ಬೆಳಗಾವಿಯಲ್ಲಿ 22 ಸೇತುವೆ ಮುಳುಗಡೆ: ನಾಲ್ವರ ಸಾವು

ದೂಧಗಂಗಾ ನದಿ ಮೇಲಿನ ಭೋಜ- ಕಾರದಗಾ ಸೇತುವೆ ಮೇಲೆ 16 ಅಡಿ ಅಡಿ, ಮಲ್ಲಿಕವಾಡ- ದಾನವಾಡ ಸೇತುವೆ ಮೇಲೆ 13 ಅಡಿ ಹಾಗೂ ಭೋಜ ಜನವಾಡ- ನಿಪ್ಪಾಣಿ ಕೆಳಸೇತುವೆ ಮೇಲೆ 12 ಅಡಿಗಿಂತ ಹೆಚ್ಚು ನೀರು ಹರಿಯುತ್ತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ಬೆಳಗಾವಿ: ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಬೆಳಗಾವಿ ಜಿಲ್ಲೆಯಲ್ಲಿ 22 ಸೇತುವೆಗಳು ಮುಳುಗಡೆಯಾಗಿದ್ದು, ಹಲವು ಗ್ರಾಮಗಳಿಗೆ ಸಂಪರ್ಕ ಕಡಿತಗೊಂಡಿವೆ. ಇಲ್ಲಿಯವರೆಗೆ 4 ಮಂದಿ ಬಲಿಯಾಗಿದ್ದಾರೆ.

KSNDMC ಅಂಕಿಅಂಶಗಳ ಪ್ರಕಾರ, ಬೆಳಗಾವಿ ಜಿಲ್ಲೆಯಲ್ಲಿ ಜೂನ್ 1 ರಿಂದ ಜುಲೈ 22 ರವರೆಗೆ 398 ಮಿಮೀ ಮಳೆಯಾಗಿದೆ. ಬಾರಿ ಶೇ.41ರಷ್ಟು ಮಳೆ ಹೆಚ್ಚಾಗಿದ್ದು, ಖಾನಾಪುರದಲ್ಲಿ 1,265.9 ಮಿ.ಮೀ, ಅಥಣಿಯಲ್ಲಿ 167.3 ಮಿ.ಮೀ ಮಳೆಯಾಗಿದೆ. ಮಳೆಯಿಂದ 64 ಹೆಕ್ಟೇರ್‌ಗೂ ಹೆಚ್ಚು ಕೃಷಿ ಮತ್ತು ತೋಟಗಾರಿಕೆ ಬೆಳೆಗಳು ಹಾನಿಗೀಡಾಗಿವೆ ಎಂದು ತಿಳಿದುಬಂದಿದೆ.

ಸಂಗ್ರಹ ಚಿತ್ರ
ಕರಾವಳಿ ಭಾಗದಲ್ಲಿ ಮುಂದುವರೆದ ಮಳೆ: ನಾಳೆಯವರೆಗೂ 'ರೆಡ್ ಆಲರ್ಟ್' ವಿಸ್ತರಣೆ

ಖಾನಾಪುರ, ಗೋಕಾಕ, ಮೂಡಲಗಿ, ಹುಕ್ಕೇರಿ, ಚಿಕ್ಕೋಡಿ, ನಿಪ್ಪಾಣಿ ತಾಲ್ಲೂಕುಗಳಲ್ಲಿ 22 ಸೇತುವೆ ಮುಳುಗಡೆಯಾಗಿವೆ. ದೂಧಗಂಗಾ ನದಿ ಮೇಲಿನ ಭೋಜ- ಕಾರದಗಾ ಸೇತುವೆ ಮೇಲೆ 16 ಅಡಿ ಅಡಿ, ಮಲ್ಲಿಕವಾಡ- ದಾನವಾಡ ಸೇತುವೆ ಮೇಲೆ 13 ಅಡಿ ಹಾಗೂ ಭೋಜ ಜನವಾಡ- ನಿಪ್ಪಾಣಿ ಕೆಳಸೇತುವೆ ಮೇಲೆ 12 ಅಡಿಗಿಂತ ಹೆಚ್ಚು ನೀರು ಹರಿಯುತ್ತಿದೆ.

ಚಿಕ್ಕಹಟ್ಟಿಹೊಳಿ– ಚಿಕ್ಕಮುನವಳ್ಳಿ, ಚಿಗಡೊಳ್ಳಿ– ನಲ್ಲಾನಟ್ಟಿ, ಗೋಕಾಕ– ಲೋಳಸೂರ, ಮುನ್ಯಾಳ– ಹುಣಶ್ಯಾಳ ಪಿ.ಜಿ, ಪಟಗುಂದಿ– ತಿಗಡಿ, ಸುಣಧೋಳಿ–ಮೂಡಲಗಿ, ಅವರಾದಿ– ಮಹಾಲಿಂಗಪುರ, ಉದಗಟ್ಟಿ– ವಡೇರಹಟ್ಟಿ, ಅರ್ಜುನವಾಡ– ಕೋಚರಿ, ಯರನಾಳ– ಹುಕ್ಕೇರಿ, ಕುರಣಿ– ಕೋಚರಿ, ಭೋಜ– ಕಾರದಗಾ, ಭೋಜವಾಡಿ– ನಿಪ್ಪಾಣಿ, ಮಲ್ಲಿಕವಾಡ– ದಾನವಾಡ, ಸಿದ್ನಾಳ– ಅಕ್ಕೋಳ, ಭಾರವಾಡ– ಕುನ್ನೂರ, ಭೋಜ– ಕುನ್ನೂರ, ಜತ್ರಾಟ– ಭೀವಶಿ, ಬಾವನಸೌಂದತ್ತಿ–ಮಾಂಜರಿ ಸೇತುವೆಗಳು ಮುಳುಗಿವೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com