ಬೆಂಗಳೂರು: ಶಾಲೆಗಳಲ್ಲಿ ಬ್ಯಾಗ್ ಮುಕ್ತ ಶನಿವಾರ ಆಚರಣೆ ಮುಂದುವರಿಕೆ, ಮಕ್ಕಳಲ್ಲಿ ಸೃಜನಶೀಲತೆಗೆ ಒತ್ತು

ಮಕ್ಕಳು ಪಠ್ಯಪುಸ್ತಕಗಳಿಂದ ಕಲಿಯುವುದ ಹೊರತಾಗಿ ಆಟವಾಡುವುದು, ಹಾಡುವುದು ಅಥವಾ ಕಥೆಗಳನ್ನು ಕೇಳುವುದು ಮುಂತಾದ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳಲ್ಲಿ ಸೃಜನಶೀಲತೆಯನ್ನು ಉತ್ತೇಜಿಸುವ ಗುರಿಯನ್ನು ಈ ಕಾರ್ಯಕ್ರಮ ಹೊಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಜ್ಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಇಲಾಖೆ (DSERT) 2024-25ನೇ ಶೈಕ್ಷಣಿಕ ವರ್ಷಕ್ಕೆ ಸಂಭ್ರಮ ಶನಿವಾರ (ಶನಿವಾರ ದಿನ ಆಚರಣೆ) ಮುಂದುವರಿಸುವಂತೆ ರಾಜ್ಯಾದ್ಯಂತ ಸರ್ಕಾರಿ ಶಾಲೆಗಳಿಗೆ ಸೂಚನೆ ನೀಡಿದೆ. ಎಲ್ಲಾ ಶಾಲೆಗಳು ಪ್ರತಿ ತಿಂಗಳ ಒಂದು ಶನಿವಾರವನ್ನು ವಿದ್ಯಾರ್ಥಿಗಳಿಗೆ 'ಬ್ಯಾಗ್-ಮುಕ್ತ' ದಿನವನ್ನಾಗಿ ಆಚರಿಸಬೇಕೆಂಬುದು ಇದರ ಉದ್ದೇಶವಾಗಿದೆ.

ಮಕ್ಕಳು ಪಠ್ಯಪುಸ್ತಕಗಳಿಂದ ಕಲಿಯುವುದ ಹೊರತಾಗಿ ಆಟವಾಡುವುದು, ಹಾಡುವುದು ಅಥವಾ ಕಥೆಗಳನ್ನು ಕೇಳುವುದು ಮುಂತಾದ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳಲ್ಲಿ ಸೃಜನಶೀಲತೆಯನ್ನು ಉತ್ತೇಜಿಸುವ ಗುರಿಯನ್ನು ಈ ಕಾರ್ಯಕ್ರಮ ಹೊಂದಿದೆ. ಪ್ರತಿದಿನ ಶಾಲೆಗಳಿಗೆ ಭಾರವಾದ ಚೀಲಗಳನ್ನು ಸಾಗಿಸುವ ಹೊರೆಯನ್ನು ಕಡಿಮೆ ಮಾಡುವ ಆಲೋಚನೆಯೂ ಇದರದ್ದಾಗಿದೆ.

ಸಂಗ್ರಹ ಚಿತ್ರ
ಬೆಂಗಳೂರಿನ ಸರ್ಕಾರಿ ಶಾಲೆಗಳಲ್ಲಿ ಶೀಘ್ರ 'ಬ್ಯಾಗ್ ಮುಕ್ತ ಶನಿವಾರ'

ಮಕ್ಕಳಿಗೆ ಪಾಠದ ವಿಷಯಗಳು ಹೊರೆಯಾಗದಂತೆ ಮತ್ತು ಅವರಿಗೆ ಆಹ್ಲಾದಕರ ಕಲಿಕೆಯ ಅನುಭವವನ್ನು ನೀಡುವ ಉದ್ದೇಶದಿಂದ ಪ್ರತಿ ತಿಂಗಳು ಒಂದು ಶನಿವಾರವನ್ನು ಬ್ಯಾಗ್ ರಹಿತ ದಿನವಾಗಿ ಆಚರಿಸಲು ಆದೇಶಿಸಲಾಗಿದೆ" ಎಂದು ಡಿಎಸ್‌ಇಆರ್‌ಟಿ ಅಧಿಸೂಚನೆಯಲ್ಲಿ ತಿಳಿಸಿದೆ.

ಈ ಉಪಕ್ರಮವು ಸರಿಯಾಗಿ ಅನುಷ್ಠಾನಗೊಂಡಿದೆಯೆ ಎಂದು ಖಚಿತಪಡಿಸಿಕೊಳ್ಳಲು, ಶಾಲೆಗಳು ಉಪಕ್ರಮದ ಬಗ್ಗೆ ವರದಿಗಳನ್ನು ಸಲ್ಲಿಸಲು ಮತ್ತು ಜಿಲ್ಲೆ, ಬ್ಲಾಕ್ ಮತ್ತು ಕ್ಲಸ್ಟರ್ ಮಟ್ಟದಲ್ಲಿ ಪ್ರಗತಿ ಸಭೆಗಳನ್ನು ಕೈಗೊಳ್ಳಲು DSERT ಆದೇಶಿಸಿದೆ. ಶಾಲೆಗಳು ತಪ್ಪದೆ ಉಪಕ್ರಮವನ್ನು ಕೈಗೊಳ್ಳುವಂತೆ ಜಿಲ್ಲೆ ಮತ್ತು ಬಿಇಒಗಳು ಖಚಿತಪಡಿಸಿಕೊಳ್ಳಬೇಕು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com