KIA ನಲ್ಲಿರುವ BESCOM EV ಚಾರ್ಜಿಂಗ್ ಸ್ಟೇಷನ್‌ನಲ್ಲಿ ವಿದ್ಯುತ್ ಸಂಗ್ರಹಕ್ಕೆ ಬಳಸಲ್ಪಟ್ಟ ಬ್ಯಾಟರಿಗಳ ಉಪಯೋಗ!

ಈಗಿರುವ ಬೆಸ್ಕಾಂನ 224ಕೆವಿ ಪವರ್ ಸ್ಟೇಷನ್ ಜಾಗದಲ್ಲಿ ಈ ಬಳಸಿದ ಕಾರು ಬ್ಯಾಟರಿ ಕೇಂದ್ರ ತಲೆ ಎತ್ತಲಿದೆ. ಇದು ವಿಮಾನ ನಿಲ್ದಾಣದ ಪಾರ್ಕಿಂಗ್ ವಲಯದಿಂದ 1.5 ಕಿಮೀ ದೂರದಲ್ಲಿದೆ. ಈ ಕೇಂದ್ರದಲ್ಲಿ ಒಮ್ಮೆಗೆ 24 ವಾಹನಗಳನ್ನು ಚಾರ್ಜ್ ಮಾಡಬಹುದು. ಮೂರು ಫಾಸ್ಟ್ ಚಾರ್ಜಿಂಗ್ ಪಾಯಿಂಟ್‌ಗಳನ್ನು ಸಹ ಇಲ್ಲಿ ಸ್ಥಾಪಿಸಲಾಗುತ್ತಿದೆ.
Used car batteries to store power at Bescom’s EV charging station in KIA
EV ಚಾರ್ಜಿಂಗ್ ಸ್ಟೇಷನ್‌ (ಸಾಂದರ್ಭಿಕ ಚಿತ್ರ)
Updated on

ಬೆಂಗಳೂರು: ಕ್ಯಾಬ್ ಅಗ್ರಿಗೇಟರ್‌ಗಳು ಮತ್ತು ಸಾರ್ವಜನಿಕರ ಬಳಕೆಗಾಗಿ ಇಂಧನ ಇಲಾಖೆಯು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ಸ್ಟೇಷನ್ ಅನ್ನು ಸ್ಥಾಪಿಸುತ್ತಿದ್ದು, ದೇಶದಲ್ಲಿ ಮೊದಲ ಉಪಕ್ರಮವಾಗಿ ಬೆಂಗಳೂರು ವಿದ್ಯುತ್ ಸರಬರಾಜು ನಿಗಮ ನಿಯಮಿತ (ಬೆಸ್ಕಾಂ) ವಿದ್ಯುತ್ ಶೇಖರಣೆಗಾಗಿ ಸೆಕೆಂಡ್ ಲೈಫ್ ಕಾರ್ ಬ್ಯಾಟರಿಗಳನ್ನು ಸಹ ಬಳಸುತ್ತಿದೆ.

ಈಗಿರುವ ಬೆಸ್ಕಾಂನ 224ಕೆವಿ ಪವರ್ ಸ್ಟೇಷನ್ ಜಾಗದಲ್ಲಿ ಈ ಬಳಸಿದ ಕಾರು ಬ್ಯಾಟರಿ ಕೇಂದ್ರ ತಲೆ ಎತ್ತಲಿದೆ. ಇದು ವಿಮಾನ ನಿಲ್ದಾಣದ ಪಾರ್ಕಿಂಗ್ ವಲಯದಿಂದ 1.5 ಕಿಮೀ ದೂರದಲ್ಲಿದೆ. ಈ ಕೇಂದ್ರದಲ್ಲಿ ಒಮ್ಮೆಗೆ 24 ವಾಹನಗಳನ್ನು ಚಾರ್ಜ್ ಮಾಡಬಹುದು. ಮೂರು ಫಾಸ್ಟ್ ಚಾರ್ಜಿಂಗ್ ಪಾಯಿಂಟ್‌ಗಳನ್ನು ಸಹ ಇಲ್ಲಿ ಸ್ಥಾಪಿಸಲಾಗುತ್ತಿದೆ.

ಈ ಬಗ್ಗೆ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ ಜೊತೆ ಮಾತನಾಡಿರುವ ಬೆಸ್ಕಾಂ ಹಿರಿಯ ಅಧಿಕಾರಿಯೊಬ್ಬರು, 'ಇದನ್ನು GIZ ಮತ್ತು ನೂನಮ್ ಕಂಪನಿಗಳ ಸಮನ್ವಯದಲ್ಲಿ ಸ್ಥಾಪಿಸಲಾಗುವುದು. ನಾವು ಇದಕ್ಕಾಗಿ ಬಳಸಿದ ಕಾರ್ ಬ್ಯಾಟರಿಗಳನ್ನು ಆಯ್ಕೆ ಮಾಡುತ್ತಿದ್ದೇವೆ. ವಿದ್ಯುತ್ ಶೇಖರಣೆಗಾಗಿ ಅವುಗಳನ್ನು ಬಳಸಲಾಗುವುದು. ಇಲ್ಲಿಯವರೆಗೆ, ಇಲಾಖೆಯು ಹಸಿರು ಹೈಡ್ರೋಜನ್ ವಿದ್ಯುತ್ ಸಂಗ್ರಹಣೆಯ ಬಗ್ಗೆ ಒಳಾಂಗಣ ಪ್ರಯೋಗಗಳನ್ನು ನಡೆಸುತ್ತಿದೆ. ಈಗ ಎರಡು ಖಾಸಗಿ ಸಂಸ್ಥೆಗಳ ಸಹಾಯದಿಂದ ಹಗಲಿನಲ್ಲಿ ಉತ್ಪಾದಿಸುವ ಸೌರಶಕ್ತಿಯನ್ನು ಬ್ಯಾಟರಿಗಳಲ್ಲಿ ಸಂಗ್ರಹಿಸಿ ನಂತರ ಕಾರುಗಳಿಗೆ ಸರಬರಾಜು ಮಾಡಲಾಗುತ್ತದೆ. ಇಜದಕ್ಕಾಗಿ ಸೌರ ವಿದ್ಯುತ್ ಫಲಕಗಳನ್ನು ಸಹ ಸ್ಥಾಪಿಸಲಾಗುತ್ತಿದೆ ಎಂದು ತಿಳಿಸಿದರು.

Used car batteries to store power at Bescom’s EV charging station in KIA
ಪ್ರಯೋಗಾರ್ಥ ಇವಿ ವಾಹನ ಅಪಘಾತದಲ್ಲಿ ಇಬ್ಬರು ಅರಣ್ಯ ವಲಯಾಧಿಕಾರಿ ಸೇರಿ ನಾಲ್ವರ ದುರ್ಮರಣ

ಅಂತೆಯೇ ಈ ಚಾರ್ಜಿಂಗ್ ಸೌಲಭ್ಯವು 24/7 ತೆರೆದಿರುತ್ತದೆ ಮತ್ತು ಸೆಪ್ಟೆಂಬರ್ ಮೊದಲ ವಾರದಲ್ಲಿ ಪ್ರಾರಂಭಿಸಲಾಗುವುದು. ಇತರ ನಗರಗಳಲ್ಲಿ, ಇವಿ ಕ್ಯಾಬ್‌ಗಳ ಹೆಚ್ಚಳ ಕಂಡುಬಂದಿದೆ. ಆದರೆ ಬೆಂಗಳೂರಿನಲ್ಲಿ ಈ ಸಂಖ್ಯೆ ಕಡಿಮೆಯೇ ಇದೆ. ಇರುವ ಹೆಚ್ಚಿನ ಇವಿ ವಾಹನಗಳಲ್ಲಿ ಹೆಚ್ಚಿನವು ದ್ವಿಚಕ್ರ ವಾಹನಗಳಾಗಿವೆ ಎಂದು ಬೆಸ್ಕಾಂ ಅಧಿಕಾರಿ ಹೇಳಿದರು. ಅಂತೆಯೇ ನಾಗರಿಕರು ಸಹ ಇವಿಗಳಿಗೆ ಆದ್ಯತೆ ನೀಡುತ್ತಾರೆ, ವಿಶೇಷವಾಗಿ ಇತರ ನಗರಗಳಿಂದ ಬರುವವರಿಗೆ ಇದು ನೆರವಾಗಲಿದೆ.

ವಿಮಾನ ನಿಲ್ದಾಣ ಆವರಣದಲ್ಲಿ EV ಚಾರ್ಜಿಂಗ್ ಘಟಕವನ್ನು ಹೊಂದಿದ್ದರೆ, ಇದು ವಿಮಾನ ನಿಲ್ದಾಣದ ವಾಹನಗಳಿಗೆ ಮಾತ್ರ. ಅಂತೆಯೇ, ಖಾಸಗಿ ಏಜೆನ್ಸಿಗಳು ತಮ್ಮ ಫ್ಲೀಟ್‌ಗಾಗಿ ಇನ್ನೂ ಎರಡು ಚಾರ್ಜಿಂಗ್ ಪಾಯಿಂಟ್‌ಗಳನ್ನು ನಿರ್ವಹಿಸುತ್ತವೆ, ಆದರೆ ಯಾವುದೂ ಸಾರ್ವಜನಿಕರಿಗೆ ಇದ ಬಳಕೆಗೆ ಇಲ್ಲ. ಹೊಸದೊಂದು ಘಟಕ ಬರುತ್ತಿರುವುದು ನಾಗರಿಕರು ಮತ್ತು ಇತರ ಕ್ಯಾಬ್ ಅಗ್ರಿಗೇಟರ್‌ಗಳಿಗೆ ಸಹಾಯ ಮಾಡುತ್ತದೆ. ಸಾರ್ವಜನಿಕ ಮತ್ತು ಖಾಸಗಿ ಸಾರಿಗೆಯಲ್ಲಿ ಇವಿಗಳನ್ನು ಉತ್ತೇಜಿಸುವುದು ಬೆಸ್ಕಾಂನ ಉದ್ದೇಶವಾಗಿದೆ ಮತ್ತು ಭವಿಷ್ಯದಲ್ಲಿ ವಿಸ್ತರಣೆಯ ಯೋಜನೆಗಳಿವೆ ಎಂದು ಅಧಿಕಾರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Used car batteries to store power at Bescom’s EV charging station in KIA
ಇವಿ ಬ್ಯಾಟರಿ ಉತ್ಪಾದನೆ: ಐಬಿಸಿ ಜತೆ ರಾಜ್ಯ ಸರ್ಕಾರ ಒಡಂಬಡಿಕೆ; 8 ಸಾವಿರ ಕೋಟಿ ರೂ. ಹೂಡಿಕೆಗೆ ಅಸ್ತು

ಇವಿಗಳ ಸಂಖ್ಯೆಯಲ್ಲಿ ಬೆಂಗಳೂರು ಮುಂಚೂಣಿಯಲ್ಲಿದ್ದು, ರಾಜ್ಯದಲ್ಲಿ 4.80 ಲಕ್ಷ ಇವಿಗಳಿವೆ. ಆಗಸ್ಟ್ 19 ರಂದು ಬಿಡುಗಡೆಯಾದ ಬ್ಯೂರೋ ಆಫ್ ಎನರ್ಜಿ ದಕ್ಷತೆಯ ವರದಿಯ ಪ್ರಕಾರ, ಕರ್ನಾಟಕವು 5,765 ಸಾರ್ವಜನಿಕ ಇವಿ ಚಾರ್ಜಿಂಗ್ ಕೇಂದ್ರಗಳನ್ನು ಹೊಂದಿದೆ, ಇದು ದೇಶದಲ್ಲೇ ಅತಿ ಹೆಚ್ಚು ಮತ್ತು ಬೆಂಗಳೂರು ಮಾತ್ರ 4,462 ಹೊಂದಿದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com