ಬೆಂಗಳೂರು: ಕೇವಲ ಸಿಹಿಯಾಗಿರಬೇಕಿದ್ದ ಈ ವರ್ಷದ ಮಾವಿನ ಋತು ಹವಾಮಾನ ವೈಪರೀತ್ಯದಿಂದಾಗಿ ಸಿಹಿ-ಕಹಿಯಾಗಿ ಮಾರ್ಪಟ್ಟಿದೆ. ಈ ಸವಾಲುಗಳ ಹೊರತಾಗಿಯೂ, ನಿರ್ದಿಷ್ಟ ರೀತಿಯ ಮಾವು ಬಹಳ ಜನಪ್ರಿಯವಾಗಿದ್ದು, ಲಾಲ್‌ಬಾಗ್ ಉದ್ಯಾನದಲ್ಲಿ ನಡೆದ ಮಾವು ಮೇಳದಲ್ಲಿ ಹೆಚ್ಚಿನ ಗಮನ ಸೆಳೆದಿದೆ.
ಸ್ಥಳೀಯವಾಗಿ 'ಶುಗರ್ ಬೇಬಿ' ಎಂದು ಕರೆಯಲ್ಪಡುವ ಸಕ್ಕರೆ ಗುತ್ತಿ ಎಂಬ ಮಾವು ಈ ಋತುವಿನಲ್ಲಿ ಶೋ ಟಾಪರ್ ಆಗಿದೆ. ಚಿಕ್ಕದಾದ, ದುಂಡಗಿನ ಮತ್ತು ಹಳದಿ ಬಣ್ಣದ ಮಾವು ತಮ್ಮ ಅಸಾಮಾನ್ಯ ರುಚಿಯಿಂದಾಗಿ ಮಹಿಳೆಯರು ಮತ್ತು ಮಕ್ಕಳ ಮೆಚ್ಚಿನ ಮಾವಾಗಿದೆ ಎಂದು ಮಾವು ಮೇಳದ ಮಾರಾಟಗಾರರು ಹೇಳಿದ್ದಾರೆ.
ಟಿಎನ್ಐಇ ಜೊತೆಗೆ ಮಾತನಾಡಿದ ಮಾರಾಟಗಾರ ಸಾಮ್ರಾಟ್ ಗೌಡ, ಈ ತಳಿ ಯಾವಾಗಲೂ ಮಾರುಕಟ್ಟೆಯಲ್ಲಿದ್ದರೂ, ಈ ಋತುವಿನಲ್ಲಿ ಅದರ ಮಾರಾಟವು ತೀವ್ರ ಏರಿಕೆಯಾಗಿದೆ. ಇದಕ್ಕೆ ಪ್ರಮುಖ ಕಾರಣವೆಂದರೆ, ಈ ಸಕ್ಕರೆ ಗುಟ್ಲೆ ಮಾವಿನಹಣ್ಣುಗಳು ಅತ್ಯಂತ ಸಿಹಿಯಾಗಿರುತ್ತವೆ ಮತ್ತು ಮಕ್ಕಳು ಸುಲಭವಾಗಿ ತಿನ್ನಬಹುದು ಎನ್ನುತ್ತಾರೆ.
ಅವುಗಳನ್ನು ಕತ್ತರಿಸಿ ಅಥವಾ ಹೋಳು ಮಾಡಬೇಕಾಗಿಲ್ಲ. ಕ್ಯಾಂಡಿಯಂತೆ ತಿನ್ನಬಹುದು. ನಾವು ಅವುಗಳನ್ನು ಕೆಜಿಗೆ 180 ರೂ.ಗೆ ಮಾರಾಟ ಮಾಡುತ್ತಿದ್ದೇವೆ. ಈ ಮಾವುಗಳು ತಮಿಳುನಾಡು ಮತ್ತು ಕರ್ನಾಟಕಕ್ಕೆ ಸ್ಥಳೀಯವಾಗಿದ್ದು, ಮೇಳದಲ್ಲಿ, ಮಾರಾಟಗಾರರು ನಿಯಮಿತವಾಗಿ 80-100 ಕೆಜಿಯಷ್ಟು ಮಾರಾಟ ಮಾಡುತ್ತಾರೆ. ಈ ಮಾವು ಅನಿರೀಕ್ಷಿತ ಲಾಭವನ್ನು ತರುತ್ತಿದೆ ಎಂದರು.
ಸ್ಟಾಲ್ ವ್ಯವಸ್ಥೆಯಿಂದ ರೈತರು ಸಂತೋಷಪಡದಿದ್ದರೂ, ಮಲ್ಲಿಕಾ, ರಸಪುರಿ, ಮಾಲ್ಗೋವಾ, ದಶೇರಿ, ಕೇಸರಿ, ಇಮಾಮ್ ಪಸಂದ್ ಮತ್ತು ಇನ್ನಿತರ ಜನಪ್ರಿಯ ತಳಿಗಳನ್ನು ಖರೀದಿಸಲು ಜನರು ವಾರಾಂತ್ಯದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಬರುತ್ತಿದ್ದಾರೆ.
ಈ ವರ್ಷ ಮೇಳದಲ್ಲಿ ಮತ್ತೊಂದು ಆಕರ್ಷಣೆಯೆಂದರೆ ಕರಿ ಇಶಾದ್, ಈಗ ಜಿಐ ಟ್ಯಾಗ್ ಮಾಡಲಾದ ಮಾವು ಕೆಜಿಗೆ 300 ರೂ.ಗೆ ಮಾರಾಟವಾಗುತ್ತಿದೆ ಮತ್ತು ಗ್ರಾಹಕರ ಚೀಲ ಸೇರುತ್ತಿದೆ. ಗೋಕರ್ಣದ ಗಣೇಶ ಗುನಗಾ ಅವರು ಕಳೆದ 25 ವರ್ಷಗಳಿಂದ ಈ ತಳಿಯ ಮಾರಾಟ ಮಾಡುತ್ತಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ವ್ಯಾಪಾರ ಉತ್ತಮವಾಗಿದೆ. ತಲಾ 10 ಕೆಜಿ ತೂಕದ ಬುಟ್ಟಿಯನ್ನಾಗಿ ಮಾಡಲಾಗುತ್ತದೆ. ಇದುವರೆಗೆ 300 ಬುಟ್ಟಿಗಳನ್ನು ಮಾರಾಟ ಮಾಡಿರುವುದಾಗಿ ತಿಳಿಸುತ್ತಾರೆ.
ಹವಾಮಾನ ವೈಪರೀತ್ಯದ ಹೊಡೆತ
ಕೆಲವು ಮಾರಾಟಗಾರರು ಈ ಋತುವಿನಲ್ಲಿ ಲಾಭ ಅಥವಾ ನಷ್ಟವನ್ನು ಮಾಡುತ್ತಿಲ್ಲ. ಶೇ 50-70ರಷ್ಟು ಇಳುವರಿ ಕಡಿಮೆಯಾಗಿದೆ ಎಂದು ಕೋಲಾರದ ಶ್ರೀನಿವಾಸಪುರದ ರೈತ ನವ್ಯಶ್ರೀ ವಿವರಿಸಿದರು. 'ಬರದಿಂದಾಗಿ ಇಳುವರಿ ಕುಂಠಿತವಾಗಿದೆ. ಓರ್ವ ಆಳಿಗೆ ದಿನಕ್ಕೆ 700 ರೂ. ಖರ್ಚು ಮಾಡುತ್ತಿದ್ದು, ಅವರು ಕೀಳುವ ಬಹುತೇಕ ಮಾವಿನ ಕಾಯಿಗಳು ಹಾಳಾಗಿವೆ ಮತ್ತು ಬಿಸಿಲಿಗೆ ಸುಟ್ಟು ಹೋಗಿರುತ್ತವೆ. ಸಾಗಣೆ ಸಮಯದಲ್ಲಿಯೂ ಹಲವಾರು ಟನ್‌ಗಳಷ್ಟು ಮಿತಿಮೀರಿದ ಮಾವಿನಹಣ್ಣುಗಳು ವ್ಯರ್ಥವಾಗುತ್ತಿವೆ' ಎಂದು ಅವರು ಹೇಳಿದರು.
ಮತ್ತೊಬ್ಬ ಮಾರಾಟಗಾರ ಕಾರ್ತಿಕ್ ಎಂಎನ್, ತಡವಾದ ಸೀಸನ್ ಮೇಳಕ್ಕೆ ಹೆಚ್ಚಿನ ಜನರನ್ನು ಕರೆತರುತ್ತಿದೆ. ಆದಾಗ್ಯೂ, ಅನೇಕರು ಚೌಕಾಸಿ ಮಾಡುತ್ತಾರೆ. ಕಡಿಮೆ ಇಳುವರಿಯಿಂದಾಗಿ, ನಾವು ಮಾವಿನ ಹಣ್ಣನ್ನು ಸ್ವಲ್ಪ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದೇವೆ. ಆದರೆ, ಗ್ರಾಹಕರು ಸ್ವಲ್ಪಮಟ್ಟಿಗೆ ಚೌಕಾಸಿ ಮಾಡುತ್ತಾರೆ. ಈ ದರದಲ್ಲಿ, ನಾವು ನಮ್ಮ ಒಟ್ಟು ವೆಚ್ಚವನ್ನು ಸಹ ಪಡೆಯಲು ಆಗುವುದಿಲ್ಲ ಎನ್ನುತ್ತಾರೆ.
Advertisement