ಕಂಠೀರವ ಸ್ಟುಡಿಯೋ ರಸ್ತೆಯಲ್ಲಿ ಬಾಯ್ತೆರೆದು ಕೂತಿವೆ ಗುಂಡಿಗಳು: ಸವಾರರಿಗೆ ನರಕಯಾತನೆ!

ಕಂಠೀರವ ಸ್ಟುಡಿಯೋ ರಸ್ತೆಯಲ್ಲಿ ನೂರಕ್ಕೂ ಹೆಚ್ಚು ಗುಂಡಿಗಳು ಬಾಯ್ತೆರೆದಿದ್ದು, ಹದಗೆಟ್ಟ ರಸ್ತೆಯಿಂದಾಗಿ ವಾಹನ ಸವಾರರು, ಪಾದಚಾರಿಗಳು ನಿತ್ಯ ಸಂಕಷ್ಟ ಎದುರಿಸುವಂತಾಗಿದೆ.
 ಕಂಠೀರವ ಸ್ಟುಡಿಯೋ ರಸ್ತೆಗೆ ಸಂಪರ್ಕ ಕಲ್ಪಿಸುವ ಎಂಇಐ ರಸ್ತೆಯ ಸ್ಥಿತಿ.
ಕಂಠೀರವ ಸ್ಟುಡಿಯೋ ರಸ್ತೆಗೆ ಸಂಪರ್ಕ ಕಲ್ಪಿಸುವ ಎಂಇಐ ರಸ್ತೆಯ ಸ್ಥಿತಿ.

ಬೆಂಗಳೂರು: ಕಂಠೀರವ ಸ್ಟುಡಿಯೋ ರಸ್ತೆಯಲ್ಲಿ ನೂರಕ್ಕೂ ಹೆಚ್ಚು ಗುಂಡಿಗಳು ಬಾಯ್ತೆರೆದಿದ್ದು, ಹದಗೆಟ್ಟ ರಸ್ತೆಯಿಂದಾಗಿ ವಾಹನ ಸವಾರರು, ಪಾದಚಾರಿಗಳು ನಿತ್ಯ ಸಂಕಷ್ಟ ಎದುರಿಸುವಂತಾಗಿದೆ.

ಸ್ಥಳೀಯ ನಿವಾಸಿ ಹಾಗೂ ನಿವೃತ್ತ ಎಂಜಿನಿಯರ ಅನಿಲ್‌ಕುಮಾರ್‌ ಮಾತನಾಡಿ, ಕಂಠೀರವ ಸ್ಟುಡಿಯೋ ರಸ್ತೆಯು ತುಮಕೂರು ರಸ್ತೆಯನ್ನು RMC ಯಾರ್ಡ್, ಯಶವಂತಪುರ, ಮಹಾಲಕ್ಷ್ಮಿ ಲೇಔಟ್, ನಂದಿನಿ ಲೇಔಟ್, ಲಗ್ಗೆರೆ, ರಾಜಗೋಪಾಲ ನಗರ ಮತ್ತು ಪೀಣ್ಯ II ಹಂತಕ್ಕೆ ಸಂಪರ್ಕಿಸುತ್ತದೆ. ರಸ್ತೆಯಲ್ಲಿ ಸಾವಿರಾರು ವಾಹನಗಳು ಓಡಾಡುವುದರಿಂದ ಗುಂಡಿಗಳಿಂದ ಧೂಳುಗಳು ಮೇಲೇಳುತ್ತವೆ. ಇದರಿಂದ ಸವಾರರು ವಾಹನ ಚಾಲನೆ ಮಾಡು ಸಂಕಷ್ಟ ಪಡುವಂತಾಗಿದೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ದೂರು ನೀಡಿದ್ದರೂ ರಸ್ತೆಯ ಸ್ಥಿತಿ ಹಾಗೆಯೇ ಇದೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

 ಕಂಠೀರವ ಸ್ಟುಡಿಯೋ ರಸ್ತೆಗೆ ಸಂಪರ್ಕ ಕಲ್ಪಿಸುವ ಎಂಇಐ ರಸ್ತೆಯ ಸ್ಥಿತಿ.
ಗುಂಡಿ ಬಿದ್ದ ವೈಟ್ ಟಾಪಿಂಗ್ ರಸ್ತೆ: ಪೂಜೆ ಮಾಡಿ ಆಪ್ ಆಕ್ರೋಶ, ಲೋಕಾಯುಕ್ತ ತನಿಖೆಗೆ ಆಗ್ರಹ

ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಇಂಜಿನಿಯರ್ ಮಾತನಾಡಿ, ಆಗಾಗ್ಗೆ ಗುಂಡಿಗಳನ್ನು ಮುಚ್ಚುವ ಕೆಲಸ ಮಾಡಲಾಗುತ್ತಿದೆ. ಆದರೆ, ಪ್ರಯೋಜನವಾಗದ ಕಾರಣ ರಸ್ತೆಯನ್ನು ವೈಟ್ ಟಾಪಿಂಗ್ ಮಾಡಲು ಚಿಂತನೆಗಳ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.

ಬಿಬಿಎಂಪಿಯ ಮುಖ್ಯ ಎಂಜಿನಿಯರ್ ಬಿ.ಎಸ್.ಪ್ರಹಲ್ಲಾದ್ ಮಾತನಾಡಿ, ಸಮಸ್ಯೆ ಬಗ್ಗೆ ಸ್ಥಳೀಯ ನಿವಾಸಿಗಳು ಹೇಳುತ್ತಿರುವುದು ನಿಜ, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB). ಪೈಪ್‌ವರ್ಕ್‌ಗಾಗಿ ರಸ್ತೆಯನ್ನು ಅಗೆಯುತ್ತವೆ. ಆದರೆ, ಅದನ್ನು ಸರಿಪಡಿಸುವ ಕೆಲಸ ಮಾಡುವುದಿಲ್ಲ. ಇದರಿಂದ ರಸ್ತೆಯಲ್ಲಿ ಗುಂಡಿಗಳು ನಿರ್ಮಾಣವಾಗುತ್ತವೆ. ಇದರಿಂದ ರಸ್ತೆಯ ಸ್ಥಿತಿ ಹದಗೆಡುತ್ತದೆ. ಇದೀಗ ಪಾಲಿಕೆಯು 1.2 ಕಿ.ಮೀ ರಸ್ತೆಯಲ್ಲಿ ವೈಟ್ ಟಾಪಿಂಗ್ ಕಾಮಗಾರಿಯನ್ನು ಮಾರ್ಚ್ ಮೊದಲ ವಾರದಿಂದ ಆರಂಭಿಸಲಿದೆ. ಈ ಕಾಮಗಾರಿ ಆದಷ್ಟು ಬೇಗ ಪೂರ್ಣಗೊಳ್ಳಲಿದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com