ಕೆಎಸ್ ಆರ್ ಟಿಸಿ (ಸಾಂದರ್ಭಿಕ ಚಿತ್ರ)
ಕೆಎಸ್ ಆರ್ ಟಿಸಿ (ಸಾಂದರ್ಭಿಕ ಚಿತ್ರ)

KSRTC ಮತ್ತು ಸಾರಿಗೆ ಸಂಸ್ಥೆಗಳಿಗೆ ‘ನಿಷ್ಫಲ ಶುಲ್ಕ’ ಅಡಿಯಲ್ಲಿ ಪರಿಹಾರ ಪಡೆಯಲು ಅರ್ಹತೆ ಇಲ್ಲ: ಕರ್ನಾಟಕ ಹೈಕೋರ್ಟ್

ಅಪಘಾತದ ನಂತರ ವಾಹನಗಳನ್ನು ರಿಪೇರಿಗೆ ತೆಗೆದುಕೊಂಡು ಹೋದಾಗ ಆಗುವ ಆದಾಯ ನಷ್ಟಕ್ಕೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮತ್ತು ಸಾರಿಗೆ ಸಂಸ್ಥೆಗಳು ನಿಷ್ಫಲ ಶುಲ್ಕ (ಐಡಲ್ ಚಾರ್ಜ್) ಅಡಿಯಲ್ಲಿ ಪರಿಹಾರವನ್ನು ಪಡೆಯಲು ಅರ್ಹರಲ್ಲ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ.

ಬೆಂಗಳೂರು: ಅಪಘಾತದ ನಂತರ ವಾಹನಗಳನ್ನು ರಿಪೇರಿಗೆ ತೆಗೆದುಕೊಂಡು ಹೋದಾಗ ಆಗುವ ಆದಾಯ ನಷ್ಟಕ್ಕೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮತ್ತು ಸಾರಿಗೆ ಸಂಸ್ಥೆಗಳು ನಿಷ್ಫಲ ಶುಲ್ಕ (ಐಡಲ್ ಚಾರ್ಜ್) ಅಡಿಯಲ್ಲಿ ಪರಿಹಾರವನ್ನು ಪಡೆಯಲು ಅರ್ಹರಲ್ಲ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ.

ಆದಾಯ ನಷ್ಟಕ್ಕೆ ಪರಿಹಾರ ನೀಡಲು ನ್ಯಾಯಮಂಡಳಿ ನೀಡಿದ ಆದೇಶವನ್ನು ಪ್ರಶ್ನಿಸಿ ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ ಲಿಮಿಟೆಡ್ ಸಲ್ಲಿಸಿದ್ದ ಅರ್ಜಿಗಳ ಬ್ಯಾಚ್ ಅನ್ನು ಭಾಗಶಃ ಅನುಮತಿಸುವ ಸಂದರ್ಭದಲ್ಲಿ ನ್ಯಾಯಮೂರ್ತಿ ಹಂಚಾಟೆ ಸಂಜೀವ್‌ಕುಮಾರ್ ಈ ಆದೇಶವನ್ನು ನೀಡಿದರು. ಬಸ್ ಅಪಘಾತಕ್ಕೀಡಾದರೆ ಮತ್ತು ಹಾನಿಗೊಳಗಾದರೆ ಮತ್ತು ದುರಸ್ತಿಗಾಗಿ ಗ್ಯಾರೇಜ್‌ನಲ್ಲಿ ಇರಿಸಿದರೆ, ಸಾರಿಗೆ ಸಂಸ್ಥೆಗಳು ಕಾನೂನಿನ ಪ್ರಕಾರ ಇತರ ವಿಚಾರಗಳ ಮೇಲೆ ಮೇಲೆ ಪರಿಹಾರವನ್ನು ಪಡೆಯಲು ಅರ್ಹರಾಗಿರುತ್ತಾರೆ. ಆದರೆ ಆದಾಯದ ನಷ್ಟಕ್ಕೆ ಅಲ್ಲ ಎಂದು ನ್ಯಾಯಾಧೀಶರು ಹೇಳಿದರು.

ಅಪಘಾತಗಳ ಕಾರಣ, ಬಸ್‌ಗಳನ್ನು ದುರಸ್ತಿಗಾಗಿ ವರ್ಕ್‌ಶಾಪ್‌ಗಳಿಗೆ ಕರೆದೊಯ್ಯಲಾಗುತ್ತದೆ ಮತ್ತು ಈ ಐಡಲ್ ಅವಧಿಯಲ್ಲಿ ಅವು ಸಂಚರಿಸಲು ಸಾಧ್ಯವಿಲ್ಲ. ಆದ್ದರಿಂದ, ಕೆಎಸ್‌ಆರ್‌ಟಿಸಿಯು "ಆದಾಯ ನಷ್ಟ" ಅಡಿಯಲ್ಲಿ ಪರಿಹಾರವನ್ನು ಪಡೆಯಲು ಅರ್ಹವಾಗಿದೆ. ಏಕೆಂದರೆ ಬಸ್ ದುರಸ್ತಿಗಾಗಿ ಕಾರ್ಯಾಗಾರದಲ್ಲಿರುತ್ತದೆ ಎಂದು ಕೆಎಸ್‌ಆರ್‌ಟಿಸಿಯ ವಕೀಲರು ವಾದಿಸಿದರು.

ವಿಮಾ ಕಂಪನಿಯ ಪರ ವಾದ ಮಂಡಿಸಿದ ವಕೀಲರು, ನಿಗದಿತ ಮಾರ್ಗಗಳಲ್ಲಿ ಬಿಡಿ ಬಸ್‌ಗಳನ್ನು ನಿಯೋಜಿಸಿರುವುದರಿಂದ ಕೆಎಸ್‌ಆರ್‌ಟಿಸಿ ಆದಾಯ ಕಳೆದುಕೊಳ್ಳುವುದಿಲ್ಲ. ಹಾಗಾಗಿ ಕೆಎಸ್‌ಆರ್‌ಟಿಸಿಯು "ಐಡಲ್ ಚಾರ್ಜ್‌ಗಳು/ಆದಾಯ ನಷ್ಟ" ಅಡಿಯಲ್ಲಿ ಪರಿಹಾರ ಪಡೆಯಲು ಅರ್ಹತೆ ಹೊಂದಿಲ್ಲ ಎಂದು ಸಲ್ಲಿಸಿದರು. 
 

Related Stories

No stories found.

Advertisement

X
Kannada Prabha
www.kannadaprabha.com