ನೀರಿನ ಅಭಾವ: ನಗರದ ಮಾಲ್ ಗಳಲ್ಲಿ ಗಬ್ಬು ನಾರುತ್ತಿವೆ ಶೌಚಾಲಯಗಳು!

ದೀರ್ಘಾವಧಿಯ ನೀರಿನ ಕೊರತೆಯಿಂದಾಗಿ ನಗರದಲ್ಲಿ ನೀರಿನ ಬಿಕ್ಕಟ್ಟು ಮತ್ತಷ್ಟು ತಲೆದೋರಿದ್ದು, ಇದರ ಪರಿಣಾಮ ನಗರದಲ್ಲಿನ ಹಲವಾರು ಮಾಲ್‌ಗಳಲ್ಲಿನ ಶೌಚಾಲಯಗಳು ಗಬ್ಬು ನಾರುತ್ತಿವೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ದೀರ್ಘಾವಧಿಯ ನೀರಿನ ಕೊರತೆಯಿಂದಾಗಿ ನಗರದಲ್ಲಿ ನೀರಿನ ಬಿಕ್ಕಟ್ಟು ಮತ್ತಷ್ಟು ತಲೆದೋರಿದ್ದು, ಇದರ ಪರಿಣಾಮ ನಗರದಲ್ಲಿನ ಹಲವಾರು ಮಾಲ್‌ಗಳಲ್ಲಿನ ಶೌಚಾಲಯಗಳು ಗಬ್ಬು ನಾರುತ್ತಿವೆ.

ಮಾಲ್ ಗಳಲ್ಲಿನ ಶೌಚಾಲಯಗಳನ್ನು ಆಗಾಗ್ಗೆ ಅಲ್ಲದೆ, ಕೆಲವೇ ಬಾರಿ ಸ್ವಚ್ಛಗೊಳಿಸುವಂತೆ ಸೂಚನೆ ನೀಡಲಾಗಿದೆ ಎಂದು ಹೌಸ್‌ಕೀಪಿಂಗ್ ಸಿಬ್ಬಂದಿಗಳು ಹೇಳಿದ್ದಾರೆ.

ಮಾಲ್ ಗಳಲ್ಲಿ ಹೆಚ್ಚಿನ ಸಂಖ್ಯೆಯ ಜನರು ಶೌಚಾಲಯಗಳನ್ನು ಬಳಕೆ ಮಾಡುತ್ತಿರುತ್ತಾರೆ. ನೀರಿನ ಅಭವಾ ಹಿನ್ನೆಲೆಯಲ್ಲಿ ಶೌಚಾಲಯಗಳ ಸ್ವಚ್ಛತೆಗೆ ನೀರು ಬಳಕೆಯನ್ನು ಕಡಿಮೆ ಮಾಡಿ ಏರ್ ಫ್ರೆಶನರ್ ಮತ್ತು ಸೋಂಕುನಿವಾರಕಗಳನ್ನು ಬಳಕೆ ಮಾಡಲಾಗುತ್ತಿದೆ. ಏರ್ ಫ್ರೆಶನರ್ ಬಳಕೆ ಮಾಡಿದರೂ ಸಾಕಷ್ಟು ನೀರಿನಿಂದ ಸ್ವಚ್ಛಗೊಳಿಸದ ಕಾರಣ ದುರ್ವಾಸನೆ ಬರುತ್ತಿದೆ. ಒಂದು ತಿಂಗಳಿನಿಂದಲೂ ಪರಿಸ್ಥಿತಿ ಹೀಗೆಯೇ ಇದೆ ಎಂದು ತಿಳಿಸಿದ್ದಾರೆ.

ಸಾಂದರ್ಭಿಕ ಚಿತ್ರ
BBMP ಘನತ್ಯಾಜ್ಯ ನಿರ್ವಹಣಾ ಘಟಕದಿಂದ ದುರ್ನಾತ: ಬನಶಂಕರಿಯ ಬಿಡಿಎ ಲೇ ಔಟ್ ನಿವಾಸಿಗಳು ಹೈರಾಣ!

ಸೇಲ್ಸ್ ಎಕ್ಸಿಕ್ಯೂಟಿವ್ ಆಗಿರುವ ಪ್ರೇರಣಾ ಅವರು ಮಾತನಾಡಿ, ಮಾಲ್ ಗಳಲ್ಲಿ ಶೌಚಾಲಯಗಳ ಸ್ಥಿತಿ ಹದಗೆಡುತ್ತಿದೆ. ದುರ್ವಾಸನೆ ಬರುತ್ತಿದೆ. ಹೌಸ್ ಕೀಪಿಂಗ್ ಸಿಬ್ಬಂದಿಯನ್ನು ವಿಚಾರಿಸಿದಾಗ ಸ್ವಚ್ಛತೆಗೆ ನೀರನ್ನು ಕಡಿಮೆ ಬಳಕೆ ಮಾಡುತ್ತಿರುವುದಾಗಿ ಹೇಳಿದರು ಎಂದು ಹೇಳಿದ್ದಾರೆ.

ಮಲ್ಲೇಶ್ವರಂನ ಮಾಲ್‌ನಲ್ಲಿನ ಮತ್ತೊಬ್ಬ ಹೌಸ್‌ಕೀಪಿಂಗ್ ಸಿಬ್ಬಂದಿ ಮಾತನಾಡಿ, ನೀರು ಬಳಕೆ ಕಡಿಮೆ ಮಾಡಲು, ಸಾಬೂನುಗಳನ್ನು ಫ್ಲಶ್ ಟ್ಯಾಂಕ್‌ಗಳಿಗೆ ಹಾಕುವಂತೆ ಸೂಚಿಸಲಾಗಿದೆ. ದಿನಕ್ಕೆ ಒಂದು ಬಾರಿ ಶೌಚಾಲಯಗಳ ಸ್ವಚ್ಛಗೊಳಿಸುವಂತೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com