ಬಾಬುಸಾಪಾಳ್ಯ ಕಟ್ಟಡ ಕುಸಿತ ಘಟನೆ ಬಳಿಕ ಎಚ್ಚೆತ್ತ BBMP: ಚಿಕ್ಕಪೇಟೆಯಲ್ಲಿ 29 ಕಟ್ಟಡಗಳ ಕೆಡವಲು ಮುಂದು!

ಅಕ್ರಮ ಕಟ್ಟಡ ನಿರ್ಮಾಣ ಮತ್ತು ಅನಧಿಕೃತ ಕಟ್ಟಡಗಳ ಮಾಲೀಕರ ವಿರುದ್ಧ ಕಡಿವಾಣ ಹಾಕುವಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ದಕ್ಷಿಣ ವಲಯ ಆಯುಕ್ತರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
Properties at Sai Serenity Layout listed for demolition by BBMP for violations
ಬಿಬಿಎಂಪಿ ತೆರವು ಕಾರ್ಯಾಚರಣೆ ಪಟ್ಟಿಗೆ ಸೇರಿರುವ ಸಾಯಿ ಸೆರಿನಿಟಿ ಲೇಔಟ್‌ನಲ್ಲಿರುವ ಕಟ್ಟಡ
Updated on

ಬೆಂಗಳೂರು: ಹೆಣ್ಣೂರಿನ ಬಾಬುಸಾಪಾಳ್ಯದಲ್ಲಿ 6 ಅಂತಸ್ತಿನ ಕಟ್ಟಡ ಕುಸಿದು ಒಂಬತ್ತು ಮಂದಿ ಕಾರ್ಮಿಕರು ಸಾವನ್ನಪ್ಪಿದ ಘಟನೆ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಬಿಬಿಎಂಪಿ, ನಗರದಲ್ಲಿರುವ ಅನಧಿಕೃತ ಹಾಗೂ ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳ ತೆರವು ಕಾರ್ಯಾಚರಣೆಯನ್ನು ಚುರುಕುಗೊಳಿಸಿದೆ.

ಅಕ್ರಮ ಕಟ್ಟಡ ನಿರ್ಮಾಣ ಮತ್ತು ಅನಧಿಕೃತ ಕಟ್ಟಡಗಳ ಮಾಲೀಕರ ವಿರುದ್ಧ ಕಡಿವಾಣ ಹಾಕುವಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ದಕ್ಷಿಣ ವಲಯ ಆಯುಕ್ತರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಆಯುಕ್ತರ ಸೂಚನೆ ಬೆನ್ನಲ್ಲೇ ಚಿಕ್ಕಪೇಟೆಯಲ್ಲಿ 29 ಕಟ್ಟಡಗಳನ್ನು ಕೆಡವಲು ಅಧಿಕಾರಿಗಳು ಮುಂದಾಗಿದ್ದಾರೆ.

ವಾರ್ಡ್ ಸಂಖ್ಯೆ 163 (ವಿವಿ ಪುರಂ), 164 (ವಿದ್ಯಾ ಪೀಠ) ಮತ್ತು 165 (ಹೊಂಬೇಗೌಡ ನಗರ) ವಾರ್ಡ್ ನಲ್ಲಿ ಒಟ್ಟು 29 ಅನಧಿಕೃತ ಕಟ್ಟಡಗಳಿದ್ದು, ಈ ಕಟ್ಟಡಗಳನ್ನು ತೆರವುಗೊಳಿಸಲಾಗುತ್ತದೆ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದ್ದಾರೆ.

ಕ್ಷೇತ್ರದ ಸಹಾಯಕ ಅಭಿಯಂತರರು ಮತ್ತು ಸಹಾಯಕ ಕಾರ್ಯಪಾಲಕ ಅಭಿಯಂತರರು ಇದೀಗ ನಗರ ಯೋಜನಾ ಇಲಾಖೆಯೊಂದಿಗೆ ಸ್ಥಳಕ್ಕೆ ಭೇಟಿ ನೀಡುತ್ತಿದ್ದು, ಕಟ್ಟಡಗಳ ಅಳತೆಗಳನ್ನು ದಾಖಲು ಮಾಡಿಕೊಂಡು ನೋಟಿಸ್ ಜಾರಿಗೊಳಿಸಲು ಸಿದ್ಧತೆ ನಡೆಸಿದ್ದಾರೆಂದು ತಿಳಿದುಬಂದಿದೆ.

Properties at Sai Serenity Layout listed for demolition by BBMP for violations
ನಗರದಲ್ಲಿ 200 ಅನಧಿಕೃತ ಕಟ್ಟಡ ಪತ್ತೆ, ಮಹದೇವಪುರದಲ್ಲೇ ಅತಿ ಹೆಚ್ಚು: BBMP

ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಈವರೆಗೆ 65 ಕಟ್ಟಡಗಳು ಪತ್ತೆಯಾಗಿವೆ. ಅನಧಿಕೃತ ಮಹಡಿಗಳನ್ನು ಸೇರಿಸಿ ಮತ್ತು ಅನುಮೋದನೆಯಿಲ್ಲದೆ ನಿರ್ಮಾಣ ಮಾಡಿರುವುದು ಪತ್ತೆಯಾಗಿದೆ. 29 ಕಟ್ಟಡಗಳ ಕೆಲವರು ಪಟ್ಟಿಯನ್ನೂ ಸಿದ್ಧಪಡಿಸಲಾಗಿದೆ ಎಂದು ಹಿರಿಯ ಎಂಜಿನಿಯರೊಬ್ಬರು ಹೇಳಿದ್ದಾರೆ.

ಕೆಲ ಮಾಲೀಕರು ಉನ್ನತಾಧಿಕಾರಿಗಳ ಪ್ರಭಾವ ಬಳಸಿಕೊಂಡು ನೋಟಿಸ್ ಬಾರದಂತೆ ಮಾಡಲು ಪ್ರಯತ್ನ ನಡೆಸುತ್ತಿದ್ದಾರೆ. ಆದರೆ, ಮುಖ್ಯ ಆಯುಕ್ತರು ಕಠಿಣ ಸೂಚನೆ ನೀಡಿದ್ದಾರೆ. ಬಾಬುಸಪಾಳ್ಯ ಘಟನೆಯ ತನಿಖೆ ನಡೆಸುತ್ತಿರುವ ಲೋಕಾಯುಕ್ತರಿಂದ ಸ್ಪಷ್ಟ ನಿರ್ದೇಶನ ಇರುವುದರಿಂದ ಮತ್ತು ಲೋಕಾಯುಕ್ತ ಕಣ್ಗಾವಲಿರಿಸಿರುವ ಹಿನ್ನೆಲೆಯಲ್ಲಿ ಅನೇಕ ಅಧಿಕಾರಿಗಳಿಗೆ ಒತ್ತಡಕ್ಕೆ ಮಣಿಯದಂತೆ ಸೂಚನೆ ನೀಡಿದ್ದಾರೆಂದು ತಿಳಿಸಿದ್ದಾರೆ.

ಮೇಲ್ನೋಟಕ್ಕಷ್ಟೇ ನಿಯಮ ಉಲ್ಲಂಘಿಸುವವರಿಗೆ ನೋಟಿಸ್ ಜಾರಿ ಮಾಡವಲಾಗುತ್ತಿದೆ. ಕ್ಷೇತ್ರದಲ್ಲಿ ಈ ವರೆಗೂ ಅಂತಹ ಯಾವುದೇ ಕಟ್ಟಡಗಳನ್ನೂ ನೆಲಸಮಗೊಳಿಸಲಾಗಿಲ್ಲ. ಬಿಬಿಎಂಪಿಗೆ ಬೆಂಗಳೂರಿಗೆ ದೊಡ್ಡ ಶತ್ರು ಎಂದು ಹೈಕೋರ್ಟ್ ಕೂಡ ಹೇಳಿದೆ. ನ್ಯಾಯಾಲಯ ಮತ್ತು ಲೋಕಾಯುಕ್ತರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ, ಬಿಬಿಎಂಪಿ ಮುಖ್ಯ ಆಯುಕ್ತರನ್ನು ತರಾಟೆಗೆ ತೆಗೆದುಕೊಂಡಾಗ ಮತ್ತು ತನಿಖಾ ಸಂಸ್ಥೆಗಳು ಇಂಜಿನಿಯರ್‌ಗಳು ಮತ್ತು ಟೌನ್ ಪ್ಲಾನಿಂಗ್ ಅಧಿಕಾರಿಗಳ ವಿರುದ್ಧ ದೋಷಾರೋಪ ಪಟ್ಟಿಯೊಂದಿಗೆ ವರದಿಯನ್ನು ಹೊರತಂದಾಗ ಮಾತ್ರ ಬೆಂಗಳೂರಿನಾದ್ಯಂತ ಅಕ್ರಮ ಕಟ್ಟಡಗಳ ವಿರುದ್ಧ ಕ್ರಮಗಳನ್ನು ಕೈಗೊಳ್ಳುವ ಭರವಸೆ ಇರುತತದೆ ಎಂದು ಸ್ಥಳೀಯ ನಿವಾಸಿಯೊಬ್ಬರು ಹೇಳಿದ್ದಾರೆ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com