Cyclone Fengal ಎಫೆಕ್ಟ್: ಬೆಂಗಳೂರಿನಲ್ಲಿ ಕುಸಿದ ತಾಪಮಾನ, ಚಳಿಗೆ ತತ್ತರಿಸಿದ ಸಿಲಿಕಾನ್ ಸಿಟಿ ಜನತೆ!

ಪರಿಣಾಮ ಬೆಂಗಳೂರಿನಲ್ಲಿ ತಾಪಮಾನ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಒಂದು ಕಡೆ ಮಳೆ ವಾತವರಣ ಇದ್ದರೆ, ಮತ್ತೊಂದೆಡೆ ಚಳಿ ವಾತವರಣ ರಾಜಧಾನಿ ಬೆಂಗಳೂರಿನ ಜನತೆ ನಡುಗುವಂತೆ ಮಾಡಿದೆ.
low temperature in Bengaluru
ಬೆಂಗಳೂರಿನಲ್ಲಿ ಕುಸಿದ ತಾಪಮಾನ
Updated on

ಬೆಂಗಳೂರು: ಚಂಡಮಾರುತದ ಪರಿಣಾಮ ಬೆಂಗಳೂರಿನಲ್ಲಿ ರಾತ್ರಿಯಿಂದ ಮಳೆಯಾಗುತ್ತಿದ್ದು ನಗರದಲ್ಲಿ ತಾಪಮಾನ ಕನಿಷ್ಠ ಮಟ್ಟಕ್ಕೆ ಕುಸಿದಿದೆ.

ಚಂಡಮಾರುತದ ಪರಿಣಾಮ ಬೆಂಗಳೂರಿನಲ್ಲಿ ರಾತ್ರಿಯಿಂದ ಮಳೆಯಾಗುತ್ತಿದ್ದು, ಬೆಂಗಳೂರು ಮಾತ್ರವಲ್ಲದೇ ಬೆಂಗಳೂರು ಸುತ್ತಮುತ್ತಲ ಜಿಲ್ಲೆಗಳಲ್ಲೂ ಮಳೆಯಾಗುತ್ತಿದೆ.

ಪರಿಣಾಮ ಬೆಂಗಳೂರಿನಲ್ಲಿ ತಾಪಮಾನ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಒಂದು ಕಡೆ ಮಳೆ ವಾತವರಣ ಇದ್ದರೆ, ಮತ್ತೊಂದೆಡೆ ಚಳಿ ವಾತವರಣ ರಾಜಧಾನಿ ಬೆಂಗಳೂರಿನ ಜನತೆ ನಡುಗುವಂತೆ ಮಾಡಿದೆ.

low temperature in Bengaluru
Cyclone Fengal: ತಮಿಳುನಾಡಿಗೆ ಅಪ್ಪಳಿಸಿದ ಫೆಂಗಲ್ ಚಂಡಮಾರುತ, 1 ಸಾವು, ಚೆನ್ನೈ ವಿಮಾನ ನಿಲ್ದಾಣ ಸ್ಥಗಿತ

ಹವಾಮಾನ ಇಲಾಖೆ ಮೂಲಗಳ ಪ್ರಕಾರ ಮುಂದಿನ ಮೂರು ದಿನ ನಗರದಲ್ಲಿ ಚಳಿ ಮುಂದುವರೆಯುವ ಸಾಧ್ಯತೆ ಇದೆ. ಪರಿಣಾಮ ಜನರು ಮುಂಜಾನೆ ಹಾಗೂ ಸಂಜೆ ವೇಳೆ ಚಳಿಯಿಂದ ರಕ್ಷಿಸಿಕೊಳ್ಳಲು ಬೆಚ್ಚನೆಯ ಉಡುಪುಗಳ ಮೊರೆ ಹೋಗುತ್ತಿದ್ದಾರೆ. ಮೋಡ ಕವಿದ ವಾತಾವರಣ, ತೇವಾಂಶಯುಕ್ತ ಗಾಳಿಯಿಂದಾಗಿ ದಿನವಿಡೀ ಚಳಿಯ ಅನುಭವವಾಗುತ್ತಿದೆ.

ಶನಿವಾರ ಇಡೀ ದಿನ ಮೋಡ ಕವಿದ ವಾತಾವರಣ ಇತ್ತು. ತಾಪಮಾನ ಕುಸಿದಿತ್ತು. ಗರಿಷ್ಠ ಉಷ್ಣಾಂಶ ಸಾಮಾನ್ಯಕ್ಕಿಂತ ಐದರಿಂದ ಆರು ಡಿಗ್ರಿ ಕುಸಿದಿದ್ದು, 22.6 ಡಿಗ್ರಿ ದಾಖಲಾಗಿತ್ತು ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಹವಾಮಾನ ಇಲಾಖೆಯ ಪ್ರಕಾರ, ಕಳೆದ ವಾರ ಸರಾಸರಿ ಗರಿಷ್ಠ ಉಷ್ಣಾಂಶ 27 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ಉಷ್ಣಾಂಶ 19 ಡಿಗ್ರಿ ಸೆಲ್ಸಿಯಸ್ ವರದಿಯಾಗಿದೆ.

low temperature in Bengaluru
Fengal cyclone: ಕರ್ನಾಟಕದಲ್ಲೂ ಚಂಡಮಾರುತ ಎಫೆಕ್ಟ್, ಬೆಂಗಳೂರು ಸೇರಿ ಹಲವೆಡೆ ಮಳೆ! ಹವಾಮಾನ ಇಲಾಖೆ ಎಚ್ಚರಿಕೆ

‘ಫೆಸಿಫಿಕ್ ಮಹಾಸಾಗರದಲ್ಲಿ ಮೇಲ್ಮೈ ಉಷ್ಣಾಂಶ ಕಡಿಮೆಯಾಗುವುದರಿಂದ ಹೆಚ್ಚಿನ ಚಳಿಯ ಅನುಭವವಾಗಲಿದೆ. ‘ಎಲ್-ನಿನೊ’ ಪರಿಸ್ಥಿತಿಯಿಂದಾಗಿ ಡಿಸೆಂಬರ್‌ ತಿಂಗಳಲ್ಲಿ ಅಧಿಕ ಚಳಿ ಇರಲಿದ್ದು, ಈ ಚಳಿಯ ಅನುಭವ ಜನವರಿಯಿಂದ ಮಾರ್ಚ್‌ವರೆಗೂ ಮುಂದುವರೆಯುವ ಸಾಧ್ಯತೆ ಇದೆ’ ಎಂದು ಹವಾಮಾನ ತಜ್ಞರು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com