ಹಳದಿ ಮಾರ್ಗದ ಮೆಟ್ರೋ ಕಾಮಗಾರಿ ಆಮೆಗತಿಯಲ್ಲಿ: ಸಂಸದ ತೇಜಸ್ವಿ ಸೂರ್ಯ ಅಸಮಾಧಾನ

ಆರ್‌ವಿ ರಸ್ತೆ-ಬೊಮ್ಮಸಂದ್ರ (ಹಳದಿ ಮಾರ್ಗ) ನಡುವಿನ ಮೆಟ್ರೋ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು, ಈ ಬೆಳವಣಿಗೆಗೆ ಸಂಸದ ತೇಜಸ್ವಿ ಸೂರ್ಯ ಸೋಮವಾರ ಅಸಮಾಧಾನ ಹೊರಹಾಕಿದ್ದಾರೆ.
ಸಂಸದ ತೇಜಸ್ವಿ ಸೂರ್ಯ.
ಸಂಸದ ತೇಜಸ್ವಿ ಸೂರ್ಯ.

ಬೆಂಗಳೂರು: ಆರ್‌ವಿ ರಸ್ತೆ-ಬೊಮ್ಮಸಂದ್ರ (ಹಳದಿ ಮಾರ್ಗ) ನಡುವಿನ ಮೆಟ್ರೋ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು, ಈ ಬೆಳವಣಿಗೆಗೆ ಸಂಸದ ತೇಜಸ್ವಿ ಸೂರ್ಯ ಸೋಮವಾರ ಅಸಮಾಧಾನ ಹೊರಹಾಕಿದ್ದಾರೆ.

ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ನ ಉನ್ನತ ಅಧಿಕಾರಿಗಳನ್ನು ಭೇಟಿ ಮಾಡಿದ ಅವರು, ಯೋಜನೆ ಕುರಿತ ಮಾಹಿತಿಯನ್ನು ಸಾರ್ವಜನಿಕಗೊಳಿಸುವಂತೆ ಅಧಿಕಾರಿಗಳನ್ನು ಒತ್ತಾಯಿಸಿದರು.

ಈ ಕುರಿತು ಟ್ವೀಟ್ ಮಾಡಿರುವ ಅವರು, ನಮ್ಮ ಮೆಟ್ರೋದ ಹಳದಿ ಮಾರ್ಗ 19 ಕಿಮೀ ಇದ್ದು, ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರವರೆಗೂ ಸಂಪರ್ಕ ಕಲ್ಪಿಸುತ್ತದೆ. ಪ್ರಮುಖವಾಗಿ ಮಾರ್ಗದಲ್ಲಿ ಜಯದೇವ ಆಸ್ಪತ್ರೆ, ಸಿಲ್ಕ್ ಬೋರ್ಡ್ ಜಂಕ್ಷನ್ ಮತ್ತು ಎಲೆಕ್ಟ್ರಾನಿಕ್ಸ್ ಸಿಟಿ ನಿಲ್ದಾಣಗಳು ಬರಲಿವೆ.

ನಮ್ಮ ಮೆಟ್ರೋ 3ನೇ ಹಂತದ ಅನುಮೋದನೆಯು ಕೇಂದ್ರ ಸರ್ಕಾರದೊಂದಿಗೆ ಚರ್ಚೆ ಮುಂದುವರಿದ ಹಂತಗಳಲ್ಲಿದೆ, ನಾವು ಅದನ್ನು ತ್ವರಿತಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ಇನ್ನು ಪ್ರತಿ ಸಂಸ್ಥೆಯು ಮೀಸಲಾದ ಸಮಯದ ಚೌಕಟ್ಟಿನೊಳಗೆ ನಿಗದಿತ ಗುರಿಗಳನ್ನು ಸಾಧಿಸಲು ಅತ್ಯುತ್ತಮ ಪ್ರಯತ್ನಗಳೊಂದಿಗೆ ಕೆಲಸ ಮಾಡುತ್ತದೆ. ಆದರೆ, ಬಿಎಂಆರ್‌ಸಿಎಲ್‌ಗೆ ತಮ್ಮ ಸ್ವಂತ ಭರವಸೆಗಳನ್ನು ಈಡೇರಿಸಲು ಸಾಧ್ಯವಾಗಿಲ್ಲ. ಇದು ಸಾರ್ವಜನಿಕರಲ್ಲಿ ವ್ಯಾಪಕ ಅಸಮಾಧಾನಕ್ಕೆ ಕಾರಣವಾಗಿದೆ. ಪ್ರಮುಖವಾಗಿ ನಮ್ಮ ಮೆಟ್ರೋ ಹಳದಿ ಮಾರ್ಗ ಈ ಮಾರ್ಗ ವಿಳಂಬವಾಗುತ್ತಿದ್ದು, ಬಿಎಂಆರ್‌ಸಿಎಲ್‌ ಎಂಡಿ ಬಳಿ ಮಾತನಾಡಿ ಶೀಘ್ರ ಆರಂಭಕ್ಕೆ ಮನವರಿಕೆ ಮಾಡಿದ್ದೇನೆಂದು ಹೇಳಿದ್ದಾರೆ.

ನಮ್ಮ ಮನವಿಗೆ ಸ್ಪಂದಿಸಿದ ಮೆಟ್ರೋ ಎಂಡಿ, ಭಾರತಕ್ಕೆ ಆಗಮಿಸಿದ ಸಿಆರ್‌ಆರ್‌ಸಿಯ ತರಬೇತುದಾರರೊಂದಿಗೆ ಟೆಸ್ಟ್ ರನ್‌ಗಳನ್ನು ಶೀಘ್ರದಲ್ಲೇ ನಡೆಸುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

ಬಿಎಂಆರ್‌ಸಿಎಲ್‌ನಂತಹ ಸಂಸ್ಥೆಯ ಕಾಮಗಾರಿಗಳು, ಹೊಸ ಕ್ರಮಗಳು ಇಲ್ಲಿನ ಜನ ಜೀವನದ ಭಾಗವಾಗಿವೆ. ಅವುಗಳ ನಿರಂತರ ಮಾಹಿತಿ ಜನರಿಗೆ ಅವಶ್ಯಕವಿದೆ. ಹೀಗಾಗಿ, ಅಪ್‌ಡೇಟ್ ಮಾಹಿತಿ ನೀಡುವ ಹಾಗೂ ಸಾರ್ವಜನಿಕ ಅಭಿಪ್ರಾಯಗಳನ್ನು ಅಧಿಕಾರಿಗಳಿಗೆ ತಿಳಿಸುವ ವೇದಿಕೆಯಾಗಿ ರೋಡ್‌ ಮ್ಯಾಪ್‌ ಚಾರ್ಟ್‌ಗೆ ಕ್ರಮಕೈಗೊಳ್ಳಿ ಎಂದು ಮನವಿ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com