ತಾಯಿ-ಮಗು ಸಾವು ಬಳಿಕವೂ ಎಚ್ಚೆತ್ತುಕೊಳ್ಳದ ಸರ್ಕಾರ: ನಗರದ ಹಲವೆಡೆ ಅಪಾಯಕ್ಕೆ ಆಹ್ವಾನ ನೀಡುತ್ತಿವೆ ವಿದ್ಯುತ್‌ ತಂತಿಗಳು!

ಇಂಟರ್ನೆಟ್ ಪೂರೈಕೆದಾರರು ಹಾಕಿರುವ ಆಪ್ಟಿಕಲ್ ಫೈಬರ್ ಕೇಬಲ್‌ಗಳು ಆಗಾಗ್ಗೆ ರಸ್ತೆ ಮತ್ತು ಫುಟ್‌ಪಾತ್'ಗಳ ಮೇಲೆ ಜೋತು ಬೀಳುತ್ತಿದ್ದು, ಇದರಿಂದ ಹಲವು ಪಾದಚಾರಿಗಳು ಗಾಯಗೊಳ್ಳುತ್ತಿದ್ದಾರೆ.
ಕನ್ನಿಂಗ್‌ಹ್ಯಾಮ್ ರಸ್ತೆಯ ಗೋಡೆಯ ಮೇಲೆ ವಿದ್ಯುತ್ ಕೇಬಲ್‌ಗಳನ್ನು ಕಟ್ಟಿರುವುದು.
ಕನ್ನಿಂಗ್‌ಹ್ಯಾಮ್ ರಸ್ತೆಯ ಗೋಡೆಯ ಮೇಲೆ ವಿದ್ಯುತ್ ಕೇಬಲ್‌ಗಳನ್ನು ಕಟ್ಟಿರುವುದು.

ಬೆಂಗಳೂರು: ವಿದ್ಯುತ್ ತಂತಿ ತಗುಲಿ ಮಹಿಳೆ ಮತ್ತು ಆಕೆಯ 9 ತಿಂಗಳ ಪುಟ್ಟ ಮಗು ಸಾವನ್ನಪ್ಪಿ ಒಂಬತ್ತು ತಿಂಗಳು ಕಳೆದಿವೆ. ದುರಂತ ಘಟನೆ ಬಳಿಕವೂ ಸರ್ಕಾರ ಇನ್ನೂ ಎಚ್ಚೆತ್ತುಕೊಂಡಿಲ್ಲ. ಈಗಲೂ ನಗರದ ಹಲವು ರಸ್ತೆಗಳಲ್ಲಿ ವಿದ್ಯುತ್‌ ಪರಿವರ್ತಕಗಳು ನೆಲಮಟ್ಟದಲ್ಲಿದ್ದು. ಅಪಾಯಕ್ಕೆ ಆಹ್ವಾನ ನೀಡುತ್ತಿವೆ.

ಇಂಟರ್ನೆಟ್ ಪೂರೈಕೆದಾರರು ಹಾಕಿರುವ ಆಪ್ಟಿಕಲ್ ಫೈಬರ್ ಕೇಬಲ್‌ಗಳು ಆಗಾಗ್ಗೆ ರಸ್ತೆ ಮತ್ತು ಫುಟ್‌ಪಾತ್'ಗಳ ಮೇಲೆ ಜೋತು ಬೀಳುತ್ತಿದ್ದು, ಇದರಿಂದ ಹಲವು ಪಾದಚಾರಿಗಳು ಗಾಯಗೊಳ್ಳುತ್ತಿದ್ದಾರೆ.

ಇದೀಗ ನಗರದಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಲವು ಭಾಗಗಳಲ್ಲಿ ಕೇಬಲ್ ಹಾಗೂ ವಿದ್ಯುತ್ ತಂತಿಗಳು ಜೋತು ಬೀಳುತ್ತಿದ್ದು, ಇದು ಅಪಾಯ ಹೆಚ್ಚಾಗುವಂತೆ ಮಾಡಿದೆ.

ಅಶ್ವಥ್ ನಗರದ ನಿವಾಸಿ ಮಂಜುನಾಥ್ ಎಸ್ ಅವರು, ಮಡಿವಾಳದಲ್ಲಿ ಬೈಕ್ ನಲ್ಲಿ ಹೋಗುತ್ತಿದ್ದಾಗ ತಂತಿ ತಗುಲಿ ಕಣ್ಣಿಗೆ ಬಿದ್ದ ಘಟನೆಯನ್ನು ವಿವರಿಸಿದ್ದಾರೆ.

ಕನ್ನಿಂಗ್‌ಹ್ಯಾಮ್ ರಸ್ತೆಯ ಗೋಡೆಯ ಮೇಲೆ ವಿದ್ಯುತ್ ಕೇಬಲ್‌ಗಳನ್ನು ಕಟ್ಟಿರುವುದು.
ವಿದ್ಯುತ್ ತಂತಿ ಸ್ಪರ್ಶಿಸಿ ತಾಯಿ-ಮಗು ಸಾವು: ತನಿಖೆಗೆ ಲೋಕಾಯುಕ್ತ ಆದೇಶ

ತಂತಿ ಕೈಗೆ ಸಿಕ್ಕು ಬಿದ್ದಿದ್ದರಿಂದ ಬೈಕ್‌ನಿಂದ ಕೆಳಗೆ ಬಿದ್ದಿದ್ದೆ. ಈ ಸಮಸ್ಯೆ ಆ ರಸ್ತೆಯಲ್ಲಿ ಪದೇ ಪದೇ ಎದುರಾಗುತ್ತಲೇ ಇರುತ್ತದೆ. ಒಮ್ಮೆ ತಂತಿ ಕಣ್ಣಿಗೆ ತಗುಲಿ 1 ತಿಂಗಳ ಕಾಲ ಕೆಲಸ ಮೇಲೆ ಪರಿಣಾಮ ಬೀರುವಂತೆ ಮಾಡಿತ್ತು ಎಂದು ಹೇಳಿದ್ದಾರೆ.

ಮಳೆಯಾದಾಗ ರಾತ್ರಿ ವೇಳೆ ಕೆಲ ವಿದ್ಯುತ್ ತಂತಿಗಳು ಕಾಣುವುದೇ ಇಲ್ಲ. ಹೀಗಾಗಿ ಈ ಪ್ರದೇಶದ ಜನರು ಆತಂಕದಲ್ಲಿ ಪಾದಚಾರಿ ಮಾರ್ಗಗಳ ಬಿಟ್ಟು ರಸ್ತೆಗಳಲ್ಲಿಯೇ ನಡೆದಾಡುವಂತಾಗಿದೆ. ಈ ವೇಳೆ ವಾಹನಗಳು ಡಿಕ್ಕಿ ಹೊಡೆಯುವ ಸಾಧ್ಯತೆಗಳೂ ಹೆಚ್ಚಿಸುತ್ತದೆ ಎಂದು ತಿಳಿಸಿದ್ದಾರೆ.

ಬಿಬಿಎಂಪಿ ಅಧಿಕಾರಿಗಳು ಪ್ರತಿಕ್ರಿಯಿಸಿ, ನೇತಾಡುತ್ತಿರುವ ಕೇಬಲ್ ಗಳನ್ನು ಕೂಡಲೇ ಅವುಗಳನ್ನು ತೆರವುಗೊಳಿಸುತ್ತಿದ್ದೇವೆಂದು ಹೇಳಿದ್ದಾರೆ.

ನಗರದಲ್ಲಿ ಅನಧಿಕೃತ ಆಪ್ಟಿಕಲ್ ಫೈಬರ್ ಕೇಬಲ್ (OFC) ಸಂಪರ್ಕಗಳ ಘೋಷಿಸುವಂತೆ ಸೂಚಿಸಿ ಆರು ತಿಂಗಳ ಹಿಂದೆ ಇಂಟರ್ನೆಟ್ ಸೇವಾ ಪೂರೈಕೆದಾರರಿಗೆ (ISP) ಸೂಚನೆ ನೀಡಿದ್ದೆವು. ಆದರೆ, ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com