ಹಿನ್ನೋಟ 2024: ಈ ವರ್ಷ ವಿಚ್ಛೇದನ, ಪಡೆದು ಒಂಟಿಯಾದ ತಾರೆಯರಿವರು

ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

2024ರಲ್ಲಿ ಅನೇಕ ತಾರೆಯರು ವಿವಾಹ ಬಂಧನಕ್ಕೆ ಒಳಗಾದರು. ಆದರೆ, ಕೆಲವು ಸೆಲೆಬ್ರಿಟಿಗಳು ತಮ್ಮ ದಾಂಪತ್ಯ ಜೀವನವನ್ನ ಕೊನೆಗೊಳಿಸಿದರು. ಈ ವರ್ಷ ವಿಚ್ಛೇದನ ಪಡೆದು ಒಂಟಿಯಾದ ತಾರೆಯರ ಪಟ್ಟಿ ಇಲ್ಲಿದೆ ನೋಡಿ…

1. ಚಂದನ್ ಶೆಟ್ಟಿ-ನಿವೇದಿತಾ ಗೌಡ

ಕನ್ನಡ ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ಹಾಗೂ ನಟಿ ನಿವೇದಿತಾ ಗೌಡ ನಾಲ್ಕು ವರ್ಷದ ದಾಂಪತ್ಯ ಜೀವನಕ್ಕೆ ಈ ವರ್ಷ ಅಂತ್ಯ ಹಾಡಿದ್ದಾರೆ. ಪರಸ್ಪರ ಒಪ್ಪಿಗೆ ಮೇರೆಗೆ ಈ ಜೋಡಿ ವಿಚ್ಛೇದನ ಪಡೆದಿದ್ದಾರೆ. ಪರಸ್ಪರ ಪ್ರೀತಿಸಿ ಮದುವೆಯಾದ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಶಾಂತಿನಗರದ ಫ್ಯಾಮಿಲಿ ಕೋರ್ಟ್‌ನಲ್ಲಿ ವಿಚ್ಛೇದನ ಪಡೆದುಕೊಂಡರು.

2. ಯುವ ರಾಜ್‌ಕುಮಾರ್‌- ಶ್ರೀದೇವಿ ಭೈರಪ್ಪ

'ಯುವ' ಸಿನಿಮಾ ಮೂಲಕ ಸ್ಯಾಂಡಲ್ ವುಡ್'ಗೆ ಪಾದಾರ್ಪಣೆ ಮಾಡಿರುವ ದೊಡ್ಮನೆ ಕುಡಿ ನಟ ಯುವ ರಾಜಕುಮಾರ್ ದಾಂಪತ್ಯದಲ್ಲಿ ಈ ವರ್ಷ ಬಿರುಕು ಮೂಡಿತ್ತು. ಪ್ರೀತಿಸಿ ಮದುವೆಯಾದ ಯುವ ರಾಜಕುಮಾರ್ ಹಾಗೂ ಶ್ರೀದೇವಿ ಭೈರಪ್ಪ 5 ವರ್ಷದ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಲು ಮುಂದಾಗಿದ್ದು, ವಿಚ್ಛೇದನಕ್ಕೆ ಅರ್ಜಿ ಸಲ್ಲಿಕೆಯಾಗಿದೆ. ವಿಚ್ಛೇದನಕ್ಕೆ ಕೋರಿ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿದ್ದು, ಕೆಲವೊಂದು ವಿಚಾರಗಳಿಂದ ಈ ಜೋಡಿಗೆ ಈವರೆಗೂ ವಿಚ್ಛೇದನ ಸಿಕ್ಕಿಲ್ಲ. ಸದ್ಯ ಪ್ರಕರಣ ಕೋರ್ಟ್‌ ಅಂಗಳದಲ್ಲಿದೆ.

3. ಐಶ್ವರ್ಯಾ ರಜನಿಕಾಂತ್-ಧನುಷ್

ಕಾಲಿವುಡ್ ಸೂಪರ್ ಸ್ಟಾರ್ ರಜನಿಕಾಂತ್ ಅವರ ಪುತ್ರಿ ಐಶ್ವರ್ಯ ಮತ್ತು ನಟ ಧನುಷ್ ಇಬ್ಬರೂ ಬೇರೆಯಾಗಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಅಧಿಕೃತವಾಗಿ ಘೋಷಿಸಿದ್ದರು. ಐಶ್ವರ್ಯಾ ಮತ್ತು ಧನುಷ್ 2004 ರಲ್ಲಿ ವಿವಾಹವಾಗಿದ್ದರು.

4. ಎ.ಆರ್. ರೆಹಮಾನ್-ಸಾಯಿರಾ ಬಾನು

ಸಂಗೀತ ಮಾಂತ್ರಿಕ ಎ.ಆರ್. ರೆಹಮಾನ್ ಹಾಗೂ ಸಾಯಿರಾ ಬಾನುಅವರು ತಮ್ಮ 29 ವರ್ಷಗಳ ದಾಂಪತ್ಯದ ಜೀವನಕ್ಕೆ ಅಂತ್ಯ ಹಾಡಿದ್ದಾರೆ. ಗಾಯಕ ಸ್ವತಃ ಸಾಮಾಜಿಕ ಮಾಧ್ಯಮದಲ್ಲಿ ತನ್ನ ಸಂಬಂಧದ ಅಂತ್ಯದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದರು.

5. ಸಾನಿಯಾ ಮಿರ್ಜಾ-ಶೋಯೆಬ್ ಮಲಿಕ್

ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಮತ್ತು ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಮಲಿಕ್ ಈ ವರ್ಷದ ಆರಂಭದಲ್ಲಿ ವಿಚ್ಛೇದನ ಪಡೆದಿದ್ದರು. ವಿಚ್ಛೇದನದ ನಂತರ, ಶೋಯೆಬ್ ಪಾಕಿಸ್ತಾನಿ ನಟಿ ಸನಾ ಜಾವೇದ್ ಅವರನ್ನು ವಿವಾಹವಾಗಿದ್ದಾರೆ.

6. ಹಾರ್ದಿಕ್ ಪಾಂಡ್ಯ-ನತಾಶಾ ಸ್ಟಾಂಕೋವಿಕ್

ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಸ್ಟಾಂಕೋವಿಕ್ ವರ್ಷದ ಆರಂಭದಿಂದಲೇ ಇವರಿಬ್ಬರ ಸಂಬಂಧದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿಗಳು ಹರಿದಾಡತೊಡಗಿದವು. ನಂತರ ಇಬ್ಬರೂ ತಮ್ಮ ವಿಚ್ಛೇದನದ ಅಧಿಕೃತವಾಗಿ ಮಾಹಿತಿ ಹಂಚಿಕೊಂಡರು.

7. ಇಶಾ ಡಿಯೋಲ್-ಭರತ್ ತಖ್ತಾನಿ

ಹೇಮಾ ಮಾಲಿನಿ ಅವರ ಪುತ್ರಿ ಇಶಾ ಡಿಯೋಲ್ ಮತ್ತು ಭರತ್ ತಖ್ತಾನಿ ಕೂಡ ಈ ವರ್ಷ ವಿಚ್ಛೇದನ ಪಡೆದರು. ಜೋಡಿಗಳು 11 ವರ್ಷಗಳ ತಮ್ಮ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದರು.

8. ಇಶಾ ಕೊಪ್ಪಿಕರ್-ಟಿಮ್ಮಿ ನಾರಂಗ್

ನಟಿ ಇಶಾ ಕೊಪ್ಪಿಕರ್ ಮತ್ತು ಟಿಮ್ಮಿ ನಾರಂಗ್ ಅವರು 2024 ರ ಆರಂಭದಲ್ಲಿ ವಿಚ್ಛೇದನ ಪಡೆಯಲು ನಿರ್ಧರಿಸಿದರು. 14 ವರ್ಷಗಳ ಹಿಂದೆ ವಿವಾಹವಾಗಿದ್ದ ದಂಪತಿಗಳು ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿ ಪರಸ್ಪರ ದೂರವಾಗಲು ನಿರ್ಧರಿಸಿದ್ದಾರೆ.

9. ಮಲೈಕಾ ಅರೋರಾ-ಅರ್ಜುನ್ ಕಪೂರ್

ಮಲೈಕಾ ಹಾಗೂ ಅರ್ಜುನ ಕಪೂರ್ ಅವರ ಬ್ರೇಕಪ್ ಕೂಡ ಈ ವರ್ಷ ಸುದ್ದಿಯಲ್ಲಿತ್ತು. ಮಲೈಕಾ ಅರೋರಾ ಮತ್ತು ಅರ್ಜುನ್ ಕಪೂರ್ ಈ ಪಟ್ಟಿಯಲ್ಲಿ ಸೇರಿದ್ದಾರೆ. ಬಹಳ ದಿನಗಳಿಂದ ಡೇಟಿಂಗ್ ಮಾಡಿದ ಇಬ್ಬರೂ ಈ ವರ್ಷ ದೂರಾಗಿದ್ದಾರೆ.

10. ಜಯಂ ರವಿ-ಆರತಿ

ತಮಿಳು ಸಿನಿಮಾರಂಗದ ಖ್ಯಾತ ನಟ ಜಯಂ ರವಿ ಹಾಗೂ ಅವರ ಪತ್ನಿ ಆರತಿ ಇತ್ತೀಚೆಗಷ್ಟೇ ಬೇರೆಯಾಗಿದ್ದಾರೆ. ಈ ದಂಪತಿಗೆ ಇಬ್ಬರು ಮಕ್ಕಳಿದ್ದು, ತಮ್ಮ 15 ವರ್ಷದ ದಾಂಪತ್ಯಕ್ಕೆ ಕೊನೆ ಹಾಡಿದ್ದಾರೆ.

11. ದಲ್ಜೀತ್ ಕೌರ್-ನಿಖಿಲ್ ಪಟೇಲ್

ಕಿರುತೆರೆ ತಾರೆ ದಲ್ಜಿತ್ ಕೌರ್ ಮತ್ತು ಉದ್ಯಮಿ ನಿಖಿಲ್ ಪಟೇಲ್ ಕೂಡಾ ಈ ವರ್ಷ ತಮ್ಮ ದಾಂಪತ್ಯ ಜೀವನ ಕೊನೆಗೊಳಿಸಿದ್ದಾರೆ. ಮದುವೆಯಾದ ಕೇವಲ 10 ತಿಂಗಳ ನಂತರ, ಪರಸ್ಪರ ಭಿನ್ನಾಭಿಪ್ರಾಯಗಳನ್ನು ಉಲ್ಲೇಖಿಸಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು.

12. ಊರ್ಮಿಳಾ ಮಾತೋಂಡ್ಕರ್–ಮೊಹ್ಸಿನ್ ಅಖ್ತರ್ ಮಿರ್‌

ಬಾಲಿವುಡ್‌ ನಟಿ ಊರ್ಮಿಳಾ ಮಾತೋಂಡ್ಕರ್ ಮದುವೆಯಾದ 8 ವರ್ಷಗಳ ಬಳಿಕ ಪತಿ ಮೊಹ್ಸಿನ್ ಅಖ್ತರ್ ಮಿರ್‌ ಅವರಿಂದ ವಿಚ್ಛೇದನ ಪಡೆದಿದ್ದಾರೆ. ತನಗಿಂತ 10 ವರ್ಷ ಕಿರಿಯರಾಗಿರುವ ಕಾಶ್ಮೀರ ಮೂಲದ ನಟ ಮೊಹ್ಸಿನ್ ಅವರೊಂದಿಗೆ 2016 ಮಾರ್ಚ್ 3 ರಂದು ಊರ್ಮಿಳಾ ಪ್ರೀತಿಯಲ್ಲಿ ಬಿದ್ದು ಮದುವೆಯಾಗಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com