Video: ಕಾರಿನ ರೂಫ್ ಮೇಲೆ ನಾಯಿಗಳ ಕೂರಿಸಿ 'ಹೇರ್ ಸ್ಟೈಲಿಸ್ಟ್' ಹುಚ್ಚು ಸಾಹಸ; ಬೆಂಗಳೂರು ಪೊಲೀಸರಿಂದ ತಕ್ಕಶಾಸ್ತಿ!

ಯಾವುದೇ ಸೇಫ್ಟಿ ಕ್ರಮವಿಲ್ಲದೇ ನಾಯಿಗಳನ್ನು ಕಾರಿನ ಟಾಪ್ ಮೇಲೆ ಕೂರಿಸಿ ಕಾರಿ(KA 03 MN 5011)ನೊಳಗೆ ಜೋರಾಗಿ ಮ್ಯೂಸಿಕ್ ಹಾಕಿಕೊಂಡು ಚಾಲಕ ಕಾರು ಚಲಾಯಿಸಿದ್ದಾನೆ. ಇದನ್ನು ಪ್ರಶ್ನಿಸಿದವರನ್ನೇ ಬಾಯಿಗೆ ಬಂದಂತೆ ನಿಂದಿಸಿದ್ದಾನೆ.
Bengaluru hairstylist Arrest
ಹೇರ್ ಸ್ಟೈಲಿಸ್ಟ್ ಹರೀಶ್ ಬಂಧನ
Updated on

ಬೆಂಗಳೂರು: ಕಾರು ಚಾಲಕನೋರ್ವ ಮೂರು ನಾಯಿಮರಿಗಳನ್ನು ಕಾರಿನ ರೂಫ್ ಮೇಲೆ ಕೂರಿಸಿ ಹೋಗುತ್ತಿದ್ದ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದ್ದು, ವಿಡಿಯೋ ವೈರಲ್ ಆಗುತ್ತಲೇ ಕಾರು ಚಾಲಕನಿಗೆ ಬೆಂಗಳೂರು ಪೊಲೀಸರು ತಕ್ಕಶಾಸ್ತಿ ಮಾಡಿದ್ದಾರೆ.

ಹೌದು.. ಯಾವುದೇ ಸೇಫ್ಟಿ ಕ್ರಮವಿಲ್ಲದೇ ನಾಯಿಗಳನ್ನು ಕಾರಿನ ಟಾಪ್ ಮೇಲೆ ಕೂರಿಸಿ ಕಾರಿ(KA 03 MN 5011)ನೊಳಗೆ ಜೋರಾಗಿ ಮ್ಯೂಸಿಕ್ ಹಾಕಿಕೊಂಡು ಚಾಲಕ ಕಾರು ಚಲಾಯಿಸಿದ್ದಾನೆ. ಇದನ್ನು ಪ್ರಶ್ನಿಸಿದವರನ್ನೇ ಬಾಯಿಗೆ ಬಂದಂತೆ ನಿಂದಿಸಿದ್ದಾನೆ. ಆರೋಪಿ ಚಾಲಕ ಯಾವುದೇ ಸುರಕ್ಷತೆ ಇಲ್ಲದೆ ನಾಯಿಗಳನ್ನು ಟಾಪ್ ಮೇಲೆ ಕೂರಿಸಿದ್ದ ವಾಹನದಟ್ಟಣೆಯ ರಸ್ತೆಯಲ್ಲಿ ಕಾರು ಚಾಲನೆ ಮಾಡಿದ್ದ. ಮೂರು ನಾಯಿಗಳನ್ನು ಕೂರಿಸಿಕೊಂಡು ಅಡ್ಡಾದಿಡ್ಡಿಯಾಗಿ ಕಾರು ಚಾಲನೆ ಮಾಡಿದ್ದನ್ನು ಕೇಳಲು ಹೋದವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಆರೋಪಿ ಚಾಲಕನನ್ನು 36 ವರ್ಷದ ಹರೀಶ್ ಎಂದು ಗುರುತಿಸಲಾಗಿದ್ದು, ಕಲ್ಯಾಣ ನಗರ ಸಮೀಪ ಈ ರೀತಿ ನಾಯಿಗಳನ್ನು ಕೂರಿಸಿಕೊಂಡು ಅಡ್ಡಾದಿಡ್ಡಿಯಾಗಿ ಕಾರ್ ಚಾಲನೆ ಮಾಡಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಘಟನೆಯ ಬಗ್ಗೆ ಪ್ರಾಣಿ ಪ್ರಿಯರು ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ ಆಗ ಆರೋಪಿ ಹರೀಶ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ.

Bengaluru hairstylist Arrest
ಕಚೇರಿಗೆ ನುಗ್ಗಿ ಅಶಿಸ್ತಿನ ವರ್ತನೆ: ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸುವಂತೆ ವಿಶೇಷ ಆಯುಕ್ತರಿಗೆ ಡಿಸಿಎಫ್ ಪತ್ರ

ಪೊಲೀಸರಿಂದ ತಕ್ಕಶಾಸ್ತಿ!

ಕಲ್ಯಾಣನಗರ ಸಮೀಪ ಅಡ್ಡಾದಿಡ್ಡಿಯಾಗಿ ಕಾರು ಚಾಲನೆ ಮಾಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದನ್ನು ಗಮನಿಸಿದ ಪ್ರಾಣಿ ಪ್ರಿಯರು ಆತನ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಪೊಲೀಸರಿಗೆ ಆಗ್ರಹಿಸಿದ್ದರು. ಕೊನೆಗೆ ಈ ವಿಚಾರ ಬಾಣಸವಾಡಿ ಪೊಲೀಸರ ಗಮನಕ್ಕೆ ಬಂದಿದ್ದು, ಕೂಡಲೇ ಎಚ್ಚೆತ್ತ ಪೊಲೀಸರು ಹಿರಿಯ ಅಧಿಕಾರಿಗಳ ಸೂಚನೆಯಂತೆ 36 ವರ್ಷದ ಆರೋಪಿ ಹರೀಶ್​ನನ್ನು ಬಂಧಿಸಿದ್ದಾರೆ.

ಪ್ರಸ್ತುತ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಹರೀಶ್ ವಿರುದ್ಧ ಪ್ರಾಣಿಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಮತ್ತು ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್ 351 (2) (ಅಪರಾಧ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಕಾರಿನ ಮೇಲೆ PRESS ಸ್ಕಿಕ್ಕರ್, ಆದರೆ ಈತ ಹೇರ್ ಸ್ಟೈಲಿಸ್ಟ್

ಇನ್ನು ಹರೀಶ್ ತನ್ನ ಕಾರಿನ ಮೇಲೆ ‘ಹರಿ ಲೈಕ್ಸ್ ರಿಸ್ಕ್’ ಎಂಬ ಟ್ಯಾಗ್‌ಲೈನ್‌ನೊಂದಿಗೆ ನಕಲಿ ‘ಪ್ರೆಸ್’ ಸ್ಟಿಕ್ಕರ್ ಅನ್ನು ಹೊಂದಿದ್ದ. ಆದರೆ ಪೊಲೀಸರ ವಿಚಾರಣೆ ವೇಳೆ ತಾನು ಹೇರ್ ಸ್ಟೈಲಿಸ್ಟ್ ಎಂದು ಬಾಯಿ ಬಿಟ್ಟಿದ್ದಾರೆ. ಇನ್ನು ಪ್ರೆಸ್ ಸ್ಟಿಕ್ಕರ್ ಬಗ್ಗೆ ವಿಚಾರಿಸಿದಾಗ ತಾನು ಮೊದಲು ಪ್ರೆಸ್ ನಲ್ಲಿ ಕೆಲಸ ಮಾಡುತ್ತಿದ್ದೆ. ಹೀಗಾಗಿ ಕಾರಿನ ಮೇಲೆ ಈ ಸ್ಟಿಕ್ಕರ್ ಹಾಕಿದ್ದೆ. ಬಳಿಕ ಆ ಕೆಲಸ ತೊರೆದು ಸಲೂನ್ ನಲ್ಲಿ ಹೇರ್ ಸ್ಟೈಲಿಸ್ಟ್ ಆಗಿ ಕೆಲಸ ಮಾಡುತ್ತಿದ್ದೆ. ಆದರೆ ಈಗ ನಿರುದ್ಯೋಗಿಯಾಗಿದ್ದೇನೆ ಎಂದು ಹೇಳಿಕೊಂಡಿದ್ದಾನೆ.

ಆದರೆ ಆತ ಟ್ರಾಫಿಕ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಹೀಗೆ ಕಾರಿನ ಮೇಲೆ PRESS ಸ್ಟಿಕ್ಕರ್ ಹಾಕಿದ್ದ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಪೊಲೀಸ್ ಬಂಧನ ತಪ್ಪಿಸಿಕೊಳ್ಳಲು ತಲೆ ಬೋಳಿಸಿಕೊಂಡ ಭೂಪ?

ಇನ್ನು ತನ್ನ ಕೃತ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಲೇ ತನ್ನನ್ನು ಪೊಲೀಸರು ಬಂಧಿಸುತ್ತಾರೆ ಎಂಬ ಭೀತಿಯಿಂದ ತಲೆ ಬೋಳಿಸಿಕೊಂಡಿದ್ದ. ಆದರೆ ಆತನ ಕಾರು ನಂಬರ್ ಮೂಲಕ ಪೊಲೀಸರು ಆತನ ಮನೆ ಪತ್ತೆ ಮಾಡಿ ಬಂಧಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com