
ಮಂಗಳೂರು: ಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ನಡೆದ ಮೊಸರು ಕುಡಿಕೆ ಉತ್ಸವದ ಮೆರವಣಿಗೆ ವೇಳೆ ಗುಂಪಿನಲ್ಲಿದ್ದ ಓರ್ವ ಯುವಕನೋರ್ವ ಸಾರ್ವಜನಿಕವಾಗಿ ಯುವತಿ ಜೊತೆ ಅಸಭ್ಯವಾಗಿ ವರ್ತಿಸಿರುವ ವಿಡಿಯೋ ವೈರಲ್ ಆಗಿದೆ.
ಮಂಗಳೂರಿನಲ್ಲಿ ನಡೆದ ಘಟನೆ ಎಂದು ಟ್ಯಾಗ್ ಮಾಡಿದ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಧಾರ್ಮಿಕ ಕಾರ್ಯಕ್ರಮದಲ್ಲಿ ಕೇಸರಿ ಶಾಲು ತೊಟ್ಟ ಯುವಕ ಯುವತಿ ಜೊತೆ ಅಸಭ್ಯವಾಗಿ ವರ್ತಿಸಿದ್ದು ಅಲ್ಲಿ ನೆರೆದಿದ್ದ ಜನರು ನೋಡುತ್ತಾ ನಿಂತಿದ್ದರು.
ಮಂಗಳೂರಿನ ತೊಕ್ಕಟ್ಟುವಿನಲ್ಲಿ ಮೊಸರು ಕುಡಿಕೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಯುವಕರ ಗುಂಪಿನಲ್ಲಿ ಯುವತಿ ಒಂಟಿಯಾಗಿದ್ದಳು. ಮತ್ತೊಂದೆಡೆ ಯುವತಿ ಮಂಗಳಮುಖಿಯೇ? ಎಂಬ ಅನುಮಾನಕೂಡ ವ್ಯಕ್ತವಾಗಿದೆ. ಆದರೆ ಈ ರೀತಿ ವರ್ತನೆ ಎಷ್ಟು ಸರಿ ಎಂದು ಸ್ಥಳೀಯರು ಆಕ್ರೊಶ ವ್ಯಕ್ತಪಡಿಸಿದ್ದಾರೆ.
Advertisement