Sindhi college Murder: ಒಳಗೆ ಬಿಡಲಿಲ್ಲ ಎಂಬ ಕಾರಣಕ್ಕೆ ಸೆಕ್ಯೂರಿಟಿ ಗಾರ್ಡ್ ಗೆ ಇರಿದು ಕೊಂದ ಕಾಲೇಜು ವಿದ್ಯಾರ್ಥಿ!

ಮೂಲಗಳ ಪ್ರಕಾರ ಪಾನಮತ್ತನಾಗಿ ಬಂದಿದ್ದ ವಿದಾರ್ಥಿ ಭಾರ್ಗವ್ ಕಾಲೇಜಿನ ಒಳಗೆ ಪ್ರವೇಶ ಮಾಡಲು ಯತ್ನಿಸಿದ್ದು ಈ ವೇಳೆ ಸೆಕ್ಯುರಿಟಿ ಗಾರ್ಡ್ ಜೈಕಿಶೋರ್ ರಾಯ್ ಆತನನ್ನು ತಡೆದಿದ್ದಾರೆ.
Sindhi college student brutally killed a security guard in Bengaluru
ಸಿಂಧಿ ಕಾಲೇಜಿನಲ್ಲಿ ವಿದ್ಯಾರ್ಥಿಯಿಂದಲೇ ಸಿಬ್ಬಂದಿ ಹತ್ಯೆ

ಬೆಂಗಳೂರು: ಪಾನಮತ್ತ ವಿದ್ಯಾರ್ಥಿಯೋರ್ವ ತನ್ನನ್ನು ಕಾಲೇಜಿನ ಒಳಗೆ ಬಿಡಲಿಲ್ಲ ಎಂಬ ಕಾರಣಕ್ಕೇ ಸೆಕ್ಯುರಿಟಿ ಗಾರ್ಡ್ ನನ್ನು ಇರಿದು ಕೊಂದು ಹಾಕಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನ ಅಮೃತಹಳ್ಳಿಯ ಸಿಂಧಿ ಕಾಲೇಜಿನ(Sindhi College)ಲ್ಲಿ ಬುಧವಾರ ಮಧ್ಯಾಹ್ನ 3.30 ರ ಸುಮಾರಿಗೆ ನಡೆದಿದ್ದು, ಕಾಲೇಜು ಸೆಕ್ಯೂರಿಟಿ ಗಾರ್ಡ್ ಆಗಿದ್ದ ಜೈಕಿಶೋರ್ ರಾಯ್ ಎಂಬಾತನನ್ನು ಭಾರ್ಗವ್ ಎಂಬ ವಿದ್ಯಾರ್ಥಿ ಇರಿದು ಕೊಂದು ಹಾಕಿದ್ದಾನೆ.

ಮೂಲಗಳ ಪ್ರಕಾರ ಪಾನಮತ್ತನಾಗಿ ಬಂದಿದ್ದ ವಿದಾರ್ಥಿ ಭಾರ್ಗವ್ ಕಾಲೇಜಿನ ಒಳಗೆ ಪ್ರವೇಶ ಮಾಡಲು ಯತ್ನಿಸಿದ್ದು ಈ ವೇಳೆ ಸೆಕ್ಯುರಿಟಿ ಗಾರ್ಡ್ ಜೈಕಿಶೋರ್ ರಾಯ್ ಆತನನ್ನು ತಡೆದಿದ್ದಾರೆ.

ಈ ವೇಳೆ ಇಬ್ಬರ ನಡುವೆ ವಾಗ್ವಾದ ನಡೆದಿದ್ದು, ಆಕ್ರೋಶಗೊಂಡ ವಿದ್ಯಾರ್ಥಿ ಭಾರ್ಗವ್ ಅಂಗಡಿಗೆ ಹೋಗಿ ಚಾಕು ಖರೀದಿಸಿ ತಂದು ಏಕಾಏಕಿ ಸೆಕ್ಯುರಿಟಿ ಗಾರ್ಡ್ ಮೇಲೆ ಹಲ್ಲೆ ಮಾಡಿದ್ದೇನೆ.

ನೋಡನೋಡುತ್ತಲೇ ಸೆಕ್ಯುರಿಟಿ ಗಾರ್ಡ್ ಜೈಕಿಶೋರ್ ರಾಯ್ ನ ಎದೆ ಮತ್ತು ಹೊಟ್ಟೆಗೆ 5ರಿಂದ 6 ಬಾರಿ ಇರಿದಿದ್ದಾನೆ. ಪರಿಣಾಮ ಸೆಕ್ಯೂರಿಟಿ ಗಾರ್ಡ್‌ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

Sindhi college student brutally killed a security guard in Bengaluru
ವಿಜಯಪುರ: ಪೊಲೀಸರಿಂದ ತಪ್ಪಿಸಿಕೊಳ್ಳಲು ತೆಪ್ಪದಲ್ಲಿ ಕೃಷ್ಣಾ ನದಿಗೆ ಇಳಿದ 6 ಮಂದಿ ನೀರುಪಾಲು!

ಕೊಲೆಗೈದ ಭಾರ್ಗವ್ ಇದೇ ಸಿಂದಿ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಎ ವ್ಯಾಸಂಗ ಮಾಡುತ್ತಿದ್ದ ಮತ್ತು ಈತ ಪಿಜಿಯಲ್ಲಿ ವಾಸವಿದ್ದ ಎಂದು ತಿಳಿದುಬಂದಿದೆ. ಕೊಲೆಯಾದ ವೇಳೆ ಅಂದರೆ ಬುಧವಾರ ಸಿಂಧಿ ಕಾಲೇಜಿನಲ್ಲಿ ಕಾರ್ಯಕ್ರಮ ಇತ್ತು.

ಭಾರ್ಗವ್ ಕೂಡ ಆ ಕಾರ್ಯಕ್ರಮಕ್ಕೆ ಹಾಜರಾಗಬೇಕು ಎಂದು ಆಗಮಿಸಿದ್ದ. ಆದರೆ ಪಾನಮತ್ತ ಭಾರ್ಗವ್ ತನ್ನನ್ನು ಒಳಗೆ ಬಿಡಲಿಲ್ಲ ಎಂಬ ಕಾರಣಕ್ಕೇ ಆಕ್ರೋಶದಿಂದ ಇರಿದು ಕೊಂದು ಹಾಕಿದ್ದಾನೆ.

ಪ್ರಸ್ತುತ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಭಾರ್ಗವ್ ನನ್ನು ವಶಕ್ಕೆ ಪಡೆದಿದ್ದು, ತನಿಖೆ ನಡೆಸಿದ್ದಾರೆ.

Sindhi college student brutally killed a security guard in Bengaluru
ಸಾರ್ವಜನಿಕವಾಗಿ ನಕಲಿ AK-47 ಪ್ರದರ್ಶಿಸಿದ ರೀಲ್ಸ್ ಸ್ಟಾರ್ ಅರುಣ್ ಕಠಾರೆ ಬಂಧನ

ಕ್ಲೀನಿಂಗ್ ಇನ್​ಚಾರ್ಜ್ ಆಗಿದ್ದ ಜೈಕಿಶೋರ್ ರಾಯ್ ರನ್ನು ಸೆಕ್ಯೂರಿಟಿ ಕೆಲಸಕ್ಕೆ ನೇಮಿಸಿದ್ದೇಕೆ?

ಇನ್ನು ಹತ್ಯೆಯಾದ ಜೈ ಕಿಶೋರ್ ರಾಯ್ ಸಿಂಧಿ ಕಾಲೇಜಿನ ಕ್ಲೀನಿಂಗ್ ಇನ್​ಚಾರ್ಜ್ ಆಗಿದ್ದರು ಎನ್ನಲಾಗಿದ್ದು, ಆದರೂ ಅವರನ್ನು ಸೆಕ್ಯೂರಿಟಿ ಕೆಲಸಕ್ಕೆ ನೇಮಿಸಿದ್ದು ಯಾಕೆ ಎಂದು ಕುಟುಂಬಸ್ಥರು ಕಾಲೇಜು ಆಡಳಿತ ಮಂಡಳಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೆ ರಾಯ್ ಕೊಲೆಗೆ ಸಿಂಧಿ ಕಾಲೇಜು ಆಡಳಿತ ಮಂಡಳಿಯೇ ಕಾರಣ, ಅವರು ಯಾವುದೇ ಸುರಕ್ಷತಾ ಕ್ರಮಕೈಗೊಂಡಿಲ್ಲವೆಂದು ಕಿಡಿಕಾರಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com