ಬೆಂಗಳೂರು: ಪಶ್ಚಿಮ ಬಂಗಾಳದ ಇಬ್ಬರ ಮೇಲೆ ದಾಳಿ ನಡೆಸಿದ ಗ್ಯಾಂಗ್, ದರೋಡೆ ಮಾಡಿ ಪರಾರಿ

ಪಶ್ಚಿಮ ಬಂಗಾಳದ 22 ವರ್ಷದ ಕಾರ್ಮಿಕರ ಗುತ್ತಿಗೆದಾರ ಮತ್ತು ಅವರ ಸ್ನೇಹಿತನ ಮೇಲೆ ಇತ್ತೀಚೆಗೆ ವರ್ತೂರು ಪ್ರದೇಶದಲ್ಲಿ ಒಂಬತ್ತು ಅಪರಿಚಿತ ದುಷ್ಕರ್ಮಿಗಳ ತಂಡವು ದಾಳಿ ನಡೆಸಿದ್ದು, ದರೋಡೆ ಮಾಡಿದೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ಬೆಂಗಳೂರು: ಪಶ್ಚಿಮ ಬಂಗಾಳದ 22 ವರ್ಷದ ಕಾರ್ಮಿಕರ ಗುತ್ತಿಗೆದಾರ ಮತ್ತು ಅವರ ಸ್ನೇಹಿತನ ಮೇಲೆ ಇತ್ತೀಚೆಗೆ ವರ್ತೂರು ಪ್ರದೇಶದಲ್ಲಿ ಒಂಬತ್ತು ಅಪರಿಚಿತ ದುಷ್ಕರ್ಮಿಗಳ ತಂಡವು ದಾಳಿ ನಡೆಸಿದ್ದು, ದರೋಡೆ ಮಾಡಿದೆ.

ಸಂತ್ರಸ್ತರನ್ನು ಬುದ್ದದೇಬ್ ಸರ್ದಾರ್ (22) ಮತ್ತು ಅವರ ಸ್ನೇಹಿತ ಸುಜಿತ್ ಸರ್ದಾರ್ (20) ಎಂದು ಗುರುತಿಸಲಾಗಿದ್ದು, ಇಬ್ಬರೂ ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯವರು.

ಸಂತ್ರಸ್ತರು ರಾತ್ರಿ ಮನೆಗೆ ಮರಳುತ್ತಿದ್ದಾಗ ಹಿಂಬದಿಯಿಂದ ಮೂರು ದ್ವಿಚಕ್ರ ವಾಹನಗಳಲ್ಲಿ ಬಂದ ಆರೋಪಿಗಳು ಅವರನ್ನು ತಡೆದಿದ್ದಾರೆ. ಬಳಿಕ ಅವರನ್ನು ಸುತ್ತುವರೆದ ಗ್ಯಾಂಗ್, ಹಣಕ್ಕಾಗಿ ಬೇಡಿಕೆಯಿಟ್ಟಿದೆ. ಇಬ್ಬರೂ ನಿರಾಕರಿಸಿದಾಗ ಆರೋಪಿಗಳು ಆಯುಧಗಳಿಂದ ಹಲ್ಲೆ ನಡೆಸಿ, ಕೆಲ ದೂರ ರಸ್ತೆಯಲ್ಲಿ ಎಳೆದೊಯ್ದಿದ್ದಾರೆ. ಇಬ್ಬರ ಬಳಿಯಿದ್ದ ನಗದು ಹಾಗೂ ಮೊಬೈಲ್ ದೋಚಿ ಆರೋಪಿಗಳು ಪರಾರಿಯಾಗಿದ್ದಾರೆ. ಟಾರ್ ರಸ್ತೆಯಲ್ಲಿ ಎಳೆದೊಯ್ದಿದ್ದರಿಂದ ಸಂತ್ರಸ್ತರಿಗೆ ದೇಹದಾದ್ಯಂತ ಗಾಯಗಳಾಗಿವೆ. ಈ ಸಂಬಂಧ ವರ್ತೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಾತಿನಿಧಿಕ ಚಿತ್ರ
ಬೆಂಗಳೂರು: ಪೊಲೀಸರ ವೇಷದಲ್ಲಿ ಉದ್ಯಮಿಯೊಬ್ಬರ ಮನೆಯಿಂದ 1 ಕೋಟಿ ರೂ. ದರೋಡೆ ಮಾಡಿದ್ದ ಎಂಟು ಮಂದಿ ಬಂಧನ

ಬುದ್ದದೇಬ್ ಸರ್ದಾರ್ ಮತ್ತು ಸುಜಿತ್ ಎರಡು ತಿಂಗಳ ಹಿಂದೆ ಬೆಂಗಳೂರಿಗೆ ಬಂದು ಸಿದ್ದಾಪುರದಲ್ಲಿ ನೆಲೆಸಿದ್ದರು. ಸಂಜೆ 6.30 ರಿಂದ 6.45ರ ನಡುವೆ ತುಬರಹಳ್ಳಿಯ ವಿಬ್‌ಗಯಾರ್ ಶಾಲೆಯ ಬಳಿ ಈ ಘಟನೆ ನಡೆದಿದೆ. ದರೋಡೆಯನ್ನು ಕಂಡ ದಾರಿಹೋಕರು ಸಂತ್ರಸ್ತರಿಗೆ ಸಹಾಯ ಮಾಡದೆ ಸ್ಥಳದಿಂದ ಓಡಿಹೋಗಿದ್ದಾರೆ.

'ನಾವು ಕೆಲಸ ಮುಗಿಸಿ ಸೈಕಲ್‌ನಲ್ಲಿ ನಮ್ಮ ಕೋಣೆಗೆ ಮರಳುತ್ತಿದ್ದೆವು. ಮೂರು ದ್ವಿಚಕ್ರ ವಾಹನ ಹಾಗೂ ಆಟೋದಲ್ಲಿ ಬಂದ ಆರೋಪಿಗಳು ನಮ್ಮನ್ನು ತಡೆದು ಹಣಕ್ಕೆ ಬೇಡಿಕೆ ಇಟ್ಟಿದ್ದರು. ನಾವು ಕೊಡಲು ನಿರಾಕರಿಸಿದ ನಂತರ ಕೋಲುಗಳಿಂದ ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ. ನಾವು ರಸ್ತೆಯಲ್ಲಿ ಬಿದ್ದಾಗ, ಅವರು ನಮ್ಮನ್ನು ಎಳೆದೊಯ್ದರು. ನಂತರ ನಮ್ಮಿಂದ 1,000 ರೂ. ನಗದು ಜೊತೆಗೆ ಎರಡು ಮೊಬೈಲ್ ಫೋನ್‌ಗಳನ್ನು ತೆಗೆದುಕೊಂಡು ಪರಾರಿಯಾಗಿದ್ದಾರೆ ಎಂದು ಬುದ್ದದೇಬ್ ಟಿಎನ್‌ಎಸ್‌ಇಗೆ ತಿಳಿಸಿದರು.

ಪ್ರಾತಿನಿಧಿಕ ಚಿತ್ರ
ಬೆಂಗಳೂರು: ಪಾನ್ ಬ್ರೋಕರ್ ದರೋಡೆ ಪ್ರಕರಣ, ಐವರ ಬಂಧನ, 60 ಲಕ್ಷ ರು. ವಶ

'ನಮ್ಮ ಮೇಲೆ ದಾಳಿ ನಡೆದಾಗ ಅಲ್ಲಿದ್ದವರು ಮತ್ತು ದಾರಿಹೋಕರು ಭಯದಿಂದ ಓಡಲಾರಂಭಿಸಿದರು. ಆರೋಪಿಗಳು ಕನ್ನಡದಲ್ಲಿ ಮಾತನಾಡುತ್ತಿದ್ದು, ನಾವು ಅವರನ್ನು ಈ ಹಿಂದೆ ನೋಡಿಲ್ಲ. ವಾಹನ ಸಂಖ್ಯೆಗಳನ್ನು ಕಂಡುಕೊಳ್ಳಲು ನಮಗೆ ಸಾಧ್ಯವಾಗಲಿಲ್ಲ. ನಾವು ಒಂದು ದಿನ ಆಸ್ಪತ್ರೆಗೆ ದಾಖಲಾಗಿದ್ದೇವೆ ಮತ್ತು ಇನ್ನೂ ಚಿಕಿತ್ಸೆ ಪಡೆಯುತ್ತಿದ್ದೇವೆ' ಎಂದರು.

ಆರೋಪಿಗಳ ವಿರುದ್ಧ ವರ್ತೂರು ಠಾಣೆ ಪೊಲೀಸರು ದರೋಡೆ (ಐಪಿಸಿ 394) ಪ್ರಕರಣ ದಾಖಲಿಸಿಕೊಂಡಿದ್ದಾರೆ.

'ನಾವು ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳಿಂದ ಶಂಕಿತರ ಚಿತ್ರಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದೇವೆ. ಸಂತ್ರಸ್ತರು ಯಾವುದೇ ಶಂಕಿತರನ್ನು ಗುರುತಿಸುತ್ತಿಲ್ಲ. ದರೋಡೆ ನಂತರ, ಸಂತ್ರಸ್ತರು ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋಗಿದ್ದಾರೆ. ವೈದ್ಯಕೀಯ-ಕಾನೂನು ಪ್ರಕರಣವನ್ನು ದಾಖಲಿಸಿದ ನಂತರ ಆಸ್ಪತ್ರೆ ನಮಗೆ ಮಾಹಿತಿ ನೀಡಿದೆ. ಸಂತ್ರಸ್ತರ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದೇವೆ. ಆರೋಪಿಗಳನ್ನು ಇನ್ನೂ ಬಂಧಿಸಿಲ್ಲ' ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com