ಧಾರವಾಡ: ಅಳು ನಿಲ್ಲಿಸದ ಹೆಣ್ಣು ಮಗುವನ್ನು ಗೋಡೆಗೆ ಎಸೆದು ಹತ್ಯೆ ಮಾಡಿದ ಪಾಪಿ ತಂದೆ!

ತಂದೆಯೇ ತನ್ನ ಸ್ವಂತ ಮಗುವನ್ನು ಮನೆಯ ಗೋಡೆಗೆ ಎಸೆದು ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಧಾರವಾಡ ಜಿಲ್ಲೆಯಲ್ಲಿ ನಡೆದಿದೆ.
ಮಗು ಹತ್ಯೆ ಮಾಡಿದ ಪಾಪಿ ತಂದೆ
ಮಗು ಹತ್ಯೆ ಮಾಡಿದ ಪಾಪಿ ತಂದೆ

ಹುಬ್ಬಳ್ಳಿ: ತಂದೆಯೇ ತನ್ನ ಸ್ವಂತ ಮಗುವನ್ನು ಮನೆಯ ಗೋಡೆಗೆ ಎಸೆದು ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಧಾರವಾಡ ಜಿಲ್ಲೆಯಲ್ಲಿ ನಡೆದಿದೆ. ಏಳು ತಿಂಗಳ ಹೆಣ್ಣು ಮಗು ವೈಷ್ಣವಿ ಗುರುವಾರ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದೆ. ಧಾರವಾಡ ಜಿಲ್ಲೆಯ ಯಾದವಾಡ ಗ್ರಾಮದಲ್ಲಿ ಬುಧವಾರ ರಾತ್ರಿ ಘಟನೆ ನಡೆದಿದ್ದು, ಕೂಡಲೇ ಆರೋಪಿ ತಂದೆ ಶಂಬುಲಿಂಗ ಶಹಾಪುರಮಠ (37) ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಆತನ ವಿರುದ್ಧ ಐಪಿಸಿ 302ರ ಅಡಿಯಲ್ಲಿ ಕೊಲೆ ಪ್ರಕರಣ ದಾಖಲಿಸಲಾಗಿದೆ.

ಮಗು ಹತ್ಯೆ ಮಾಡಿದ ಪಾಪಿ ತಂದೆ
ಕುಡಿದ ಮತ್ತಿನಲ್ಲಿ 6 ವರ್ಷದ ಬಾಲಕಿ ಮೇಲೆ ಅತ್ಯಾಚಾರ; ಯುವಕನ ಬಂಧನ

ಮಗಳು ಹುಟ್ಟಿದ ನಂತರ ಅತೃಪ್ತಿ ಹೊಂದಿದ್ದಾಗಿ ಆರೋಪಿ ತಂದೆ ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ಮೃತ ವೈಷ್ಣವಿ ಎರಡನೇ ಮಗು. ಈತ ಪದೇ ಪದೇ ಪತ್ನಿಯೊಂದಿಗೆ ಜಗಳ ಮಾಡುತ್ತಿದ್ದು, ಆಕೆಗೆ ಥಳಿಸುತ್ತಿದ್ದ. ಹೆಣ್ಣು ಮಗುವಿಗೆ ಬಿಸಿನೀರು ಸುರಿಯುವುದಾಗಿ ಬೆದರಿಸುತ್ತಿದ್ದ ಎನ್ನಲಾಗಿದೆ. ಸಮಸ್ಯೆ ಬಗೆಹರಿಸುವಂತೆ ಗ್ರಾಮಸ್ಥರು ಪಂಚಾಯಿತಿ ನಡೆಸಿದರೂ ಪ್ರಯೋಜನವಾಗಿಲ್ಲ ಎಂದು ಸಂಬಂಧಿಕರು ತಿಳಿಸಿದ್ದಾರೆ.

ಆರೋಪಿ ತನ್ನ ನಿವಾಸದಲ್ಲಿ ರಾತ್ರಿ ಊಟ ಮುಗಿಸಿ ಮಲಗಿದ್ದಾಗ ರಾತ್ರಿ 10.30ರ ಸುಮಾರಿಗೆ ಮಗು ಅಳಲು ಆರಂಭಿಸಿದಾಗ ಆತನಿಗೆ ಎಚ್ಚರವಾಗಿದೆ. ಕೂಡಲೇ ಆತ ಅವಾಚ್ಯ ಶಬ್ದಗಳಿಂದ ಬೈಯುತ್ತಾ, ಮಗುವನ್ನು ಗೋಡೆಗೆ ಎಸೆದಿದ್ದಾನೆ. ಇದರಿಂದ ಮಗುವಿನ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟು, ಉಳಿಸಲಾಗಲಿಲ್ಲ ಆತನ ಪತ್ನಿ ತಿಳಿಸಿದರು.

ಆರೋಪಿ ತಂದೆ ವಿರುದ್ಧ ಕೊಲೆ ಯತ್ನ ಪ್ರಕರಣ (ಐಪಿಸಿ 307) ಅಡಿಯಲ್ಲಿ ದಾಖಲಾಗಿದ್ದು, ನಂತರ ಗುರುವಾರ ಮಧ್ಯಾಹ್ನ ಕೊಲೆಯಾಗಿ ಪರಿವರ್ತಿಸಲಾಗಿದೆ. ಕಿಮ್ಸ್ ಆಸ್ಪತ್ರೆಯಲ್ಲಿ ಮಧ್ಯಾಹ್ನ 12.30ರ ಸುಮಾರಿಗೆ ಹೆಣ್ಣು ಮಗು ಸಾವನ್ನಪ್ಪಿದೆ.

ತಂದೆ ಮದ್ಯವ್ಯಸನಿಯಾಗಿದ್ದು, ಗ್ರಾಮದಲ್ಲಿ ದಿನಗೂಲಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ನಡೆದ ಕೂಡಲೇ ಅಕ್ಕಪಕ್ಕದವರು ಮನೆಗೆ ಧಾವಿಸಿ ಶಹಾಪುರಮಠವನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಹಲವು ಗ್ರಾಮಸ್ಥರು ಪೊಲೀಸರ ಬಳಿ ಹೇಳಿಕೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com