ಪೈಪ್‌ಲೈನ್‌ ಕಾಮಗಾರಿ ಅಪೂರ್ಣ: ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಕುಡಿಯುವ ನೀರಿಗೆ ಸಮಸ್ಯೆ!

ಉದ್ಯಾನವನದ ರಸ್ತೆಯಲ್ಲಿ ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯುಡಿ) ಪೈಪ್‌ಲೈನ್ ಹಾಕುವ ಕಾಮಗಾರಿ ನಡೆಸುತ್ತಿದೆ. ಆದರೆ, ಬನ್ನೇರುಘಟ್ಟ ಗ್ರಾಮ ಪಂಚಾಯಿತಿ ಸದಸ್ಯರು ಈ ಕಾಮಗಾರಿಗೆ ಅಡ್ಡಿಪಡಿಸುತ್ತಿದ್ದು, ಇದರಿಂದಾಗಿ ಯೋಜನೆ ವಿಳಂಬವಾಗಿದೆ ಎನ್ನಲಾಗಿದೆ.
ಬನ್ನೇರುಘಟ್ಟ ಜೈವಿಕ ಉದ್ಯಾನವನ
ಬನ್ನೇರುಘಟ್ಟ ಜೈವಿಕ ಉದ್ಯಾನವನ
Updated on

ಬೆಂಗಳೂರು: ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯುಎಸ್‌ಎಸ್‌ಬಿ) ಪೈಪ್‌ಲೈನ್‌ ಹಾಕುವ ಕೆಲಸವನ್ನು ಪೂರ್ಣಗೊಳಿಸದ ಪರಿಣಾಮ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಎದುರಾಗಿದೆ.

ಉದ್ಯಾನವನದ ರಸ್ತೆಯಲ್ಲಿ ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯುಡಿ) ಪೈಪ್‌ಲೈನ್ ಹಾಕುವ ಕಾಮಗಾರಿ ನಡೆಸುತ್ತಿದೆ. ಆದರೆ, ಬನ್ನೇರುಘಟ್ಟ ಗ್ರಾಮ ಪಂಚಾಯಿತಿ ಸದಸ್ಯರು ಈ ಕಾಮಗಾರಿಗೆ ಅಡ್ಡಿಪಡಿಸುತ್ತಿದ್ದು, ಇದರಿಂದಾಗಿ ಯೋಜನೆ ವಿಳಂಬವಾಗಿದೆ ಎನ್ನಲಾಗಿದೆ.

ಶೇ.80ರರಷ್ಟು ಕಾಮಗಾರಿ ಕೆಲಸ ಪೂರ್ಣಗೊಂಡಿದೆ. ಆದರೆ, ಇನ್ನುಳಿದ ಕೆಲಸಕ್ಕೆ ಸ್ಥಳೀಯ ಪಂಚಾಯಿತಿ ಸದಸ್ಯರು ಹಾಗೂ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಇದರಿಂದ 150 ಮೀಟರ್‌ ಪೈಪ್‌ ಹಾಕಲು ಸಾಧ್ಯವಾಗುತ್ತಿಲ್ಲ. ಸಮಸ್ಯೆ ಬಗೆಹರಿಸುವಂತೆ ಪಿಡಬ್ಲ್ಯುಡಿ ಬಳಿ ಮನವಿ ಮಾಡಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ದಕ್ಷಿಣ ವಲಯದ ಬಿಡಬ್ಲ್ಯುಎಸ್‌ಎಸ್‌ಬಿ ಮುಖ್ಯ ಎಂಜಿನಿಯರ್‌ ವೆಂಕಟೇಶ್‌ ಎಸ್‌ವಿ ಮಾತನಾಡಿ, ಸಮಸ್ಯೆ ಬಗೆಹರಿದಿದ್ದು, 15 ದಿನಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ತಿಳಿಸಿದ್ದಾರೆ.

ಬನ್ನೇರುಘಟ್ಟ ಜೈವಿಕ ಉದ್ಯಾನವನ
'Save ಬನ್ನೇರುಘಟ್ಟ' ಅಭಿಯಾನಕ್ಕೆ 16 ಸಾವಿರಕ್ಕೂ ಹೆಚ್ಚು ಮಂದಿ ಸಹಿ!

ಕಾವೇರಿ ನೀರನ್ನು ಪ್ರಾಣಿಗಳಿಗಲ್ಲದೆ ಸಾರ್ವಜನಿಕರಿಗೆ ಮಾತ್ರ ಬಳಕೆ ಮಾಡುವಂತೆ ಅಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ. ಉದ್ಯಾನವನದ ಪ್ರಾಣಿಗಳಿಗೆ ಹಾಗೂ ನಿರ್ವಹಣೆಗೆ ಬೋರ್‌ವೆಲ್ ನೀರನ್ನು ಬಳಸಲಾಗುತ್ತಿದೆ ಎಂದು ಉದ್ಯಾನವನದ ಆಡಳಿತ ಮಂಡಳಿ ಮಾಹಿತಿ ನೀಡಿದೆ.

ಬನ್ನೇರುಘಟ್ಟ ಜೈವಿಕ ಉದ್ಯಾನವನದ ಕಾರ್ಯನಿರ್ವಾಹಕ ನಿರ್ದೇಶಕ ಸೂರ್ಯ ಸೇನ್ ಮಾತನಾಡಿ. ಕಾವೇರಿ ನೀರಿನ ಪೈಪ್‌ಲೈನ್ ಗಾಗಿ ಬಿಬಿಪಿ ಆಡಳಿತ ಮಂಡಳಿಯು 2,38,32,433 ರೂ.ಗಳನ್ನು ಠೇವಣಿ ಮಾಡಿದೆ. ಆದರೆ, ಪಂಚಾಯಿತಿ ಸದಸ್ಯರಿಗೆ ಇದು ಸಮಾಧಾನ ತರಿಸಿಲ್ಲ. ಗ್ರಾಮದಲ್ಲಿರುವ ಪಂಚಾಯಿತಿ ಕಚೇರಿ ಹಾಗೂ ಮನೆಗಳಿಗೂ ಕಾವೇರಿ ನೀರು ಸಂಪರ್ಕ ನೀಡಬೇಕು ಎಂದು ಒತ್ತಾಯಿಸುತ್ತಿದ್ದಾರೆ.

ಪಂಚಾಯಿತಿ ರಸ್ತೆ ಬಳಕೆ, ಕಸದ ಹಾವಳಿ ಮತ್ತು ಜಮೀನು ಬಳಕೆ ಮಾಡುತ್ತಿರುವುದಕ್ಕೆ ಬಿಬಿಪಿ ಆದಾಯದಿಂದ ವಾರ್ಷಿಕ 50 ಲಕ್ಷ ರೂಪಾಯಿ ಪಾವತಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆಂದು ತಿಳಿಸಿದ್ದಾರೆ.

ಬನ್ನೇರುಘಟ್ಟ ಜೈವಿಕ ಉದ್ಯಾನವನ
ಮೆಟ್ರೊ ಕಾಮಗಾರಿ: ಬನ್ನೇರುಘಟ್ಟ ಮುಖ್ಯ ರಸ್ತೆಯ ಮೈಕೋ ಸಿಗ್ನಲ್‌ನಿಂದ ಆನೆಪಾಳ್ಯ ಜಂಕ್ಷನ್‌ವರೆಗೆ 1 ವರ್ಷ ವಾಹನ ಸಂಚಾರ ನಿಷೇಧ

ರಸ್ತೆಗಳನ್ನು ಪಿಡಬ್ಲ್ಯೂಡಿ ನಿರ್ಮಿಸಿದ್ದು, ಅರಣ್ಯ ಭೂಮಿಯಲ್ಲಿ ಮೃಗಾಲಯ ನಿರ್ಮಿಸಲಾಗಿದೆ. ಮೃಗಾಲಯದ ಯಾವುದೇ ಕಾಮಗಾರಿಗಾಗಿ ಯಾವುದೇ ಪಂಚಾಯತ್ ಭೂಮಿಯನ್ನು ನಾವು ಸ್ವಾಧೀನಪಡಿಸಿಕೊಂಡಿಲ್ಲ ಎಂದು ಸೂರ್ಯ ಸೇನ್ ಅವರು ಹೇಳಿದ್ದಾರೆ.

ಆದರೆ, ಪಂಚಾಯಿತಿ ಅಧ್ಯಕ್ಷ ಮಂಜುನಾಥ್ ಅವರು ಸುತ್ತಮುತ್ತಲಿನ ಗ್ರಾಮಗಳಿಗೂ ಕಾವೇರಿ ನೀರು ಕೊಡಬೇಕೆಂದು ಒತ್ತಾಯಿಸಿದ್ದಾರೆ.

ನಾವು BWSSB ಗೆ ಯಾವುದೇ ಪತ್ರವನ್ನು ಬರೆದಿಲ್ಲ, ಆದರೆ ಮೌಖಿಕವಾಗಿ ಮನವಿ ಮಾಡಿಕೊಂಡಿದ್ದೇವೆ. ಹಳ್ಳಿಗಳು ಅಭಿವೃದ್ಧಿಯಾಗುತ್ತಿಲ್ಲ, ಆದರೆ, ಮೃಗಾಲಯ ಅಭಿವೃದ್ಧಿಯಾಗುತ್ತಿದೆ. ಗ್ರಾಮದ ಅಭಿವೃದ್ಧಿಗೂ ಹಣ ನೀಡಬೇಕು. ನಾವೂ ನಗರದ ಹೊರವಲಯದ ಭಾಗವಾಗಿರುವುದರಿಂದ ನಮಗೆ ಕಾವೇರಿ ನೀರು ಸಿಗಬೇಕು. ಪಿಡಬ್ಲ್ಯೂಡಿ ರಸ್ತೆ ನಿರ್ಮಿಸುತ್ತಿದ್ದರೂ, ಪೈಪ್‌ಲೈನ್‌ಗೆ ಅನುಮತಿ ನೀಡಲು ಸಾಧ್ಯವಿಲ್ಲ ಎಂದಿದ್ದಾರೆ.

ಈ ನಡುವೆ ಸರಕಾರದ ಆದೇಶದ ಮೇರೆಗೆ ಬನ್ನೇರುಘಟ್ಟ ಮೃಗಾಲಯಕ್ಕೆ ಮಾತ್ರ ಕುಡಿಯುವ ನೀರು ಪೂರೈಸಲು ವಿಶೇಷ ಅನುಮತಿ ನೀಡಲಾಗಿತ್ತು. ಆದರೆ, ಬನ್ನೇರುಘಟ್ಟ ಪಂಚಾಯಿತಿಯನ್ನು 110 ಗ್ರಾಮಗಳ ಪಟ್ಟಿಯಲ್ಲಿ ಅಥವಾ ಕಾವೇರಿ ಪೈಪ್‌ಲೈನ್‌ಗಳನ್ನು ಹಾಕುತ್ತಿರುವ ಸಿಎಂಸಿ ಅಥವಾ ಟಿಎಂಸಿ ಪ್ರದೇಶಗಳ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿಲ್ಲ ಬಿಡಬ್ಲ್ಯೂಎಸ್‌ಎಸ್‌ಬಿ ಅಧಿಕಾರಿಗಳು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com