ಇಂದು ಶ್ರೀ ಕೃಷ್ಣ ಜನ್ಮಾಷ್ಠಮಿ: ದೇವಾಲಯಗಳಲ್ಲಿ ವಿಶೇಷ ಪೂಜೆ, ಕೃಷ್ಣ-ರಾಧೆಯರ ವೇಷತೊಟ್ಟು ಎಲ್ಲೆಲ್ಲೂ ಚಿಣ್ಣರ ಸಂಭ್ರಮ

ಇಂದು ಶ್ರೀಕೃಷ್ಣ ಜನ್ಮಾಷ್ಠಮಿ. ದೇಶದಾದ್ಯತ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ನಗರದಲ್ಲೂ ಹಬ್ಬದ ಸಂಭ್ರಮ ಮನೆ ಮಾಡಿದೆ. ಕೃಷ್ಣ ಜನ್ಮಾಷ್ಠಮಿ ಹಿನ್ನೆಲೆಯಲ್ಲಿ ನಗರದ ಇಸ್ಕಾನ್ ಸೇರಿದಂತೆ ಹಲವು ದೇವಾಲಯ, ಮಠಗಳಲ್ಲಿ ವಿಶೇಷ ಪೂಜೆ ಹಾಗೂ ಧಾರ್ಮಿಕ ಕೈಂಕರ್ಯ ನಡೆಯುತ್ತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಇಂದು ಶ್ರೀಕೃಷ್ಣ ಜನ್ಮಾಷ್ಠಮಿ. ದೇಶದಾದ್ಯತ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ನಗರದಲ್ಲೂ ಹಬ್ಬದ ಸಂಭ್ರಮ ಮನೆ ಮಾಡಿದೆ. ಕೃಷ್ಣ ಜನ್ಮಾಷ್ಠಮಿ ಹಿನ್ನೆಲೆಯಲ್ಲಿ ನಗರದ ಇಸ್ಕಾನ್ ಸೇರಿದಂತೆ ಹಲವು ದೇವಾಲಯ, ಮಠಗಳಲ್ಲಿ ವಿಶೇಷ ಪೂಜೆ ಹಾಗೂ ಧಾರ್ಮಿಕ ಕೈಂಕರ್ಯ ನಡೆಯುತ್ತಿದೆ.

ಈ ನಡುವೆ ಶಾಲೆಗಳಲ್ಲಿಯೂ ಶ್ರೀಕೃಷ್ಣ ಜನ್ಮಾಷ್ಠಮಿ ಸಂಭ್ರಮ ಮನೆ ಮಾಡಿದ್ದು, ಮಕ್ಕಳು ರಾಧೆ, ಕೃಷ್ಣನ ವೇಷ ತೊಟ್ಟು ಸಂಭ್ರಮಿಸುತ್ತಿದ್ದಾರೆ. ರಾಧಾ-ಕೃಷ್ಣ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಕೃಷ್ಣ ಜನ್ಮಾಷ್ಟಮಿ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ.

ಈ ನಡುವೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶದ ಜನತೆಗೆ ಕೃಷ್ಣ ಜನ್ಮಾಷ್ಠಮಿಯ ಶುಭಾಶಯಗಳನ್ನು ಕೋರಿದ್ದಾರೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಟ್ವೀಟ್ ಮಾಡಿ, ಕೃಷ್ಣ ಜನ್ಮಾಷ್ಟಮಿಯ ಈ ಶುಭ ಸಂದರ್ಭದಲ್ಲಿ ದೇಶದ ಎಲ್ಲಾ ಜನರಿಗೆ ಶುಭಾಶಯಗಳನ್ನು ತಿಳಿಸುತ್ತಿದ್ದೇನೆ. ಈ ಹಬ್ಬವು ಶ್ರೀ ಕೃಷ್ಣನ ದೈವಿಕ ಆದರ್ಶಗಳಿಗೆ ಸಮರ್ಪಿತರಾಗಲು ನಮ್ಮನ್ನು ಪ್ರೇರೇಪಿಸುತ್ತದೆ. ಶ್ರೀ ಕೃಷ್ಣನ ಬೋಧನೆಗಳನ್ನು ಅಳವಡಿಸಿಕೊಳ್ಳೋಣ ಮತ್ತು ದೇಶದ ಪ್ರಗತಿ ಮತ್ತು ಸಮೃದ್ಧಿಗಾಗಿ ಕೆಲಸ ಮಾಡುವ ಸಂಕಲ್ಪ ಮಾಡೋಣ ಎಂದು ಹೇಳಿದ್ದಾರೆ.

ಸಂಗ್ರಹ ಚಿತ್ರ
ಕೃಷ್ಣ ಜನ್ಮಾಷ್ಟಮಿ: ವಿಭಿನ್ನ ಆಚರಣೆಗಳು ಹೇಗೆ ನಡೆಯಲಿದೆ ಗೊತ್ತೇ?

ಭಾರತದಲ್ಲಿ ಶ್ರೀಕೃಷ್ಣನ ಜನ್ಮಾಷ್ಟಮಿ ಹಬ್ಬ ತನ್ನದೇ ಆದ ವಿಶೇಷತೆಗಳನ್ನು ಹೊಂದಿದೆ. ಮನೆ ಮನೆಗಳಲ್ಲಿ ಮಕ್ಕಳು ರಾಧಾ-ಕೃಷ್ಣರಾಗುತ್ತಾರೆ. ಮಕ್ಕಳಿಗೆ ರಾಧಾ-ಕೃಷ್ಣನ ವೇಷಭೂಷಣ ತೊಡಿಸಿ ಪೋಷಕರು ಸಂಭ್ರಮಿಸುತ್ತಾರೆ. ಹುಡುಗರು ಎತ್ತರಕ್ಕೆ ಬೆಣ್ಣೆ ಇರುವ ಮಡಿಕೆ ಕಟ್ಟಿ ಒಡೆಯುತ್ತಾರೆ. ಬಾಲಕೃಷ್ಣ ಬೆಣ್ಣೆ ಕದ್ದು ತಿನ್ನುವ ಸಂದರ್ಭವನ್ನು ಸ್ಮರಿಸುತ್ತಾರೆ. ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿ ಭಕ್ತಿ-ಭಾವ ಮೆರೆಯುತ್ತಾರೆ.

ಶ್ರೀಕೃಷ್ಣ ವೈಷ್ಣವ ಧರ್ಮದ ಪ್ರತೀಕ. ಕೃಷ್ಣನ ಜನ್ಮಸ್ಥಳ ಮಥುರಾದಲ್ಲಿದ್ದು, ಅಲ್ಲಿ ಜನ್ಮಾಷ್ಟಮಿ ಆಚರಣೆ ವಿಶೇಷವಾಗಿರುತ್ತದೆ. ‘ದಹಿ ಹಂಡಿ’ ( ಮೊಸರಿನ ಗಡಿಗೆ) ಒಡೆಯುವುದು ಹಬ್ಬದ ಪ್ರಮುಖ ಆಕರ್ಷಣೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com