ಅಕ್ರಮ ಆಸ್ತಿ ಗಳಿಕೆ ಪ್ರಕರಣ: ಸಿಬಿಐಗೆ ವಹಿಸಿದ ಬಿಎಸ್'ವೈ ಸರ್ಕಾರದ ನಿರ್ಧಾರ ತಪ್ಪು; ಡಿಕೆ.ಶಿವಕುಮಾರ್

ನಾನು ಯಾವುದೇ ತಪ್ಪು ಮಾಡಿಲ್ಲ.‌ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಿದ್ದಾ ತಪ್ಪು ಎಂದು ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಮಂಗಳವಾರ ಹೇಳಿದರು.
ಡಿಕೆ.ಶಿವಕುಮಾರ್
ಡಿಕೆ.ಶಿವಕುಮಾರ್

ಬೆಂಗಳೂರು: ನಾನು ಯಾವುದೇ ತಪ್ಪು ಮಾಡಿಲ್ಲ.‌ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಿದ್ದಾ ತಪ್ಪು ಎಂದು ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಮಂಗಳವಾರ ಹೇಳಿದರು.

ಲೋಕಾಯುಕ್ತ ಪೊಲೀಸರು ಎಫ್‌ಐಆರ್‌ ದಾಖಲಿಸಿರುವ ಬಗ್ಗೆ ವಿಧಾನಸೌಧದಲ್ಲಿ ಮಾತನಾಡಿದ ಅವರು, ಸಿಬಿಐನವರು ನನ್ನ ಸಂಸ್ಥೆಗಳಿಗೆ, ಸ್ನೇಹಿತರಿಗೆ ಎಲ್ಲೆಲ್ಲಿ ವ್ಯವಹಾರ ಮಾಡಿದ್ದೇನೋ ಅಲ್ಲೆಲ್ಲಾ ನೂರಾರು ನೋಟಿಸ್ ಕೊಡುತ್ತಿದ್ದಾರೆ. ಸರ್ಕಾರ ವಾಪಸ್ ಪಡೆದ ನಂತರವೂ ನೋಟಿಸ್ ಕೊಡುತ್ತಿದ್ದಾರೆ ಯಾಕೆ ಕೊಡುತ್ತಿದ್ದಾರೋ ಗೊತ್ತಿಲ್ಲ. ಸರ್ಕಾರ ವಿಥ್‌ ಡ್ರಾ ಮಾಡಿದ ನಂತರ ಲೋಕಾಯುಕ್ತಕ್ಕೆ ಟ್ರಾನ್ಸ್ ಫರ್ ಮಾಡಿದ್ದರು. ಈಗ ಉದ್ದೇಶ ಏನೋ ಗೊತ್ತಿಲ್ಲ, ನಾನು ಕಾನೂನು ಹೋರಾಟ ಮುಂದುವರಿಸುತ್ತೇನೆ ಎಂದು ಹೇಳಿದರು.

ಅದು ತಪ್ಪು ಇದು ತಪ್ಪು ಎರಡೂ ತಪ್ಪೇ. ಯಡಿಯೂರಪ್ಪ ಸರ್ಕಾರ ಸಿಬಿಐ ಗೆ ಕೊಟ್ಟಿದ್ದೇ ತಪ್ಪು. ಅವತ್ತಿನ ಅಡ್ವೋಕೆಟ್ ಜನರಲ್ ಕೊಡಬೇಡಿ ಎಂದ ಮೇಲೂ ಕೊಟ್ಟಿದ್ದರು. ಅದರ ದಾಖಲೆಯನ್ನು ನಾನು ಮಾಹಿತಿ ಹಕ್ಕು ಮೂಲಕ ಪಡೆದಿದ್ದೇನೆ. ಈಗ ಲೋಕಾಯುಕ್ತ ಎಫ್ ಐಆರ್ ಮಾಡಿದ್ದಾರೆ ನೋಡೋಣ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com