
ಬೆಂಗಳೂರು: ಈಜುಕೊಳದಲ್ಲಿ ಆಯೋಜಿಸಿದ್ದ ಈಜು ಕಲಿಕಾ ಶಿಬಿರಕ್ಕೆ ಬಂದಿದ್ದ ಮಹಿಳೆಯ ಬ್ಯಾಗ್ ನಲ್ಲಿ ಚಿನ್ನಾಭರಣ ಕಳವು ಮಾಡಿದ ಆರೋಪಗ ಮೇರೆಗೆ ಮಹಿಳಾ ಕೋಚ್ ಹಾಗೂ ಆಕೆಯ ಸ್ನೇಹಿತನನ್ನು ತಲಘಟ್ಟ ಠಾಣೆ ಪೊಲೀಸರು ಬಂಧಕ್ಕೊಳಪಡಿಸಿದ್ದಾರೆ.
ಸುಬ್ರಹ್ಮಣ್ಯಪುರ ಸಮೀಪದ ಗೌಡನ ಪಾಳ್ಯ ನಿವಾಸಿ ಮಮತಾ ಆಕೆಯ ಸ್ನೇಹಿತ ಅಂಜನಾಪುರ ನಿವಾಸಿ ಕ್ಯಾಬ್ ಚಾಲಕ ಸ್ವಾಮಿ (42) ಬಂಧಿತರಾಗಿದ್ದು, ಆರೋಪಿಗಳು ಕಳವು ಮಾಡಿದ್ದ ರೂ.3 ಲಕ್ಷ ಮೌಲ್ಯದ 46 ಗ್ರಾಂ ಚಿನ್ನದ ಸರ ಜಪ್ತಿ ಮಾಡಲಾಗಿದೆ. ಕೆಲ ದಿನಗಳ ಹಿಂದೆ ತಲಘಟ್ಟಪುರ ಸಮೀಪದ ಕೆಂಬತ್ತನಹತ್ತಿಯಲ್ಲಿರುವ ಸ್ವಿಮ್ ಸ್ಕ್ವೇರ್ ಸ್ವಿಮ್ಮಿಂಗ್ ಪೂಲ್ ನಲ್ಲಿ ಕಳ್ಳತನ ನಡೆದಿತ್ತು.
ಈಜುಕೊಳದಲ್ಲಿ ಜು.7 ರಂದು ವಾರಾಂತ್ಯದ ಈಜು ಕಲಿಕಾ ಶಿಬಿರ ಆಯೋಜಿಸಲಾಗಿತ್ತು. ಈ ಶಿಬಿರದಲ್ಲಿ ತಮ್ಮ ಮಗಳ ಜೊತೆಗ ದೂರುದಾರ ಮಹಿಳೆ ಕೂಡ ಪಾಲ್ಗೊಂಡಿದ್ದರು. ಈ ವೇಳೆ ಚಿನ್ನದ ಸರ, ಎರಡು ಬಲೆಗಳನ್ನು ತೆಗೆದು ಬ್ಯಾಗ್ ನಲ್ಲಿ ಹಾಕಿ ಲಾಕರ್ ನಲ್ಲಿಟ್ಟಿದ್ದರು.
ಈಜು ಅಭ್ಯಾಸದ ನಂತರ ವಾಪಸ್ ಬಂದು ನೋಡಿದಾಗ ಡ್ರೆಸಿಂಗ್ ರೂಮ್ ನಲ್ಲಿನ ಲಾಕರ್ ನಲ್ಲಿಟ್ಟಿದ್ದ ಬ್ಯಾಗ್ ನಲ್ಲಿದ್ದ ಚಿನ್ನದ ಸರ ಕಳವಾಗಿತ್ತು. ಎಲ್ಲರನ್ನು ಕೇಳಿದ ಮಹಿಳೆ, ಕೊನೆಗ ತಲಘಟ್ಟಪುರ ಠಾಣೆಗೆ ದೂರು ನೀಡಿದ್ದರು. ಈ ಬಗ್ಗೆ ತನಿಖೆ ಕೈಗೊಂ ಪೊಲೀಸರು ಶಂಕೆ ಮೇರೆಗೆ ಕೋಚ್ ಮಮತಾರನ್ನು ವಿಚಾರಣೆ ನಡೆಸಿದಾಗ ಸತ್ಯ ಬಯಲಾಗಿದೆ.
Advertisement