ಉದ್ಯೋಗ ಮೀಸಲಾತಿ ವಿವಾದ: ಕರ್ನಾಟಕದ ಖಾಸಗಿ ಕಂಪನಿಗಳಿಗೆ ಆಂಧ್ರ ಪ್ರದೇಶ ಗಾಳ; ಸರ್ಕಾರ ಕಿಡಿ

ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರ ಪುತ್ರ, ಸಚಿವ ನಾರಾ ಲೋಕೇಶ್​​ ಅವರು ನಾಸ್ಕಾಮ್​​​ಗೆ ತಮ್ಮ ರಾಜ್ಯಕ್ಕೆ ಬರಲು ವಿಶೇಷ ಆಹ್ವಾನ ನೀಡಿದ್ದಾರೆ. ಕಂಪನಿಯ ಆಕ್ಷೇಪವನ್ನು ತಮ್ಮ ಸರ್ಕಾರ ಅರ್ಥ ಮಾಡಿಕೊಂಡಿದೆ. ಆಂಧ್ರದಲ್ಲಿ ಐಟಿ ಸೇವೆಗಳನ್ನು ವಿಸ್ತರಿಸಬಹುದು ಎಂದು ಕಂಪನಿಗೆ ತಿಳಿಸಿದ್ದಾರೆ.
ಪ್ರಿಯಾಂಕ್ ಖರ್ಗೆ
ಪ್ರಿಯಾಂಕ್ ಖರ್ಗೆ
Updated on

ಬೆಂಗಳೂರು: ಕರ್ನಾಟಕದಲ್ಲಿ ಖಾಸಗಿ ಕಂಪನಿಗಳ ಹುದ್ದೆಗಳಲ್ಲಿ ಸ್ಥಳೀಯರಿಗೆ ಶೇಕಡಾ 100 ರಷ್ಟು ಮೀಸಲಾತಿ ನೀಡಬೇಕು ಎಂಬ ವಿಧೇಯಕಕ್ಕೆ ಹಲವು ಖಾಸಗಿ ಕಂಪನಿಗಳು ವಿರೋಧ ವ್ಯಕ್ತಪಡಿಸಿದ್ದು, ಇದರ ಬೆನ್ನಲ್ಲೇ ಕರ್ನಾಟಕ ಐಟಿ ಕಂಪನಿಗಳನ್ನು ತನ್ನತ್ತ ಸೆಳೆಯಲು ಆಂಧ್ರಪ್ರದೇಶ ಗಾಳ ಹಾಕಲು ಶುರು ಮಾಡಿದೆ.

ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರ ಪುತ್ರ, ಸಚಿವ ನಾರಾ ಲೋಕೇಶ್​​ ಅವರು ನಾಸ್ಕಾಮ್​​​ಗೆ ತಮ್ಮ ರಾಜ್ಯಕ್ಕೆ ಬರಲು ವಿಶೇಷ ಆಹ್ವಾನ ನೀಡಿದ್ದಾರೆ. ಕಂಪನಿಯ ಆಕ್ಷೇಪವನ್ನು ತಮ್ಮ ಸರ್ಕಾರ ಅರ್ಥ ಮಾಡಿಕೊಂಡಿದೆ. ಆಂಧ್ರದಲ್ಲಿ ಐಟಿ ಸೇವೆಗಳನ್ನು ವಿಸ್ತರಿಸಬಹುದು ಎಂದು ಕಂಪನಿಗೆ ತಿಳಿಸಿದ್ದಾರೆ.

ಕರ್ನಾಟಕ ಸರ್ಕಾರ ಪರಿಚಯಿಸಿದ ಕೈಗಾರಿಕೆಗಳ ವಿಧೇಯಕದ ಬಗ್ಗೆ ಇರುವ ಅಸಮಾಧಾನವನ್ನು ನಮ್ಮ ಸರ್ಕಾರ ಅರ್ಥಮಾಡಿಕೊಂಡಿದೆ. ಇಲ್ಲಿ ತಮ್ಮ ಐಟಿ ಸೇವೆಗಳನ್ನು ವಿಸ್ತರಿಸಬಹುದು. ರಾಜ್ಯದಲ್ಲಿ ಐಟಿ ಸೇವೆ ವಿಸ್ತರಣೆಗೆ ಹೆಚ್ಚಿನ ಅವಕಾಶಗಳಿವೆ. ಇಲ್ಲಿ ಯಾವುದೇ ನಿರ್ಬಂಧಗಳು ಮತ್ತು ನಿಯಮಗಳಿಲ್ಲ. ಮುಕ್ತವಾಗಿ ಹೂಡಿಕೆ ಮಾಡಬಹುದು. ವಿಶಾಖಪಟ್ಟಣವು ಐಟಿ, ಐಟಿ ಸೇವೆಗಳು, ಕೃತಕ ಬುದ್ಧಿಮತ್ತೆ, ಡೇಟಾ ಸೆಂಟರ್ ಕ್ಲಸ್ಟರ್​​ನಂತಹ ವ್ಯವಹಾರಗಳಿಗೆ ಅನುಕೂಲಕರವಾಗಿದೆ. ಇಲ್ಲಿಗೆ ತಮ್ಮ ವ್ಯವಹಾರಗಳನ್ನು ವರ್ಗಾಯಿಸಬಹುದು ಅಥವಾ ವಿಸ್ತರಿಸಬಹುದು ಎಂದು ಹೇಳಿದ್ದಾರೆ.

ಪ್ರಿಯಾಂಕ್ ಖರ್ಗೆ
ಖಾಸಗಿ ಕಂಪನಿಯಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕೊಡುವ ಮಸೂದೆಗೆ ತಾತ್ಕಾಲಿಕ ತಡೆ

ಎಪಿಯಲ್ಲಿ ಹೂಡಿಕೆಗೆ ಅತ್ಯುತ್ತಮ ಸೌಲಭ್ಯಗಳು, ನಿರಂತರ ವಿದ್ಯುತ್ ಮತ್ತು ಮೂಲಸೌಕರ್ಯ ಒದಗಿಸುವುದಾಗಿಯೂ ಭರವಸೆ ನೀಡಿರುವ ಸಚಿವ ಲೋಕೇಶ್, ಆಂಧ್ರ ಸರ್ಕಾರ ಯಾವುದೇ ನಿರ್ಬಂಧ ಮತ್ತು ನಿಬಂಧನೆಗಳನ್ನು ವಿಧಿಸುವುದಿಲ್ಲ. ಸರ್ಕಾರ ಖಾಸಗಿ ಕಂಪನಿಗಳಿಗೆ ಸಂಪೂರ್ಣ ಸಹಕಾರ ನೀಡಲಿದೆ. ರಾಜ್ಯದಲ್ಲಿ ಸಾಕಷ್ಟು ವೃತ್ತಿಪರ ಯುವಕರು ಮತ್ತು ಮಾನವ ಸಂಪನ್ಮೂಲವಿದೆ. ಹೂಡಿಕೆಗೆ ಅವಕಾಶ ನೀಡಲಾಗುವುದು ಎಂದು ಆಹ್ವಾನವಿತ್ತಿದ್ದಾರೆ.

ಈ ನಡುವೆ ಕರ್ನಾಟಕ ಐಟಿ ಕಂಪನಿಗಳಿಗೆ ಗಾಳ ಹಾಕಲು ಮುಂದಾಗಿರುವ ಆಂಧ್ರಪ್ರದೇಶಕ್ಕೆ ಸಚಿವ ಪ್ರಿಯಾಂಕ್ ಖರ್ಗೆಯವರು ತಿರುಗೇಟು ನೀಡಿದ್ದಾರೆ.

ನೀತಿ ಯೋಜನೆಗಳ ಕರಡು ರಚನೆಯವ್ವಿ ಉದ್ಯಮದ ಮುಖಂಡರು, ಸಲಹಾ ಸಂಸ್ಥೆಗಳು ಮತ್ತು ಒಕ್ಕೂಟಗಳೊಂದಿಗೆ ಸ್ಥಿರವಾದ ಸಂಬಂಧಗಳು ಮತ್ತು ಸಮಾಲೋಚನಾ ವಿಧಾನದಿಂದಾಗಿ ರಾಜ್ಯವು ಈ ಕ್ಷೇತ್ರದಲ್ಲಿ ಯಾವಾಗಲೂ ಉತ್ತಮವಾಗಿದೆ, ಸ್ಥಳೀಯ ಪ್ರತಿಭೆಗಳನ್ನು ಬಳಸಿಕೊಂಡು ಜಾಗತಿಕ ಉದ್ಯೋಗಿಗಳನ್ನು ಅಭಿವೃದ್ಧಿಪಡಿಸುವುದು ನಮ್ಮ ಗುರಿಯಾಗಿದೆ, ಹಾಗೆಯೇ ಜಾಗತಿಕ ಹೂಡಿಕೆಗಳನ್ನು ಉತ್ತೇಜಿಸುವುದು ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ಇದರ ಉದ್ದೇಶವಾಗಿದೆ.

ಪ್ರಿಯಾಂಕ್ ಖರ್ಗೆ
ಕನ್ನಡಿಗರಿಗೆ ಉದ್ಯೋಗ ಮೀಸಲಾತಿ: ಕೌಶಲ್ಯಾಭಿವೃದ್ಧಿಗೆ ಹೆಚ್ಚಿನ ಹಣ ವೆಚ್ಚ ಮಾಡಿ; ಉದ್ಯಮಿ ಮೋಹನ್ ದಾಸ್ ಪೈ ವಾಗ್ದಾಳಿ!

ಆಂಧ್ರಪ್ರದೇಶದಲ್ಲಿ ಹೂಡಿಕೆ ಮಾಡಿದ ಪ್ರತಿಯೊಂದು ಕಂಪನಿಯು ಆಂಧ್ರಪ್ರದೇಶದ ಅರ್ಹ, ತರಬೇತಿ ಪಡೆದ ಮತ್ತು ನುರಿತ ವ್ಯಕ್ತಿಗಳನ್ನು ನೇಮಿಸಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ನೀವು ಬಯಸುವುದಿಲ್ಲವೇ?,,. ಕಾನೂನಾತ್ಮಕ ಪರಿಶೀಲನೆಯನ್ನು ತಡೆದುಕೊಳ್ಳದೆ ಯಾವುದೇ ನಿರ್ಧಾರವನ್ನೂ ಕರ್ನಾಟಕ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.

ಇದು ನಮ್ಮ ಸರ್ಕಾರದ ಪ್ರಾಮಾಣಿಕ ಪ್ರಯತ್ನ. ಬಂಡವಾಳ ಹೂಡಿಕೆಗೆ ನಷ್ಟವಾಗಬಾರದು. ಉದ್ಯೋಗ ಸೃಷ್ಟಿಗೂ ನಷ್ಟವಾಗಬಾರದು. ಆ ರೀತಿಯಲ್ಲಿ ಸಾಧಕ ಬಾಧಕ ನೋಡಿಕೊಂಡು ತೀರ್ಮಾನ ಮಾಡುತ್ತೇವೆ. ಇದು ಕಾರ್ಮಿಕ ಇಲಾಖೆಯಿಂದ ಬಂದಿರುವ ಪ್ರಸ್ತಾವನೆ. ಫಿನ್ ಟೆಕ್, ಎಐ ಇದೆಲ್ಲದಕ್ಕೂ ನಿರ್ದಿಷ್ಟವಾದ ಕೌಶಲ್ಯ ಬೇಕಾಗುತ್ತೆ. ಕನ್ನಡಿಗರು ಕರ್ನಾಟಕಕ್ಕೆ ಸೀಮಿತವಾಗಿಲ್ಲ, ವಿಶ್ವದ‌ ಬೇರೆ ಬೇರೆ ಭಾಗಗಳಲ್ಲಿ ಇದ್ದಾರೆ. ಅದಕ್ಕೆ ತಕ್ಕಂತೆ ಕೌಶಲ್ಯತೆ ನೀಡಬೇಕಿದೆ. ಎಲ್ಲಾ ನೀತಿಗಳಿಗೂ ಪರ, ವಿರೋಧ ಇದ್ದೇ ಇರುತ್ತೆ. ಕೆಲವರು ಐಟಿ-ಬಿಟಿಗೆ ಯಾಕೆ ಅಷ್ಟೊಂದು ರಿಯಾಯಿತಿ ಕೊಡ್ತೀರಿ? ಅಂತ ಕೇಳಿದರು. ಇವತ್ತು ಎಷ್ಟು ಜನಕ್ಕೆ ಉದ್ಯೋಗ ಸಿಕ್ಕಿಲ್ಲ ಹೇಳಿ? ಎಂದು ಪ್ರಶ್ನಿಸಿದರು. ಇದೇ ವೇಳೆ ಕನ್ನಡಿಗರಿಗೆ ಮೀಸಲಾತಿ ವಿಚಾರದಲ್ಲಿ ಉದ್ಯಮಿಗಳ ಜೊತೆಗೂ ಚರ್ಚಿಸಿ ಅಂತಿಮಗೊಳಿಸಲಾಗುವುದು ಎಂದು ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com