FedEx ಹಗರಣ: 5 ತಿಂಗಳಲ್ಲಿ 65.19 ಕೋಟಿ ರೂ. ಕಳೆದುಕೊಂಡ ಬೆಂಗಳೂರಿಗರು!

ಯಾವುದೇ ವ್ಯಕ್ತಿಗೆ ಯಾವುದೇ ಅನುಮಾನಾಸ್ಪದ ಫೋನ್ ಕರೆಗಳು ಅಥವಾ ಸಂದೇಶಗಳು ಬಂದರೆ, ತಕ್ಷಣವೇ ಪೊಲೀಸರನ್ನು ಸಂಪರ್ಕಿಸಲು ಅಥವಾ ಸೈಬರ್ ಕ್ರೈಮ್ ವಿಭಾಗಕ್ಕೆ ವರದಿ ಮಾಡಲು ಸೂಚಿಸಲಾಗಿದೆ- FedEx ಸ್ಪಷ್ಟನೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಒಂದು ಸಾಮಾನ್ಯ ಫೋನ್ ಕರೆ ಮೂಲಕ ಅಮಾಯಕರನ್ನು ಸೆಳೆಯುವ ಮೂಲಕ ಪ್ರಾರಂಭವಾದ ಫೆಡೆಕ್ಸ್ ಹಗರಣ ಹಲವಾರು ಬಾರಿ ತನ್ನ ಅವತಾರವನ್ನು ಬದಲಾಯಿಸಿಕೊಂಡಿದ್ದು, ಇತ್ತೀಚಿನ ದಿನಗಳಲ್ಲಿ ಅದನ್ನು ಭೇದಿಸುವುದು ಹೆಚ್ಚು ಕಷ್ಟಕರವಾಗುತ್ತಿದೆ. ಇತ್ತೀಚಿನ ಮಾಹಿತಿಯ ಪ್ರಕಾರ, ಈ ವರ್ಷದ ಮೊದಲ ಐದು ತಿಂಗಳಲ್ಲಿ ಈ ವಂಚನೆಯಿಂದ ಬೆಂಗಳೂರಿಗರು 65.19 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ, ಮೇ ವರೆಗೆ 521 ಪ್ರಕರಣಗಳು ದಾಖಲಾಗಿವೆ.

2023ರಲ್ಲಿ ಇದೇ ವಂಚನೆಯಿಂದ ಜನರು ರೂ. 30.81 ಕೋಟಿಯನ್ನು ಕಳೆದುಕೊಂಡಿದ್ದರು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಕೇವಲ ಐದು ತಿಂಗಳಲ್ಲಿ ಶೇ. 71 ರಷ್ಟು ಹೆಚ್ಚಾಗಿದೆ. ಈ 521 ಪ್ರಕರಣಗಳಲ್ಲಿ ವೈಟ್‌ಫೀಲ್ಡ್ ವಿಭಾಗದಲ್ಲಿ ಅತಿ ಹೆಚ್ಚು ಜನರು 14.73 ಕೋಟಿ ರೂ.ಗಳನ್ನು ಕಳೆದುಕೊಂಡಿದ್ದಾರೆ, ಕಳೆದ ವರ್ಷ 6.47 ಕೋಟಿ ರೂ. ಕಳೆದುಕೊಂಡಿದ್ದರು.

ವಂಚಕರು ತಮ್ಮನ್ನು ಫೆಡೆಕ್ಸ್‌ನ ಪ್ರತಿನಿಧಿಗಳಂತೆ ನಂಬಿಸಿ ವಂಚನೆಯ ಫೋನ್ ಕರೆಯೊಂದಿಗೆ ತಮ್ಮ ಕೃತ್ಯವನ್ನು ಆರಂಭಿಸುತ್ತಾರೆ. ಕಾಲಕ್ರೇಮೇಣ ವಿಡಿಯೋ ಕರೆ ಮಾಡುತ್ತಾರೆ. ಅಲ್ಲಿ ನಕಲಿ ಅಧಿಕಾರಿಗಳು ಕಾಣಿಸಿಕೊಂಡು ವಿಶ್ವಾಸನೀಯ ಮಾತುಗಳನ್ನು ಆಡುವ ಮೂಲಕ ವಂಚನೆಗೆ ಬೀಳಿಸುತ್ತಾರೆ. ನಂತರ ಸಂತ್ರಸ್ತರ ಫೋನ್ ಕರೆಯನ್ನು ಹಗರಣದ ಭಾಗವಾಗಿರುವ 'ಪೊಲೀಸ್ ಅಧಿಕಾರಿ'ಗೆ ನಿರ್ದೇಶಿಸುತ್ತಾರೆ ಎಂದು ಸೈಬರ್ ಪೊಲೀಸ್ ಅಧಿಕಾರಿಯೊಬ್ಬರು TNIE ಗೆ ತಿಳಿಸಿದರು.

ಅತ್ಯಾಧುನಿಕತೆಯ ತಂತ್ರಜ್ಞಾನ ಬಳಕೆಯೊಂದಿಗೆ ಹಗರಣ ವ್ಯಾಪಕವಾಗಿ ಬೆಳೆಯುತ್ತಿದೆ. ಹಣವನ್ನು ಸ್ವೀಕರಿಸಿ, ಅದನ್ನು ಬೇರೆ ಕಡೆಗೆ ವರ್ಗಾವಣೆ ಮಾಡಲು ಅನೇಕ ಖಾತೆಗಳನ್ನು ಬಳಸಲಾಗುತ್ತಿದೆ. ಈ ವರ್ಷ, ಸೈಬರ್ ವಂಚಕರು ಮಹಿಳಾ ವಕೀಲರನ್ನು ಕ್ಯಾಮೆರಾದ ಮುಂದೆ ವಿವಸ್ತ್ರಗೊಳಿಸುವಂತೆ ಒತ್ತಾಯಿಸಿ, 36 ಗಂಟೆಗಳ ಕಾಲ ಡಿಜಿಟಲ್ ಬಂಧನದಲ್ಲಿರಿಸಿ 15 ಲಕ್ಷ ರೂ. ಪೀಕಿದ್ದಾರೆ. ಮತ್ತೊಂದು ಪ್ರಕರಣದಲ್ಲಿ 70 ವರ್ಷ ವಯಸ್ಸಿನ ಪತ್ರಕರ್ತರೊಬ್ಬರನ್ನು ಕುಶಲತೆಯಿಂದ ಪಳಗಿಸಿ ಎಂಟು ದಿನಗಳ ಕಾಲ ಡಿಜಿಟಲ್ ಮೂಲಕ ಬಂಧಿಸಿದ್ದರು ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಹಗರಣ ಮಾಸ್ಟರ್ ಮೈಂಡ್ ರಕ್ಷಿಸುವುದು ಹೆಚ್ಚಾಗುತ್ತಿದೆ. ಈ ಹಿಂದೆ ತ್ವರಿತಗತಿಯಲ್ಲಿ ಪ್ರಕರಣ ದಾಖಲಿಸಿದ್ದರೆ ಪೊಲೀಸರು ತ್ವರಿತವಾಗಿ ಹಣವನ್ನು ಮರು ಪಡೆಯಬಹುದಿತ್ತು. ಆದರೆ ಈಗ ಹಣವನ್ನು ನೂರಾರು ನಕಲಿ ಖಾತೆಗಳಿಗೆ ವರ್ಗಾವಣೆ ಮಾಡಲಾಗುತ್ತಿದೆ. "ವಂಚಕರು ಹಣವನ್ನು ಸ್ವೀಕರಿಸಿದ ನಂತರ ಎಲ್ಲಾ ಖಾತೆಗಳನ್ನು ನಿರ್ಬಂಧಿಸುವ ಮೂಲಕ ಮತ್ತು ಇತರ ಬ್ಯಾಂಕ್ ಖಾತೆಗಳ ಮೂಲಕ ಹಣವನ್ನು ಮರುಹೊಂದಿಸುವ ಮೂಲಕ ಯಾವುದೇ ಖಾತೆಯು ರೂ.10,000 ಕ್ಕಿಂತ ಹೆಚ್ಚು ಇಲ್ಲದಂತೆ ಖಾತ್ರಿಪಡಿಸಿಕೊಳ್ಳುತ್ತಾರೆ ಎಂದು ಅವರು ವಿವರಿಸಿದರು.

ಗ್ರಾಹಕರು ಫೋನ್ ಕರೆಗಳಲ್ಲಿ ತೊಡಗಿರುವಾಗ ಆನ್‌ಲೈನ್ ಪಾವತಿ ಮಾಡುವಂತಿಲ್ಲ ಎಂದು ಎಂದು ದೂರಸಂಪರ್ಕ ಕಂಪನಿಗಳು ಖಚಿತಪಡಿಸಬೇಕಾದ ಅಗತ್ಯವಿದೆ. ಈ ಮುನ್ನೆಚ್ಚರಿಕೆಯು ನಿರ್ಣಾಯಕವಾಗಿದೆ ಏಕೆಂದರೆ ವಂಚಕರು ಸಾಮಾನ್ಯವಾಗಿ OTP ಮತ್ತು ವೈಯಕ್ತಿಕ ವಿಷಯ ಕೇಳುವುದರೊಂದಿಗೆ ವಂಚನೆಗೆ ಬೀಳಿಸುತ್ತಾರೆ ಎಂದು ಅವರು ಹೇಳಿದರು.

ಸಾಂದರ್ಭಿಕ ಚಿತ್ರ
ಎಚ್ಚರ.... ಹೀಗೂ ಆನ್ ಲೈನ್ ವಂಚನೆ ಮಾಡುವವರಿದ್ದಾರೆ!: ವರ್ಕ್ ಫ್ರಂ ಹೋಮ್‌ ಹೆಸರಲ್ಲಿ ಪ್ರೊಫೆಸರ್'ಗೆ ಮಕ್ಮಲ್ ಟೋಪಿ

ವೈಯಕ್ತಿಕ ಮಾಹಿತಿಯನ್ನು ಕೇಳಿಲ್ಲ: FedEx

ಗ್ರಾಹಕರು ಕೇಳದ ಹೊರತು ಸರಕುಗಳನ್ನು ಸಾಗಿಸಲು ಅಥವಾ ಹಿಡಿದಿಟ್ಟುಕೊಳ್ಳಲು ಫೋನ್ ಕರೆಗಳು, ಮೇಲ್ ಅಥವಾ ಇಮೇಲ್ ಮೂಲಕ ವೈಯಕ್ತಿಕ ಮಾಹಿತಿಯನ್ನು FedEx ಕೇಳಲ್ಲ. ಯಾವುದೇ ವ್ಯಕ್ತಿಗೆ ಯಾವುದೇ ಅನುಮಾನಾಸ್ಪದ ಫೋನ್ ಕರೆಗಳು ಅಥವಾ ಸಂದೇಶಗಳು ಬಂದರೆ, ತಕ್ಷಣವೇ ಪೊಲೀಸರನ್ನು ಸಂಪರ್ಕಿಸಲು ಅಥವಾ ಸೈಬರ್ ಕ್ರೈಮ್ ವಿಭಾಗಕ್ಕೆ ವರದಿ ಮಾಡಲು ಸೂಚಿಸಲಾಗಿದೆ ಎಂದು ಕಂಪನಿ ಸ್ಪಷ್ಟಪಡಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com