ಮಂಗಳೂರು: ಮಹಾತ್ಮ ಗಾಂಧೀಜಿ ಶಿಲಾನ್ಯಾಸ ನೆರವೇರಿಸಿದ್ದ ಶಾಲೆಯಲ್ಲಿ ಸಂಭ್ರಮದ ಕೃಷ್ಣ ಜನ್ಮಾಷ್ಠಮಿ

ಇತಿಹಾಸಕಾರರ ಪ್ರಕಾರ, ಸ್ವಾತಂತ್ರ್ಯ ಹೋರಾಟದ ಭಾಗವಾಗಿ ಮಹಾತ್ಮಾ ಗಾಂಧಿಯವರು ಮಂಗಳೂರಿಗೆ 1920, 1927 ಮತ್ತು 1934ರಲ್ಲಿ ಮೂರು ಬಾರಿ ಭೇಟಿ ನೀಡಿದ್ದರು.
ಗಾಂಧೀಜಿ ಶಿಲಾನ್ಯಾಸ ನೆರವೇರಿಸಿದ್ದ ಶಾಲೆಯಲ್ಲಿ ಕೃಷ್ಣ ಜನ್ಮಾಷ್ಠಮಿ
ಗಾಂಧೀಜಿ ಶಿಲಾನ್ಯಾಸ ನೆರವೇರಿಸಿದ್ದ ಶಾಲೆಯಲ್ಲಿ ಕೃಷ್ಣ ಜನ್ಮಾಷ್ಠಮಿ
Updated on

ಮಂಗಳೂರು: ದಶಕಗಳ ಹಿಂದೆ ಮಹಾತ್ಮಾ ಗಾಂಧೀಜಿಯವರು ಮಂಗಳೂರು ನಗರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಶಿಲಾನ್ಯಾಸ ನೆರವೇರಿಸಿದ ಶಾಲೆಯೊಳಗಿನ ಕೃಷ್ಣ ಮಂದಿರದಲ್ಲಿ ಸೋಮವಾರ ಮಕ್ಕಳು ಕೃಷ್ಣ ಜನ್ಮಾಷ್ಟಮಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿದರು.

ಇತಿಹಾಸಕಾರರ ಪ್ರಕಾರ, ಸ್ವಾತಂತ್ರ್ಯ ಹೋರಾಟದ ಭಾಗವಾಗಿ ಮಹಾತ್ಮಾ ಗಾಂಧಿಯವರು ಮಂಗಳೂರಿಗೆ 1920, 1927 ಮತ್ತು 1934ರಲ್ಲಿ ಮೂರು ಬಾರಿ ಭೇಟಿ ನೀಡಿದ್ದರು. ಫೆಬ್ರವರಿ 24, 1934 ರಂದು ಮಂಗಳೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ, ಗಾಂಧೀಜಿ ಅವರು ಮಂಗಳೂರಿನ ಡೊಂಗರಕೇರಿಯ ಕೆನರಾ ಲೋಯರ್ ಪ್ರೈಮರಿ ಕನ್ನಡ ಮಾಧ್ಯಮ ಶಾಲೆಗೆ ಹೊಂದಿಕೊಂಡಂತೆ ಕೃಷ್ಣ ಮಂದಿರಕ್ಕೆ ಅಡಿಪಾಯ ಹಾಕಿದರು. ಗಾಂಧೀಜಿ ಅನಾವರಣಗೊಳಿಸಿದ ಫಲಕವನ್ನು ಶಾಲೆಯ ಗೋಡೆಯ ಮೇಲೆ ಇಂದಿಗೂ ಕಾಣಬಹುದು. ಕಾರ್ಕಳದ ರೆಂಜಾಲ್ ಗೋಪಾಲ್ ಶೆಣೈ ಅವರು ದೇವಾಲಯದೊಳಗಿನ ಶ್ರೀಕೃಷ್ಣನ ಪ್ರತಿಮೆಯನ್ನು ಕೆತ್ತಿದ್ದಾರೆ.

ವಿದ್ಯಾರ್ಥಿನಿ ವಸುಂಧರಾ ಶೆಣೈ ಮಾತನಾಡಿ, ‘ಮಹಾತ್ಮ ಗಾಂಧಿಯವರು ನಮ್ಮ ಶಾಲೆಗೆ ಭೇಟಿ ನೀಡಿ ಕೃಷ್ಣ ಮಂದಿರಕ್ಕೆ ಅಡಿಗಲ್ಲು ಹಾಕಿದ್ದು ನಮಗೆಲ್ಲರಿಗೂ ಹೆಮ್ಮೆಯ ಸಂಗತಿ’ ಎಂದರು. ಕೃಷ್ಣ ಜನ್ಮಾಷ್ಟಮಿಯ ದಿನದಂದು ವಿಶೇಷ ಪೂಜೆಗಳು ನಡೆಯುತ್ತವೆ.

ಗಾಂಧೀಜಿ ಶಿಲಾನ್ಯಾಸ ನೆರವೇರಿಸಿದ್ದ ಶಾಲೆಯಲ್ಲಿ ಕೃಷ್ಣ ಜನ್ಮಾಷ್ಠಮಿ
ಕೃಷ್ಣ ಜನ್ಮಾಷ್ಟಮಿ: ವಿಭಿನ್ನ ಆಚರಣೆಗಳು ಹೇಗೆ ನಡೆಯಲಿದೆ ಗೊತ್ತೇ?

ನಮ್ಮ ವಿದ್ಯಾರ್ಥಿಗಳು ಭಜನೆ, ಶ್ಲೋಕಗಳನ್ನು ಪಠಿಸಿದರು ಮತ್ತು ಶ್ರೀಕೃಷ್ಣನಿಗೆ ಪೂಜೆ ಸಲ್ಲಿಸಿದರು. ಮೊಸರು ಕುಡಿಕೆ ಉತ್ಸವದಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡು ಶ್ರೀಕೃಷ್ಣನ ವೇಷ ಧರಿಸಿದ್ದರು ಎಂದು ಕೆನರಾ ಬಾಲಕಿಯರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಪ್ರಮೀಳಾ ಸಲ್ಡಾನ್ಹಾ ತಿಳಿಸಿದರು.

ವಿದ್ಯಾರ್ಥಿಗಳು ದೇಶಭಕ್ತಿ ಗೀತೆಗಳನ್ನು ಹಾಡುವ ಮತ್ತು ‘ರಘುಪತಿ ರಾಘವ ರಾಜಾ ರಾಮ್’ ಪಠಿಸುವ ಮೂಲಕ ಮಹಾತ್ಮ ಗಾಂಧಿಯವರ ಜನ್ಮದಿನವನ್ನು ಆಚರಿಸುತ್ತಾರೆ. ಪ್ರತಿದಿನ ನಮ್ಮ ವಿದ್ಯಾರ್ಥಿಗಳು ಶ್ರೀಕೃಷ್ಣನಿಗೆ ಪೂಜೆ ಸಲ್ಲಿಸುತ್ತಾರೆ ಮತ್ತು ಮಹಾತ್ಮ ಗಾಂಧಿಯನ್ನು ಸ್ಮರಿಸುತ್ತಾರೆ. ಈ ದೇವಾಲಯವು ಸ್ವಾತಂತ್ರ್ಯ ಹೋರಾಟದಲ್ಲಿ ಗಾಂಧಿಯವರ ಪಾತ್ರ ಮತ್ತು 1934 ರಲ್ಲಿ ಅವರು ಕೈಗೊಂಡ ಮಹತ್ವದ ಪಾದಯಾತ್ರೆಯ ಮಹತ್ವವನ್ನು ಜನರಿಗೆ ನೆನಪಿಸುತ್ತದೆ ಎಂದು ಪ್ರಮೀಳಾ ಹೇಳಿದರು. ಶಾಲೆಯು 1 ರಿಂದ 5 ನೇ ತರಗತಿಯ ನಡುವಿನ 130 ವಿದ್ಯಾರ್ಥಿಗಳು ಮತ್ತು ಎಂಟು ಖಾಯಂ ಶಿಕ್ಷಕರಿಗೆ ನೆಲೆಯಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com