ಸಾಂದರ್ಭಿಕ ಚಿತ್ರ
ರಾಜ್ಯ
ಪೆಟ್ರೋಲ್ ಸುರಿದು ಗುಡಿಸಲಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು; ತಾಯಿ-ಮಗಳು ಸಜೀವ ದಹನ
ಕುಟುಂಬ ಗುಡಿಸಲಿನಲ್ಲಿ ಮಲಗಿದ್ದಾಗ. ದುಷ್ಕರ್ಮಿಗಳು ಸಿಂಟೆಕ್ಸ್ ನಲ್ಲಿ ಪೆಟ್ರೋಲ್ ತುಂಬಿ ಅದನ್ನು ಎರಡು ಎಚ್ ಪಿ ಮೋಟಾರ್ ಸಹಾಯದಿಂದ ಶೆಡ್ಡಿಗೆ ಸಿಂಪಡಿಸಿ ಬೆಂಕಿ ಹಚ್ಚಿದ್ದಾರೆ. ಬೆಂಕಿ ಹಚ್ಚುವ ಮುನ್ನ ಶೆಡ್ಡಿನ ಬಾಗಿಲವನ್ನು ಲಾಕ್ ಮಾಡಿ ಇಡೀ ಕುಟುಂಬವನ್ನು ಮುಗಿಸಲು ಕೃತ್ಯ ನಡೆಸಿದ್ದಾರೆ ಎನ್ನಲಾಗಿದೆ.
ಬಾಗಲಕೋಟೆ: ದುಷ್ಕರ್ಮಿಗಳು ಗುಡಿಸಲಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪರಿಣಾಮ ತಾಯಿ-ಮಗಳು ಸಜೀವ ದಹನವಾಗಿರುವ ಹೃದಯ ವಿದ್ರಾವಕ ಘಟನೆ ಬೆಳಗಲಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ಮೃತರನ್ನುಜೈಬಾನ (60), ಶಬಾನ (20) ಎಂದು ಗುರ್ತಿಸಲಾಗಿದೆ. ಅವಘಡದಲ್ಲಿ ಸಿದ್ದೀಖ್ ಎಂಬಾತ ಬಚಾವಾಗಿದ್ದು, ದಸ್ತಗೀರ್ ಸಾಬ್ ಎಂಬವರು ಗಾಯಗೊಂಡಿದ್ದಾರೆ. ಚಿಕಿತ್ಸೆಗಾಗಿ ಮಹಾಲಿಂಗಪುರ ಆಸ್ಪತ್ರೆಗೆ ದಾಖಲಿಸಲಾಗಿದೆ.
ದಸ್ತಗೀರ್ ಸಾಬ್ ಅವರ ಕುಟುಂಬ ಗುಡಿಸಲಿನಲ್ಲಿ ಮಲಗಿದ್ದಾಗ. ದುಷ್ಕರ್ಮಿಗಳು ಸಿಂಟೆಕ್ಸ್ ನಲ್ಲಿ ಪೆಟ್ರೋಲ್ ತುಂಬಿ ಅದನ್ನು ಎರಡು ಎಚ್ ಪಿ ಮೋಟಾರ್ ಸಹಾಯದಿಂದ ಶೆಡ್ಡಿಗೆ ಸಿಂಪಡಿಸಿ ಬೆಂಕಿ ಹಚ್ಚಿದ್ದಾರೆ. ಬೆಂಕಿ ಹಚ್ಚುವ ಮುನ್ನ ಶೆಡ್ಡಿನ ಬಾಗಿಲವನ್ನು ಲಾಕ್ ಮಾಡಿ ಇಡೀ ಕುಟುಂಬವನ್ನು ಮುಗಿಸಲು ಕೃತ್ಯ ನಡೆಸಿದ್ದಾರೆ ಎನ್ನಲಾಗಿದೆ.
ಘಟನೆಯಲ್ಲಿ ತಾಯಿ-ಮಗಳ ಮೃತದೇಹಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ಈ ಸಂಬಂಧ ಮಹಾಲಿಂಗಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.