ಗನ್‌ ಹಿಡಿದು ರೀಲ್ಸ್: ಸಾರ್ವಜನಿಕರಲ್ಲಿ ಆತಂಕ ಹುಟ್ಟಿಸಿದ್ದ ಯುವಕ ಬಂಧನ

ಯುವಜನರಿಗೆ ಸೋಶಿಲಯಲ್‌ ಮೀಡಿಯಾದಲ್ಲಿ ಸ್ಟಾರ್‌ ಆಗುವ ಹುಚ್ಚು ಕಡಿಮೆಯೇನಿಲ್ಲ. ಹೀಗಾಗಿ, ತರಹೇವಾರಿ ರೀಲ್ಸ್‌ಗಳನ್ನು ಮಾಡಿ ಸೋಶಿಯಲ್‌ ಮೀಡಿಯಾಗೆ ಅಪ್ಲೋಡ್‌ ಮಾಡುವುದು ಸರ್ವೇ ಸಾಮಾನ್ಯವಾಗಿದೆ. ಆದರೆ, ಇಲ್ಲೊಬ್ಬ ಯುವಕರು ಗನ್‌ ಹಿಡಿದುಕೊಂಡು ರೀಲ್ಸ್ ಮಾಡಿ ಸಾರ್ವಜನಿಕರಲ್ಲಿ ಆತಂಕ ಹುಟ್ಟಿಸಿದ್ದಾನೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಯುವಜನರಿಗೆ ಸೋಶಿಲಯಲ್‌ ಮೀಡಿಯಾದಲ್ಲಿ ಸ್ಟಾರ್‌ ಆಗುವ ಹುಚ್ಚು ಕಡಿಮೆಯೇನಿಲ್ಲ. ಹೀಗಾಗಿ, ತರಹೇವಾರಿ ರೀಲ್ಸ್‌ಗಳನ್ನು ಮಾಡಿ ಸೋಶಿಯಲ್‌ ಮೀಡಿಯಾಗೆ ಅಪ್ಲೋಡ್‌ ಮಾಡುವುದು ಸರ್ವೇ ಸಾಮಾನ್ಯವಾಗಿದೆ. ಆದರೆ, ಇಲ್ಲೊಬ್ಬ ಯುವಕರು ಗನ್‌ ಹಿಡಿದುಕೊಂಡು ರೀಲ್ಸ್ ಮಾಡಿ ಸಾರ್ವಜನಿಕರಲ್ಲಿ ಆತಂಕ ಹುಟ್ಟಿಸಿದ್ದಾನೆ.

ಈ ಸಂಬಂಧ ಕೇಂದ್ರರ ಅಪರಾಧ ವಿಭಾಗದ ಪೊಲೀಸರು 26 ವರ್ಷದ ಯುವಕ ಶಶಾಂಕ್ ಎಂಬಾತನನ್ನು ಬಂಧನಕ್ಕೊಳಪಡಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ತನ್ನ ಪ್ರಾಬಲ್ಯ ಸಾಧಿಸಲು ಈತ ಹಲವು ಬಾರಿ ಮಾರಾಕಾಸ್ತ್ರಗಳು, ಗನ್ ಹಿಡಿದು ವಿಡಿಯೋ ಮಾಡುತ್ತಿದ್ದ. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಈತನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ. ವಿಚಾರಣೆ ವೇಳೆ ಶಶಾಂಕ್ ತಪ್ಪೊಪ್ಪಿಕೊಂಡಿದ್ದಾನೆಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.

2015ರಲ್ಲಿ ಹುಳಿಮಾವು ಪೊಲೀಸ್ ಠಾಣೆಯಲ್ಲಿ ನಡೆದ ಕೊಲೆ ಪ್ರಕರಣ ಹಾಗೂ 2019ರಲ್ಲಿ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ನಡೆದ ಮತ್ತೊಂದು ಕೊಲೆ ಪ್ರಕರಣದಲ್ಲಿ ಶಶಾಂಕ್ ನಂಟು ಇದೆ ಎಂದು ಮೂಲಗಳು ತಿಳಿಸಿವೆ. ಜೊತೆಗೆ ರಾಜಾಜಿನಗರ ಮತ್ತು ತಿಲಕನಗರದಲ್ಲಿ ಕಳ್ಳತನ, ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಅಪಹರಣ ಮತ್ತು ಕೊಲೆ ಪ್ರಕರಣಗಳೂ ಇವೆ ಎನ್ನಲಾಗಿದ್ದು, ಪುಟ್ಟೇನಹಳ್ಳಿಯಲ್ಲಿ ಏಳು ಹಲ್ಲೆ ಪ್ರಕರಣಗಳೂ ಇವೆ ಎಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com