ಬಾಡಿಗೆ ಬಾಕಿ: ಬ್ಯಾಂಕ್ ಆಫ್ ಬರೋಡಾ, ಅಂಚೆ ಕಚೇರಿ ಸೀಲ್ ಮಾಡಿದ BBMP

ಕೋಟ್ಯಂತರ ರೂ ಬಾಡಿಗೆ ಬಾಕಿ ಹಿನ್ನಲೆಯಲ್ಲಿ ಬ್ಯಾಂಕ್ ಆಫ್ ಬರೋಡಾ, ಅಂಚೆ ಕಚೇರಿಗಳನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಜಪ್ತಿ ಮಾಡಿದೆ.
BBMP
ಬಿಬಿಎಂಪಿ

ಬೆಂಗಳೂರು: ಕೋಟ್ಯಂತರ ರೂ ಬಾಡಿಗೆ ಬಾಕಿ ಹಿನ್ನಲೆಯಲ್ಲಿ ಬ್ಯಾಂಕ್ ಆಫ್ ಬರೋಡಾ, ಅಂಚೆ ಕಚೇರಿಗಳನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಜಪ್ತಿ ಮಾಡಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಧಿಕಾರಿಗಳು ಎಂಜಿ ರಸ್ತೆಯಲ್ಲಿರುವ ನೇತಾಜಿ ಸುಭಾಷ್ ಚಂದ್ರ ಬೋಸ್ ಕಟ್ಟಡ ಎಂದು ಕರೆಯಲ್ಪಡುವ ಲೋಕೋಪಯೋಗಿ ಕಟ್ಟಡದ ನೆಲ ಮಹಡಿಯಲ್ಲಿರುವ ಬ್ಯಾಂಕ್ ಆಫ್ ಬರೋಡಾ ಮತ್ತು ಅಂಚೆ ಕಚೇರಿಯ ಕಚೇರಿಗಳನ್ನು ಸೀಲ್ ಮಾಡಿದೆ. ಬಾಡಿಗೆ ಪಾವತಿಸದಿರುವುದು ಹಾಗೂ ಪಾಲಿಕೆ ನೋಟಿಸ್ ಪಾಲಿಸದ ಕಾರಣ ಕಚೇರಿಗಳಿಗೆ ಸೀಲ್ ಹಾಕಲಾಗಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

"ಬ್ಯಾಂಕ್ ಆಫ್ ಬರೋಡಾವು 2011 ರಿಂದ ಪರಿಷ್ಕೃತ ಬಾಡಿಗೆಗಳನ್ನು ಪಾವತಿಸಿಲ್ಲ ಮತ್ತು 2022 ರಿಂದ ಯಾವುದೇ ಪಾವತಿಗಳನ್ನು ಮಾಡಲಾಗಿಲ್ಲ. ಪಾಲಿಕೆ ಅಧಿಕಾರಿಗಳು ಪರಿಷ್ಕೃತ ಬಾಡಿಗೆಗಳು, ತೆರಿಗೆ ಮತ್ತು ಬಡ್ಡಿಯನ್ನು ಒಳಗೊಂಡಂತೆ ಒಟ್ಟು ಪಾವತಿಸಬೇಕಾದ ಮೊತ್ತ 17.56 ಕೋಟಿ ರೂ.ಗಳವರೆಗೆ ಬರುತ್ತದೆ ಎಂದು ಅಂದಾಜಿಸಿದ್ದಾರೆ. ಅಂಚೆ ಇಲಾಖೆ 2006 ರಿಂದ ಹಳೆಯ ದರಗಳ ಆಧಾರದ ಮೇಲೆ ಬಾಡಿಗೆ ಪಾವತಿಸಲಾಗುತ್ತಿದೆ. GST ಮತ್ತು ಬಡ್ಡಿಯ ಆಧಾರದ ಮೇಲೆ ಇಂದು ಪಾವತಿಸಬೇಕಾದ ಮೊತ್ತವು 2.32 ಕೋಟಿ ರೂ ಗಳಾಗಿವೆ ಎನ್ನಲಾಗಿದೆ.

ಬಿಬಿಎಂಪಿ ಪೂರ್ವ ವಲಯ ಆಯುಕ್ತ ಸ್ನೇಹಲ್ ಆರ್, ಈ ಕಚೇರಿಗಳಿಗೆ ನೋಟಿಸ್ ಕಳುಹಿಸಿದ್ದು, ಹಲವು ವರ್ಷಗಳಿಂದ ಪರಿಷ್ಕೃತ ದರಗಳು, ಬಡ್ಡಿ ಮತ್ತು ತೆರಿಗೆಗಳೊಂದಿಗೆ ಬಾಕಿ ಉಳಿದಿರುವ ಬಾಡಿಗೆ ಮೊತ್ತವನ್ನು ತೆರವುಗೊಳಿಸಲು ಸಾಧ್ಯವಾಗದ ಕಾರಣ, ಬಿಬಿಎಂಪಿ ಕಚೇರಿಗಳನ್ನು ಸೀಲ್ ಮಾಡಲು ಆದೇಶ ಹೊರಡಿಸಿ ಅದನ್ನು ಅನುಷ್ಠಾನಗೊಳಿಸಲಾಗಿದೆ.

ಈ ಕುರಿತು ದಿ ನ್ಯೂ ಸಂಡೇ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿದ ಆಯುಕ್ತ ಸ್ನೇಹಿಲ್, ''ಬ್ಯಾಂಕ್ ಅಧಿಕಾರಿಗಳು ತಮ್ಮ ಕಚೇರಿಯನ್ನು ಸೀಲ್ ಮಾಡಿದ ನಂತರ ಬಿಬಿಎಂಪಿಯನ್ನು ಸಂಪರ್ಕಿಸಿದ್ದಾರೆ ಮತ್ತು ಪರಿಷ್ಕೃತ ಬಾಡಿಗೆಗೆ ತಡೆಯಾಜ್ಞೆ ಪಡೆದಿದ್ದಾರೆ ಎಂದು ಹೇಳಿದ್ದಾರೆ. ಆದರೆ, ಈ ಹಕ್ಕನ್ನು ಪರಿಶೀಲಿಸಬೇಕಾಗಿದೆ. ಅಂಚೆ ಇಲಾಖೆ ಅಧಿಕಾರಿಗಳು ಸಹ ಬಿಬಿಎಂಪಿಯೊಂದಿಗೆ ಮಾತನಾಡಿದ್ದಾರೆ. , ಆದರೆ ಪಾಲಿಕೆಗೆ ಅವರ ಪ್ರಕರಣದಲ್ಲಿ ಲಿಖಿತ ದಾಖಲೆಗಳ ಅಗತ್ಯವಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com