲ್ಲ, ಆದರೆ, ನನ್ನ ಹೆಸರಿನಲ್ಲಿ ಈಗಾಗಲೇ ಮತ ಚಲಾಯಿಸಲಾಗಿದೆ ಎಂದು ಹೇಳುತ್ತಿದ್ದಾರೆ. ನನ್ನ ಸ್ವಂತ ಹೆಸರಿನಲ್ಲಿ ನನ್ನ ಹಕ್ಕನ್ನು ಚಲಾಯಿಸುವ ಅವಕಾಶ ಸಿಗದಿರುವುದು ಬೇಸರ ತರಿಸಿದೆ. ಈ ಬಗ್ಗೆ ಮಾತನಾಡಿದರೂ ಯಾರೂ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿಯೂ ಇದೇ ರೀತಿಯ ಹಲವು ಪ್ರಕರಣಗಳು ವರದಿಯಾಗಿವೆ. ಚಿಕ್ಕಪೇಟೆಯಲ್ಲಿ ನೂರಾರು ಜನರ ಹೆಸರು ಮತಪಟ್ಟಿಯಲ್ಲಿ ನಾಪತ್ತೆಯಾಗಿರುವುದು ಕಂಡು ಬಂದಿದೆ ಎಂದು ಸಜ್ಜನ್ ರಾಜ್ ಮೆಹ್ತಾ ಎಂಬುವವರು ಹೇಳಿದ್ದಾರೆ.

ಉದ್ದೇಶಪೂರ್ವಕವಾಗಿ ಈ ರೀತಿ ಮಾಡಲಾಗಿದೆಯೇ ಅಥವಾ ತಿಳಿಯದೆ ಆಗಿದೆಯೇ ಎಂಬುದು ನಮಗೆ ತಿಳಿದಿಲ್ಲ. ಆದರೆ ಇದನ್ನು ಯಾರೇ ಮಾಡಿದ್ದರೂ ಅವರನ್ನು ತರಾಟೆಗೆ ತೆಗೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ.

ಕರ್ನಾಟಕದ ಮುಖ್ಯ ಚುನಾವಣಾ ಕಚೇರಿಯ ಹಿರಿಯ ಅಧಿಕಾರಿಯೊಬ್ಬರು ಮಾತನಾಡಿ, ಸಾರ್ವಜನಿಕರು ತಮ್ಮ ಹೆಸರುಗಳನ್ನು ಪರಿಶೀಲಿಸಲು ಮತ್ತು ಪಟ್ಟಿಯಲ್ಲಿ ತಮ್ಮ ಹೆಸರುಗಳಿವೆಯೇ ಅಥವಾ ಇಲ್ಲವೇ ಎಂದು ಪರಿಶೀಲಿಸುವಂತೆ ಪ್ರಚಾರ, ಜಾಗೃತಿ ಮೂಡಿಸಲಾಗಿತ್ತು. ಆದರೂ ಸಾಕಷ್ಟು ಮಂದಿ ಪರಿಶೀಲಿಸಿಲ್ಲ. ಕೊನೆ ಗಳಿಗೆಯಲ್ಲಿ ಆರೋಪ ಹೊರಿಸುವುದು ಸರಿಯಲ್ಲ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com