
ಬೆಂಗಳೂರು: ಕಸ ವಿಂಗಡಣೆ ಗುತ್ತಿಗೆದಾರನೊಬ್ಬ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ ಪ್ರಕರಣಕ್ಕೆ ಸಬಂಂಧಿಸಿದಂತೆ ಆರೋಪಿಯನ್ನು ಬೇಗೂರು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
ಭಾರತದಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾದೇಶದ ಪ್ರಜೆ ಶಾಹೀನ್ ಶೇಖ್ ಎಂಬಾತನನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದು, ಬಾಲಕಿಯ ತಂದೆ ನೀಡಿದ್ದ ದೂರಿನ ಆಧಾರದ ಮೇಲೆ ಪಶ್ಚಿಮ ಬಂಗಾಳದ ನೊಯ್ಡಾ ಜಿಲ್ಲೆಯ ನಿವಾಸಿಯಾದ ಶಹೀನ್ ಹಾಗೂ ಆತನ ಪತ್ನಿ ಮೀಮ್ ರನ್ನು ಬಂಧಿಸಲಾಗಿದೆ.
ಮೇ.17ರ ರಾತ್ರಿ ಶಹೀನ್ ಪತ್ನಿ ಮೀಮ್ ಮಧ್ಯರಾತ್ರಿ 12.30ರ ಸುಮಾರಿಗೆ ಸಂತ್ರಸ್ಥ ಬಾಲಕಿಗೆ ಟೀ ಮಾಡುವಂತೆ ತಿಳಿಸಿ, ಬಾಲಕಿ ಶೆಡ್ ಒಳಗೆ ಹೋದಾಗ ಉದ್ದೇಶಪೂರ್ವಕವಾಗಿ ಬಾಗಿಲು ಲಾಕ್ ಮಾಡಿದ್ದಳು. ಈ ವೇಳೆ ಶಹೀನ್ ಆಕೆಯ ಮೇಲೆ ಅತ್ಯಾಚಾರವೆಸಗಿದ್ದ ಎಂದು ಮರುದಿನ ಪುತ್ರಿ ನಮಗೆ ಈ ಬಗ್ಗೆ ತಿಳಿಸಿದ್ದಳು ಎಂದು ಬಾಲಕಿಯ ಪೋಷಕರು ದೂರಿನಲ್ಲಿ ತಿಳಿಸಿದ್ದಾರೆು.
ಪ್ರಕರಣ ಸಂಬಂಧ ಶಾಹೀನ್ ಹಾಗೂ ಆತನ ಪತ್ನಿಯನ್ನು ಶನಿವಾರ ಬಂಧನಕ್ಕೊಳಪಡಿಸಲಾಗಿದ್ದು. ಇಬ್ಬರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಿ, 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿದುಬಂದಿದೆ.
Advertisement